IND vs ENG: ಇಂಗ್ಲೆಂಡ್ ತಂಡದ ಚಿಂತೆ ಹೆಚ್ಚಿಸಿದ 4 ಗಂಟೆ 16 ನಿಮಿಷಗಳು..!

|

Updated on: Jun 25, 2024 | 8:13 PM

T20 World Cup 2024: ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿ ಮಾಡಲಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಜೂನ್ 29 ರಂದು ಫೈನಲ್ ಪಂದ್ಯ ನಡೆಯುತ್ತಿರುವುದು. ಅಂದರೆ ಜೂನ್ 27 ರಂದು ನಡೆಯುವ ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿ ಮಾಡಿದರೆ, ಜೂನ್ 28 ರಂದು ಆಡಬೇಕಾಗುತ್ತದೆ. ಇದರಿಂದ 2ನೇ ಸೆಮಿಫೈನಲ್ ಆಡುವ ತಂಡ 24 ಗಂಟೆಯೊಳಗೆ, ಅಂದರೆ ಜೂನ್ 29 ರಂದು ಫೈನಲ್​ಗೂ ಸಜ್ಜಾಗಬೇಕಾಗುತ್ತದೆ. ಹೀಗಾಗಿ ದ್ವಿತೀಯ ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನದ ಬದಲು ಹೆಚ್ಚುವರಿ 250 ನಿಮಿಷಗಳನ್ನು ನೀಡಲಾಗಿದೆ.

1 / 7
T20 World Cup 2024: ಟಿ20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿದೆ. ವೆಸ್ಟ್ ಇಂಡೀಸ್​ನಲ್ಲಿ ಜೂನ್ 26 ರಂದು (ಭಾರತದಲ್ಲಿ ಜೂನ್ 27) ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಜೂನ್ 27 ರಂದು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಲಿದೆ.

2 / 7
ಅಫ್ಘಾನಿಸ್ತಾನ್ ಮತ್ತು ಸೌತ್ ಆಫ್ರಿಕಾ ನಡುವಣ ಪಂದ್ಯವು ಟ್ರಿನಿಡಾಡ್- ಟೊಬಾಗೊದಲ್ಲಿ ನಡೆದರೆ, ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯಕ್ಕೆ ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಆದರೆ ಇಂಡೊ-ಇಂಗ್ಲೆಂಡ್ ನಡುವಣ ಪಂದ್ಯಕ್ಕೆ ಮೀಸಲು ದಿನವಿಲ್ಲ ಎಂಬುದೇ ಅಚ್ಚರಿ.

3 / 7
ಅಂದರೆ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಜೂನ್ 27 ರಂದು ಮೀಸಲು ದಿನ ನಿಗದಿ ಮಾಡಲಾಗಿದೆ. ಆದರೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯಕ್ಕೆ ಮೀಸಲು ದಿನ ನಿಗದಿ ಮಾಡಲಾಗಿಲ್ಲ. ಬದಲಾಗಿ ಹೆಚ್ಚುವರಿ 250 ನಿಮಿಷಗಳನ್ನು ನೀಡಲಾಗಿದೆ. ಈ ಹೆಚ್ಚುವರಿ ನಿಮಿಷಗಳೇ ಈಗ ಇಂಗ್ಲೆಂಡ್ ತಂಡದ ಚಿಂತೆಗೆ ಕಾರಣವಾಗಿದೆ.

4 / 7
ಏಕೆಂದರೆ ಜೂನ್ 27 ರಂದು ಗಯಾನಾದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ಹೇಳಿವೆ. ಅದರಲ್ಲೂ ಅಕ್ಯುವೆದರ್ ರಿಪೋರ್ಟ್​ ಶೇ.60 ರಿಂದ ಶೇ.80 ರಷ್ಟು ಮಳೆಯಾಗುವ ಸಾಧ್ಯತೆಯಿದೆ ತಿಳಿಸಿದೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡುವುದು ಬಹುತೇಕ ಖಚಿತ ಎನ್ನಬಹುದು. ಇನ್ನು ಮಳೆಯಿಂದ ಪಂದ್ಯ ವಿಳಂಬವಾದರೆ, ಹೆಚ್ಚುವರಿ 250 ನಿಮಿಷಗಳನ್ನು ಬಳಸಲಾಗುತ್ತದೆ.

5 / 7
ಇಲ್ಲಿ ಹೆಚ್ಚುವರಿ 250 ನಿಮಿಷಗಳೆಂದರೆ 4 ಗಂಟೆ 16 ನಿಮಿಷಗಳು. ಅಂದರೆ ಪಂದ್ಯಕ್ಕೆ ನಿಗದಿ ಮಾಡಲಾದ 3 ಗಂಟೆಯೊಳಗೆ ಮ್ಯಾಚ್ ನಡೆಸಲು ಸಾಧ್ಯವಾಗದಿದ್ದರೆ, ಹೆಚ್ಚುವರಿ 4 ಗಂಟೆ 16 ನಿಮಿಷಗಳವರೆಗೆ ಕಾಯಲಾಗುತ್ತದೆ. ಇದಾಗ್ಯೂ ಪಂದ್ಯ ನಡೆಸುವಂತಹ ಪರಿಸ್ಥಿತಿ ಇರದಿದ್ದರೆ ಮಾತ್ರ ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯವನ್ನು ರದ್ದು ಮಾಡಲಾಗುತ್ತದೆ.

6 / 7
ಇತ್ತ ಮಳೆಯಿಂದಾಗಿ ಪಂದ್ಯ ರದ್ದಾದರೆ ಅದು ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್. ಏಕೆಂದರೆ ಸೆಮಿಫೈನಲ್ ಪಂದ್ಯ ರದ್ದಾದರೆ, ಸೂಪರ್-8 ಸುತ್ತಿನ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡ ಫೈನಲ್​ಗೆ ಪ್ರವೇಶಿಸಲಿದೆ. ಇಲ್ಲಿ ಭಾರತ ತಂಡವು ಗ್ರೂಪ್-1 ರಲ್ಲಿ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ಗ್ರೂಪ್-2 ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಹೀಗಾಗಿ ಮಳೆಯಿಂದಾಗಿ ಪಂದ್ಯ ರದ್ದಾದರೆ ಟೀಮ್ ಇಂಡಿಯಾ ಫೈನಲ್​ಗೆ ಪ್ರವೇಶಿಸುವುದು ಖಚಿತ.

7 / 7
ಹೀಗಾಗಿ ಮಳೆ ಬಂದರೆ ಟೀಮ್ ಇಂಡಿಯಾಗೆ ಯಾವುದೇ ಚಿಂತೆಯಿಲ್ಲ. ಅತ್ತ ಮೀಸಲು ದಿನದಾಟವಿಲ್ಲದ ಕಾರಣ, ಮಳೆ ಬಂದರೆ ಹೆಚ್ಚುವರಿ 250 ನಿಮಿಷಗಳಲ್ಲಿ ಪಂದ್ಯ ನಡೆಯುವುದನ್ನು ಇಂಗ್ಲೆಂಡ್ ಎದುರು ನೋಡಬೇಕು. ಇತ್ತ ಹವಾಮಾನ ವರದಿಗಳು ಮಳೆ ಬರುವ ಸಾಧ್ಯತೆಯನ್ನು ಒತ್ತಿ ಹೇಳಿದೆ. ಇದುವೇ ಈಗ ಇಂಗ್ಲೆಂಡ್ ತಂಡದ ಚಿಂತೆಯನ್ನು ಹೆಚ್ಚಿಸಿದೆ.