ICC T20I rankings: ಟಿ20 ರ‍್ಯಾಂಕಿಂಗ್​ನಲ್ಲಿ ಸೂರ್ಯನ ಅಧಿಪತ್ಯ ಅಂತ್ಯ..! ಅಗ್ರಸ್ಥಾನಕ್ಕೇರಿದ್ಯಾರು ಗೊತ್ತಾ?

ICC T20I rankings: 9ನೇ ಆವೃತ್ತಿಯ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಗಳಿಗೂ ಮುನ್ನ ಐಸಿಸಿ ತನ್ನ ನೂತನ ಟಿ20 ಬ್ಯಾಟ್ಸ್‌ಮನ್​ಗಳ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ. ಈ ಬಾರಿಯ ಶ್ರೇಯಾಂಕದಲ್ಲಿ ಭಾರಿ ಏರಿಳಿತಗಳಿವೆ. ವಿಶೇಷವೆಂದರೆ ಬಹುಕಾಲ ನಂಬರ್ ಒನ್ ಸ್ಥಾನದಲ್ಲಿದ್ದ ಭಾರತದ ಸೂರ್ಯಕುಮಾರ್ ಯಾದವ್ ಈಗ ಒಂದು ಸ್ಥಾನ ಕೆಳಗಿಳಿದಿದ್ದಾರೆ.

|

Updated on: Jun 26, 2024 | 2:35 PM

9ನೇ ಆವೃತ್ತಿಯ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಗಳಿಗೂ ಮುನ್ನ ಐಸಿಸಿ ತನ್ನ ನೂತನ ಟಿ20 ಬ್ಯಾಟ್ಸ್‌ಮನ್​ಗಳ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ. ಈ ಬಾರಿಯ ಶ್ರೇಯಾಂಕದಲ್ಲಿ ಭಾರಿ ಏರಿಳಿತಗಳಿವೆ. ವಿಶೇಷವೆಂದರೆ ಬಹುಕಾಲ ನಂಬರ್ ಒನ್ ಸ್ಥಾನದಲ್ಲಿದ್ದ ಭಾರತದ ಸೂರ್ಯಕುಮಾರ್ ಯಾದವ್ ಈಗ ಒಂದು ಸ್ಥಾನ  ಕೆಳಗಿಳಿದಿದ್ದಾರೆ.

1 / 8
ಇತ್ತ ಸೂರ್ಯಕುಮಾರ್ ಸ್ಥಾನವನ್ನು ಕಸಿದುಕೊಂಡಿರುವ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಟಿ20ಯಲ್ಲಿ ನಂಬರ್ ಒನ್ ಬ್ಯಾಟ್ಸ್​ಮನ್ ಎನಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸೂರ್ಯಕುಮಾರ್ ಅಲ್ಲದೆ, ಈ ಬಾರಿಯ ಶ್ರೇಯಾಂಕದಲ್ಲಿ ಇಂಗ್ಲೆಂಡ್‌ನ ಫಿಲ್ ಸಾಲ್ಟ್, ಪಾಕಿಸ್ತಾನದ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ಕೂಡ ಕುಸಿತಕಂಡಿದ್ದಾರೆ.

2 / 8
ನೂತನ ಶ್ರೇಯಾಂಕದಲ್ಲಿ ಬರೋಬ್ಬರಿ 4 ಸ್ಥಾನ ಮೇಲೇರಿರುವ  ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ 844 ರೇಟಿಂಗ್ ಪಾಯಿಂಟ್​ಗಳೊಂದಿಗೆ ಸೂರ್ಯಕುಮಾರ್ ಯಾದವ್​ರನ್ನು ಹಿಂದಿಕ್ಕಿ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದಾರೆ. ವಾಸ್ತವವಾಗಿ ಟ್ರಾವಿಸ್ ಹೆಡ್ ಇತ್ತೀಚಿನವರೆಗೂ ಟಾಪ್ 10 ರೊಳಗೆ ಇರಲಿಲ್ಲ, ಆದರೆ ಈಗ ಅವರು ಅಗ್ರಸ್ಥಾನಕ್ಕೆ ತಲುಪಿದ್ದಾರೆ.

3 / 8
ಇತ್ತ ಎರಡನೇ ಸ್ಥಾನಕ್ಕೆ ಕುಸಿದಿರುವ ಸೂರ್ಯಕುಮಾರ್ ಯಾದವ್ ಸದ್ಯ  842 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ. ಅಂದರೆ ಮೊದಲ ಸ್ಥಾನದಲ್ಲಿರುವ ಟ್ರಾವಿಸ್​ ಹೆಡ್​ಗಿಂತ ಸೂರ್ಯಕುಮಾರ್ ಕೇವಲ ಎರಡು ರೇಟಿಂಗ್ ಪಾಯಿಂಟ್‌ಗಳನ್ನು ಕಡಿಮೆ ಹೊಂದಿದ್ದಾರೆ. ಇದರರ್ಥ ಶೀಘ್ರದಲ್ಲೇ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ನಂ.1 ಸ್ಥಾನಕ್ಕೇರುವ ಅವಕಾಶ ಹೊಂದಿದ್ದಾರೆ.

4 / 8
ಇಂಗ್ಲೆಂಡ್​ನ ಫಿಲ್ ಸಾಲ್ಟ್ ಕೂಡ ಒಂದು ಸ್ಥಾನ ಕಸಿದಿದ್ದು, 816 ರೇಟಿಂಗ್​ನೊಂದಿಗೆ ಅವರಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಆಝಂ ಕೂಡ ಒಂದು ಸ್ಥಾನ ಕುಸಿದಿದ್ದು, 755 ರೇಟಿಂಗ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

5 / 8
ಮತ್ತೊಬ್ಬ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್ ಈಗ 746 ರೇಟಿಂಗ್‌ನೊಂದಿಗೆ ಒಂದು ಸ್ಥಾನ ಕುಸಿದಿದ್ದು, 5 ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ 716 ರೇಟಿಂಗ್‌ನೊಂದಿಗೆ 6ನೇ ಸ್ಥಾನದಲ್ಲಿದ್ದರೆ, ಭಾರತದ ಯಶಸ್ವಿ ಜೈಸ್ವಾಲ್ 672 ರೇಟಿಂಗ್ ಹೊಂದಿದ್ದು ಏಳನೇ ಸ್ಥಾನದಲ್ಲಿದ್ದಾರೆ.

6 / 8
ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ 659 ರೇಟಿಂಗ್‌ನೊಂದಿಗೆ ಎಂಟನೇ ಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್‌ನ ಬ್ರೆಂಡನ್ ಕಿಂಗ್ 656 ರೇಟಿಂಗ್‌ನೊಂದಿಗೆ 9 ನೇ ಸ್ಥಾನದಲ್ಲಿದ್ದಾರೆ. ಏತನ್ಮಧ್ಯೆ, ವೆಸ್ಟ್ ಇಂಡೀಸ್‌ನ ಜಾನ್ಸನ್ ಚಾರ್ಲ್ಸ್ ಏಕಕಾಲದಲ್ಲಿ 4 ಸ್ಥಾನ ಜಿಗಿಯುವಲ್ಲಿ ಯಶಸ್ವಿಯಾಗಿದ್ದು, ಅವರು ಈಗ 655 ರೇಟಿಂಗ್‌ನೊಂದಿಗೆ 10 ನೇ ಸ್ಥಾನ ಪಡೆದುಕೊಂಡಿದ್ದಾರೆ.

7 / 8
ಅಫ್ಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ಏಕಕಾಲದಲ್ಲಿ 5 ಸ್ಥಾನ ಜಿಗಿದು, 648 ರೇಟಿಂಗ್‌ನೊಂದಿಗೆ 11 ನೇ ಸ್ಥಾನವನ್ನು ತಲುಪಿದ್ದಾರೆ.

8 / 8
Follow us
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್

ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್

ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ

ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?

ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ

ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ

ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು

ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್

ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್