T20 World Cup 2024: ಐಪಿಎಲ್‌ನಲ್ಲಿದ್ದ ಈ 4 ನಿಯಮಗಳನ್ನು ಟಿ20 ವಿಶ್ವಕಪ್‌ನಲ್ಲಿ ಬಳಸುವುದಿಲ್ಲ
T20 World Cup 2024: ಈ ಬಾರಿಯ ಐಪಿಎಲ್ ನಿರೀಕ್ಷೆಗೂ ಮೀರಿದ ಯಶಸ್ಸು ಕಾಣಲು ಇದರಲ್ಲಿ ಬಳಸಿದ್ದ ನಿಯಮಗಳು ಕೂಡ ಕಾರಣವಾಗಿದ್ದವು. ಆದರೆ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಈ ನಿಯಮಗಳ ಬಳಕೆಗೆ ಮಾನ್ಯತೆ ಇರುವುದಿಲ್ಲ. ಅಂತಹ 4 ನಿಯಮಗಳು ಯಾವುವು ಎಂಬುದರ ವಿವರ ಇಲ್ಲಿದೆ.
1 / 6
17ನೇ ಆವೃತ್ತಿಯ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಕೆಕೆಆರ್ 3ನೇ ಬಾರಿಗೆ ಚಾಂಪಿಯನ್ ಆಗುವ ಮೂಲಕ ಮಿಲಿಯನ್ ಡಾಲರ್ ಟೂರ್ನಿಗೆ ತೆರೆ ಬಿದ್ದಿದೆ. ಇದೀಗ ಜೂನ್ 2 ರಿಂದ ಮಿನಿ ವಿಶ್ವಕಪ್ ಸಮರ ಅಮೆರಿಕಾ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಅರಂಭವಾಗುತ್ತಿದೆ.
2 / 6
ಇಷ್ಟು ದಿನ ಐಪಿಎಲ್ ಜ್ವರವನ್ನು ಮೈಗೇರಿಸಿಕೊಂಡಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಮುಂದಿನ ಒಂದು ತಿಂಗಳು ಟಿ20 ವಿಶ್ವಕಪ್ ಬರಪೂರ ಮನರಂಜನೆ ನೀಡಲಿದೆ. ಈ ಬಾರಿಯ ಐಪಿಎಲ್ ನಿರೀಕ್ಷೆಗೂ ಮೀರಿದ ಯಶಸ್ಸು ಕಾಣಲು ಇದರಲ್ಲಿ ಬಳಸಿದ್ದ ನಿಯಮಗಳು ಕೂಡ ಕಾರಣವಾಗಿದ್ದವು. ಆದರೆ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಈ ನಿಯಮಗಳ ಬಳಕೆಗೆ ಮಾನ್ಯತೆ ಇರುವುದಿಲ್ಲ. ಅಂತಹ 4 ನಿಯಮಗಳು ಯಾವುವು ಎಂಬುದರ ವಿವರ ಇಲ್ಲಿದೆ.
3 / 6
ಇಂಪ್ಯಾಕ್ಟ್ ಪ್ಲೇಯರ್ ನಿಯಮ: ಐಪಿಎಲ್‌ನಲ್ಲಿ ರನ್ ಮಳೆ ಹರಿಯಲು ಪ್ರಮುಖ ಕಾರಣವೇ ಈ ಇಂಪ್ಯಾಕ್ಟ್ ಪ್ಲೇಯರ್ ನಿಯಮ. ಈ ನಿಯಮದಿಂದಾಗಿ ಪ್ರತಿ ತಂಡವೂ ಒಬ್ಬ ಬ್ಯಾಟರ್ನನ್ನು ಹೆಚ್ಚುವರಿಯಾಗಿ ಕಣಕ್ಕಿಳಿಸುವ ಅವಕಾಶ ಹೊಂದಿತ್ತು. ಆದರೆ ಟಿ20 ವಿಶ್ವಕಪ್‌ನಲ್ಲಿ ಈ ನಿಯಮವನ್ನು ಬಳಸಲಾಗುವುದಿಲ್ಲ. ಹೀಗಾಗಿ ಟಾಸ್ ವೇಳೆ ನಾಯಕ ನೀಡಿದ 11 ಆಟಗಾರರ ಪಟ್ಟಿಯೇ ಪಂದ್ಯದಲ್ಲಿ ಆಡಬೇಕಾಗುತ್ತದೆ.
4 / 6
ನೋ ಬಾಲ್, ವೈಡ್‌ಗೆ ಡಿಆರ್‌ಎಸ್ ಇಲ್ಲ: ಐಪಿಎಲ್‌ನಲ್ಲಿ ಪಂದ್ಯದ ವೇಳೆ ಅಂಪೈರ್ಗಳು ನೀಡಿದ ವೈಡ್ ಬಾಲ್ ಮತ್ತು ನೋ ಬಾಲ್‌ಗಳಿಗೆ ಡಿಆರ್‌ಎಸ್ ತೆಗೆದುಕೊಳ್ಳುವ ಅವಕಾಶವಿತ್ತು. ಆದರೆ ಟಿ20 ವಿಶ್ವಕಪ್‌ನಲ್ಲಿ ಈ ನಿಯಮವಿರುವುದಿಲ್ಲ. ಅಲ್ಲಿ ಆಟಗಾರರು ವೈಡ್ ಮತ್ತು ನೋ ಬಾಲ್‌ಗಳಿಗೆ ಡಿಆರ್‌ಎಸ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
5 / 6
ಓವರ್ಗೆ ಒಂದು ಬೌನ್ಸರ್ ಮಾತ್ರ: ಐಪಿಎಲ್ ಪಂದ್ಯಗಳಲ್ಲಿ, ಯಾವುದೇ ಬೌಲರ್ ಒಂದು ಓವರ್‌ನಲ್ಲಿ ಎರಡು ಬೌನ್ಸರ್‌ಗಳನ್ನು ಬೌಲ್ ಮಾಡಬಹುದಾಗಿತ್ತು. ಆದರೆ ಟಿ20 ವಿಶ್ವಕಪ್‌ನಲ್ಲಿ ಒಂದು ಓವರ್‌ನಲ್ಲಿ ಒಂದು ಬೌನ್ಸರ್ ಅನ್ನು ಮಾತ್ರ ಎಸೆಯಬಹುದು. ಎರಡನೇ ಬೌನ್ಸರ್ ಎಸೆದರೆ ಅದನ್ನು ನೋ ಬಾಲ್ ಅಥವಾ ವೈಡ್ ಎಂದು ಪರಿಗಣಿಸಲಾಗುತ್ತದೆ.
6 / 6
ಸ್ಟ್ರಾಟೆಜಿಕ್ ಟೈಮ್ ಔಟ್ ಇರುವುದಿಲ್ಲ: ಐಪಿಎಲ್‌ನಲ್ಲಿ, ಇನ್ನಿಂಗ್ಸ್‌ವೊಂದರಲ್ಲಿ ತಲಾ 2 ಬಾರಿ 2.30 ನಿಮಿಷಗಳ ಕಾಲ ಸ್ಟ್ರಾಟೆಜಿಕ್ ಟೈಮ್ ಔಟ್ ನಿಯಮವನ್ನು ಬಳಸಬಹುದಾಗಿತ್ತು. ಅಂದರೆ ಈ ವಿರಾಮದ ಅವಧಿಯಲ್ಲಿ ತಂಡಗಳು ಪಂದ್ಯಕ್ಕನುಗುಣವಾಗಿ ತಮ್ಮ ಆಟವನ್ನು ಬದಲಿಸುವ ಚಿಂತನೆ ನಡೆಸಬಹುದಿತ್ತು. ಆದರೆ ಟಿ20 ವಿಶ್ವಕಪ್‌ನಲ್ಲಿ ಈ ನಿಯಮವನ್ನು ಬಳಸಲಾಗುವುದಿಲ್ಲ.