T20 World Cup 2024: ಈ ಐವರಿಗೆ ಭಾರತ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಡೌಟ್
T20 World Cup 2024: ಇದುವರೆಗೆ ನಡೆದಿರುವ ಪಂದ್ಯಗಳಲ್ಲಿ ಯಾವ ಆಟಗಾರ ಉತ್ತಮ ಪ್ರದರ್ಶನ ನೀಡಿದ್ದಾನೋ ಅವನಿಗೆ ಟೀಂ ಇಂಡಿಯಾ ಕದ ತೆರೆಯಲ್ಲಿದೆ. ಹಾಗೆಯೇ ಯಾರು ಕಳಪೆ ಪ್ರದರ್ಶನ ನೀಡಿದ್ದಾರೋ ಅವರು ಟೀಂ ಇಂಡಿಯಾದಿಂದ ಹೊರಬೀಳಲಿದ್ದಾರೆ. ಅವರಲ್ಲಿ ಇದುವರೆಗೆ ಕಳಪೆ ಪ್ರದರ್ಶನ ನೀಡಿರುವ ಈ ಐವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ.
1 / 8
17ನೇ ಆವೃತ್ತಿಯ ಐಪಿಎಲ್ ಟೀಂ ಇಂಡಿಯಾ ಹಾಗೂ ಟೀಂ ಇಂಡಿಯಾ ಆಟಗಾರರಿಗೆ ಬಹಳ ಮುಖ್ಯವಾಗಿದೆ. ಏಕೆಂದರೆ ಇದೇ ಜೂನ್ನಲ್ಲಿ ಟಿ20 ವಿಶ್ವಕಪ್ ನಡೆಯುತ್ತಿರುವುದರಿಂದ ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಮಿಂಚುವ ಭಾರತದ ಆಟಗಾರರಿಗೆ ಟೀಂ ಇಂಡಿಯಾದ ಕದ ತೆರೆಯಲ್ಲಿದೆ.
2 / 8
ಇದುವರೆಗೆ ನಡೆದಿರುವ ಪಂದ್ಯಗಳಲ್ಲಿ ಯಾವ ಆಟಗಾರ ಉತ್ತಮ ಪ್ರದರ್ಶನ ನೀಡಿದ್ದಾನೋ ಅವನಿಗೆ ಟೀಂ ಇಂಡಿಯಾ ಕದ ತೆರೆಯಲ್ಲಿದೆ. ಹಾಗೆಯೇ ಯಾರು ಕಳಪೆ ಪ್ರದರ್ಶನ ನೀಡಿದ್ದಾರೋ ಅವರು ಟೀಂ ಇಂಡಿಯಾದಿಂದ ಹೊರಬೀಳಲಿದ್ದಾರೆ. ಅವರಲ್ಲಿ ಇದುವರೆಗೆ ಕಳಪೆ ಪ್ರದರ್ಶನ ನೀಡಿರುವ ಈ ಐವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ.
3 / 8
ರವಿಚಂದ್ರನ್ ಅಶ್ವಿನ್: ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಅಶ್ವಿನ್ ಇದುವರೆಗೆ ಆಡಿದ 6 ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಮಾತ್ರ ಪಡೆದಿದ್ದಾರೆ. ಹೀಗಾಗಿ ಅಶ್ವಿನ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಕಷ್ಟ.
4 / 8
ಯಶಸ್ವಿ ಜೈಸ್ವಾಲ್: ಈ ಹೆಸರು ಆಘಾತಕಾರಿಯಾಗಿರಬಹುದು. ಐಪಿಎಲ್ 2024 ಪ್ರಾರಂಭವಾಗುವ ಮೊದಲು, ಜೈಸ್ವಾಲ್ ತಂಡದಲ್ಲಿ ಆಯ್ಕೆಯಾಗಲು ಪ್ರಬಲ ಸ್ಪರ್ಧಿಯಾಗಿದ್ದರು. ಆದರೆ ಐಪಿಎಲ್ 2024 ರಲ್ಲಿ ಜೈಸ್ವಾಲ್ ಅವರ ಪ್ರದರ್ಶನವನ್ನು ನೋಡಿದ ನಂತರ, ಆಯ್ಕೆದಾರರು ಈಗ ಅವರಿಗೆ ಆದ್ಯತೆ ನೀಡುವ ಸಾಧ್ಯತೆಯಿಲ್ಲ.
5 / 8
ಐಪಿಎಲ್ 2024 ರಲ್ಲಿ ಆಡಿರುವ 7 ಇನ್ನಿಂಗ್ಸ್‌ಗಳಲ್ಲಿ ಜೈಸ್ವಾಲ್ ಒಂದೇ ಒಂದು ಅರ್ಧ ಶತಕ ಸಿಡಿಸಿಲ್ಲ. ಇದುವರೆಗೆ ಜೈಸ್ವಾಲ್ 121 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದಾರೆ. ಈ ಕೆಟ್ಟ ಅಂಕಿಅಂಶಗಳ ಹೊರತಾಗಿ, ವಿರಾಟ್‌ರನ್ನು ಆರಂಭಿಕರಾಗಿ ಕಣಕ್ಕಿಳಿಸುವ ತವಕದಲ್ಲಿರುವ ತಂಡದ ಮ್ಯಾನೇಜ್‌ಮೆಂಟ್‌ನ ಆಲೋಚನೆಯೂ ಜೈಸ್ವಾಲ್ ಹಾದಿಯನ್ನು ಕಷ್ಟಕರವಾಗಿಸಿದೆ.
6 / 8
ಇಶಾನ್ ಕಿಶನ್: ಐಪಿಎಲ್‌ನಲ್ಲಿ ಇದುವರೆಗೆ ಆಡಿರುವ ಪಂದ್ಯಗಳಲ್ಲಿ ಇಶಾನ್ ಅವರ ಪ್ರದರ್ಶನದಲ್ಲಿ ಸ್ಥಿರತೆ ಕಂಡುಬಂದಿಲ್ಲ. ಆಡಿರುವ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 1 ಅರ್ಧಶತಕ ಸಹಿತ ಕಿಶನ್ 184 ರನ್ ದಾಖಲಿಸಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ರಿಷಭ್ ಪಂತ್ ಫಿಟ್ ಆಗಿದ್ದು, ಫಾರ್ಮ್ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಇಶಾನ್ ಕಿಶನ್ ಆಯ್ಕೆಯೂ ಕಷ್ಟ ಎನಿಸುತ್ತಿದೆ.
7 / 8
ಶ್ರೇಯಸ್ ಅಯ್ಯರ್: ಕೆಕೆಆರ್ ನಾಯಕರಾಗಿರುವ ಅಯ್ಯರ್ ಅವರು ಐಪಿಎಲ್ 2024 ರಲ್ಲಿ ಆಡಿದ ಮೊದಲ 6 ಇನ್ನಿಂಗ್ಸ್‌ಗಳಲ್ಲಿ ವಿಶೇಷವಾದ ಏನನ್ನೂ ಮಾಡಲು ಸಾಧ್ಯವಾಗಿಲ್ಲ. ಇದುವರೆಗೆ ಕೇವಲ 140 ರನ್ ಬಾರಿಸಿರುವ ಅಯ್ಯರ್ ಅವರ ಕಳಪೆ ಫಾರ್ಮ್ ಅವರ ಆಯ್ಕೆಗೆ ಅಡ್ಡಿಯಾಗುವ ಸಾಧ್ಯತೆಗಳಿವೆ.
8 / 8
ಜಿತೇಶ್ ಶರ್ಮಾ: ಈ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ಗೆ ಭಾರತ ತಂಡದ ಮ್ಯಾನೇಜ್‌ಮೆಂಟ್ ಬೆಂಬಲ ನೀಡಿರಬಹುದು. ಆದರೆ, ರಿಷಬ್ ಪಂತ್ ಮರಳಿದ ನಂತರ ಅವರ ಆಯ್ಕೆಯ ನಿರೀಕ್ಷೆ ಕಡಿಮೆಯಾಗಿದೆ. ಅದಕ್ಕೂ ಮಿಗಿಲಾಗಿ ಸಂಜು ಸ್ಯಾಮ್ಸನ್ ಅವರ ದಿಟ್ಟ ಪ್ರದರ್ಶನವೂ ಜಿತೇಶ್ ಆಟಕ್ಕೆ ಮಸುಕಾಗುತ್ತಿದೆ. ಜಿತೇಶ್ ಶರ್ಮಾ ಐಪಿಎಲ್ 2024 ರ ಮೊದಲ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 106 ರನ್ ಗಳಿಸಿರುವುದು ಅವರ ಆಯ್ಕೆಗೆ ಹಿನ್ನಡೆಯನ್ನುಂಟು ಮಾಡಿದೆ.