
ಟಿ20 ಕ್ರಿಕೆಟ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಟೀಮ್ ಇಂಡಿಯಾದ ವಿಶ್ವ ದಾಖಲೆ ಮುರಿಯುವ ಮೂಲಕ ಎಂಬುದು ವಿಶೇಷ. ಅಂದರೆ ಟ್ವೆಂಟಿ ಟ್ವೆಂಟಿ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ 250 ಕ್ಕಿಂತ ಸ್ಕೋರ್ಗಳಿಸಿದ ವಿಶ್ವ ದಾಖಲೆ ಭಾರತ ತಂಡದ ಹೆಸರಿನಲ್ಲಿತ್ತು.

ಈ ದಾಖಲೆಯನ್ನು ಸನ್ರೈಸರ್ಸ್ ಹೈದರಾಬಾದ್ ತಂಡವು ಅಳಿಸಿ ಹಾಕಿದೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 286 ರನ್ ಬಾರಿಸಿ ಐಪಿಎಲ್ ಅಭಿಯಾನ ಆರಂಭಿಸಿದ್ದ ಎಸ್ಆರ್ಹೆಚ್ ಪಡೆ, ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 278 ರನ್ ಕಲೆಹಾಕಿದೆ.

ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ 5 ಬಾರಿ 250 ರನ್ಗಳಿಂದ ಹೆಚ್ಚು ರನ್ಗಳಿಸಿದ ಏಕೈಕ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಸನ್ರೈಸರ್ಸ್ ಹೈದರಾಬಾದ್ 2024 ರಲ್ಲಿ 287 ರನ್ಸ್, 277 ರನ್ಸ್, 266 ರನ್ಸ್ ಕಲೆಹಾಕಿತ್ತು. ಈ ಬಾರಿಯ ಐಪಿಎಲ್ನಲ್ಲಿ 286 ಹಾಗೂ 278 ರನ್ಗಳಿಸುವ ಮೂಲಕ 250+ ಸ್ಕೋರ್ಗಳ ಸಂಖ್ಯೆಯನ್ನು 5 ಕ್ಕೇರಿಸಿದೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ವಿಶೇಷ ವಿಶ್ವ ದಾಖಲೆಯನ್ನು ನಿರ್ಮಿಸಿದೆ.

ಇದಕ್ಕೂ ಮುನ್ನ ಈ ದಾಖಲೆ ಟೀಮ್ ಇಂಡಿಯಾದ ಹೆಸರಿನಲ್ಲಿತ್ತು. ಭಾರತ ತಂಡವು ಟಿ20 ಕ್ರಿಕೆಟ್ನಲ್ಲಿ ಮೂರು ಬಾರಿ 250 ರನ್ಗಳ ಗಡಿದಾಟಿದೆ. ಟೀಮ್ ಇಂಡಿಯಾ 2024 ರಲ್ಲಿ ಬಾಂಗ್ಲಾದೇಶ್ ವಿರುದ್ಧ 297 ರನ್ ಬಾರಿಸಿದರೆ, ಸೌತ್ ಆಫ್ರಿಕಾ ವಿರುದ್ಧ 283 ರನ್ ಕಲೆಹಾಕಿತ್ತು. ಹಾಗೆಯೇ 2017 ರಲ್ಲಿ ಶ್ರೀಲಂಕಾ ವಿರುದ್ಧ 260 ರನ್ ಬಾರಿಸಿದ್ದರು. ಈ ಮೂಲಕಟೀಮ್ ಇಂಡಿಯಾ ಟಿ20 ಕ್ರಿಕೆಟ್ನಲ್ಲಿ 3 ಬಾರಿ 250+ ಸ್ಕೋರ್ಗಳಿಸಿ ವಿಶೇಷ ವಿಶ್ವ ದಾಖಲೆ ನಿರ್ಮಿಸಿತ್ತು.

ಆದರೀಗ ಈ ವರ್ಲ್ಡ್ ರೆಕಾರ್ಡ್ ಅನ್ನು ಸನ್ರೈಸರ್ಸ್ ಹಥದರಾಬಾದ್ ತಂಡವು ಧೂಳೀಪಟ ಮಾಡಿದೆ. ಅದು ಕೂಡ ಕೇವಲ ಎರಡು ವರ್ಷಗಳಲ್ಲಿ ಎಂಬುದು ವಿಶೇಷ. ಅಂದರೆ 2024 ರಲ್ಲಿ ಮೂರು ಬಾರಿ 250 ರನ್ಗಳ ಗಡಿದಾಟಿದ್ದ ಎಸ್ಆರ್ಹೆಚ್ ತಂಡವು ಈ ಬಾರಿ ಮತ್ತೆ 286, 278 ರನ್ಗಳಿಸಿ ಭಾರತ ತಂಡದ ಹೆಸರಿನ್ಲಲಿದ್ದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದೆ.