
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ (T20 World Cup 2026) ಭಾರತ ಸೇರಿದಂತೆ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಇದರಲ್ಲಿ 17 ತಂಡಗಳ ವಿರುದ್ಧ ಟೀಮ್ ಇಂಡಿಯಾ ಈಗಾಗಲೇ ಗೆಲುವಿನ ಖಾತೆ ತೆರೆದಿದೆ. ಅಂದರೆ ಈ ಹಿಂದೆ ಭಾರತ ತಂಡವು 17 ಟೀಮ್ಗಳ ವಿರುದ್ಧ ಟಿ20 ಪಂದ್ಯವನ್ನಾಡಿದೆ.

ಭಾರತ ತಂಡವು ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿರುವುದು ಶ್ರೀಲಂಕಾ ವಿರುದ್ಧ. ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ 23 ಮ್ಯಾಚ್ ಗೆದ್ದರೆ ಶ್ರೀಲಂಕಾ 9 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 36 ಟಿ20 ಪಂದ್ಯಗಳು ನಡೆದಿದ್ದು, ಈ ವೇಳೆ ಟೀಮ್ ಇಂಡಿಯಾ 22 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ.

ಈ ಬಾರಿಯ ಟಿ20 ವಿಶ್ವಕಪ್ನಲ್ಲಿ (T20 World Cup 2026) ಭಾರತ ಸೇರಿದಂತೆ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಇದರಲ್ಲಿ 17 ತಂಡಗಳ ವಿರುದ್ಧ ಟೀಮ್ ಇಂಡಿಯಾ ಈಗಾಗಲೇ ಗೆಲುವಿನ ಖಾತೆ ತೆರೆದಿದೆ. ಅಂದರೆ ಈ ಹಿಂದೆ ಭಾರತ ತಂಡವು 17 ಟೀಮ್ಗಳ ವಿರುದ್ಧ ಟಿ20 ಪಂದ್ಯವನ್ನಾಡಿದೆ.

ಹಾಗೆಯೇ ಸೌತ್ ಆಫ್ರಿಕಾ ವಿರುದ್ಧದ 35 ಪಂದ್ಯಗಳಲ್ಲಿ ಟೀಮ್ ಇಂಡಿಯಾ 21 ಮ್ಯಾಚ್ಗಳಲ್ಲಿ ಜಯಭೇರಿ ಬಾರಿಸಿದೆ. ಹಾಗೆಯೇ ನ್ಯೂಝಿಲೆಂಡ್ ವಿರುದ್ಧದ 29 ಪಂದ್ಯಗಳಲ್ಲಿ ಟೀಮ್ ಇಂಡಿಯಾ 18 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಅಫ್ಘಾನಿಸ್ತಾನ್ ವಿರುದ್ಧ ಆಡಿದ ಎಲ್ಲಾ 8 ಪಂದ್ಯಗಳಲ್ಲೂ ಭಾರತವೇ ವಿಜಯದ ಪತಾಕೆ ಹಾರಿಸಿದ್ದಾರೆ.

ಮತ್ತೊಂದೆಡೆ ಬದ್ಧವೈರಿಗಳಾಗಿ ಗುರುತಿಸಿಕೊಂಡಿರುವ ಭಾರತ ಮತ್ತು ಪಾಕಿಸ್ತಾನ್ ಈವರೆಗೆ ಟಿ20 ಪಂದ್ಯಗಳಲ್ಲಿ 16 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ ಗೆದ್ದಿರುವುದು ಬರೋಬ್ಬರಿ 13 ಮ್ಯಾಚ್ಗಳಲ್ಲಿ. ಇನ್ನು ಪಾಕ್ ತಂಡ ಕೇವಲ 3 ಬಾರಿ ಮಾತ್ರ ಭಾರತಕ್ಕೆ ಸೋಲುಣಿಸಿದ್ದಾರೆ.

ಇನ್ನು ಐರ್ಲೆಂಡ್ ವಿರುದ್ಧ 8 ಪಂದ್ಯಗಳಲ್ಲಿ ಮತ್ತು, ನೇಪಾಳ, ನೆದರ್ಲೆಂಡ್ಸ್, ಯುಎಸ್ಎ ಮತ್ತು ಸ್ಕಾಟ್ಲೆಂಡ್ ವಿರುದ್ಧ ಆಡಿದ ತಲಾ ಒಂದೊಂದು ಪಂದ್ಯಗಳಲ್ಲೂ ಟೀಮ್ ಇಂಡಿಯಾ ಜಯ ಸಾಧಿಸಿದೆ. ಇದಾಗ್ಯೂ ಭಾರತ ತಂಡ ಗೆಲ್ಲದಿರುವುದು ಇಟಲಿ ಮತ್ತು ಕೆನಡಾ ವಿರುದ್ಧ ಮಾತ್ರ. ಈ ಎರಡು ತಂಡಗಳ ವಿರುದ್ಧ ಭಾರತ ಈವರೆಗೆ ಯಾವುದೇ ಪಂದ್ಯವಾಡಿಲ್ಲ. ಹೀಗಾಗಿ ಗೆಲುವಿನ ಖಾತೆ ತೆರೆಯಲು ಅವಕಾಶ ಸಿಕ್ಕಿಲ್ಲ. ಇದಾಗ್ಯೂ ಈ ಬಾರಿಯ ವಿಶ್ವಕಪ್ನ ದ್ವಿತೀಯ ಸುತ್ತಿನಲ್ಲಿ ಕೆನಡಾ ಮತ್ತು ಇಟಲಿ ತಂಡವನ್ನು ಎದುರಿಸುವ ಅವಕಾಶ ಟೀಮ್ ಇಂಡಿಯಾಗೆ ಸಿಗಲಿದೆಯಾ ಕಾದು ನೋಡಬೇಕಿದೆ.