ಟೀಮ್ ಇಂಡಿಯಾ ಆಯ್ಕೆಗೆ ಅರ್ಹರಾಗಿದ್ದ ಸಿರಾಜ್… ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು

Updated on: Jan 19, 2025 | 10:12 AM

Mohammed Siraj: ಟೀಮ್ ಇಂಡಿಯಾ ಪರ ಕಳೆದ ಎರಡು ವರ್ಷಗಳಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್​ಗಳಲ್ಲಿ ಮೊಹಮ್ಮದ್ ಸಿರಾಜ್ ಕೂಡ ಒಬ್ಬರು. ಅದರಲ್ಲೂ ಮೊಹಮ್ಮದ್ ಶಮಿ ಹಾಗೂ ಜಸ್​ಪ್ರೀತ್ ಬುಮ್ರಾ ಅವರ ಅನುಪಸ್ಥಿತಿ ನಡುವೆ ಅವರು ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ್ದರು. ಈ ಮೂಲಕ ಭಾರತ ತಂಡದ ಖಾಯಂ ಸದಸ್ಯರಾಗಿದ್ದ ಸಿರಾಜ್ ಇದೀಗ ತಂಡದಿಂದಲೇ ಹೊರಬಿದ್ದಿದ್ದಾರೆ.

1 / 6
ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವನ್ನು ಹೆಸರಿಸಲಾಗಿದೆ. 15 ಸದಸ್ಯರ ಈ ಬಳಗದಲ್ಲಿ ಮೊಹಮ್ಮದ್ ಸಿರಾಜ್​ಗೆ ಸ್ಥಾನ ಲಭಿಸಿಲ್ಲ. ಅಷ್ಟೇ ಅಲ್ಲದೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಆಯ್ಕೆಯಾಗಿಲ್ಲ. ಆದರೆ ಇಲ್ಲಿ ಇಂಟ್ರೆಸ್ಟಿಂಗ್ ವಿಷಯ ಎಂದರೆ ಕಳೆದ 2 ವರ್ಷಗಳಲ್ಲಿ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಮೊಹಮ್ಮದ್ ಸಿರಾಜ್.

ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವನ್ನು ಹೆಸರಿಸಲಾಗಿದೆ. 15 ಸದಸ್ಯರ ಈ ಬಳಗದಲ್ಲಿ ಮೊಹಮ್ಮದ್ ಸಿರಾಜ್​ಗೆ ಸ್ಥಾನ ಲಭಿಸಿಲ್ಲ. ಅಷ್ಟೇ ಅಲ್ಲದೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಆಯ್ಕೆಯಾಗಿಲ್ಲ. ಆದರೆ ಇಲ್ಲಿ ಇಂಟ್ರೆಸ್ಟಿಂಗ್ ವಿಷಯ ಎಂದರೆ ಕಳೆದ 2 ವರ್ಷಗಳಲ್ಲಿ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಮೊಹಮ್ಮದ್ ಸಿರಾಜ್.

2 / 6

ಅಂದರೆ ಎರಡು ವರ್ಷಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಮೊಹಮ್ಮದ್ ಸಿರಾಜ್ ಅವರನ್ನು ತಂಡದಿಂದ ಕೈ ಬಿಟ್ಟು ಅಚ್ಚರಿ ಮೂಡಿಸಿದ್ದಾರೆ. 2022 ರಲ್ಲಿ 24 ವಿಕೆಟ್ ಕಬಳಿಸಿದ್ದ ಸಿರಾಜ್, 2023 ರಲ್ಲಿ 44 ವಿಕೆಟ್ ಉರುಳಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ ಪರ 2 ವರ್ಷಗಳಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.

3 / 6

ಅಷ್ಟೇ ಅಲ್ಲದೆ 2022 ರಿಂದ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವೇಗದ ಬೌಲರ್​ಗಳ ಪಟ್ಟಿಯಲ್ಲೂ ಮೊಹಮ್ಮದ್ ಸಿರಾಜ್ ಅಗ್ರಸ್ಥಾನದಲ್ಲಿದ್ದಾರೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ 42 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಸಿರಾಜ್ ಒಟ್ಟು 71 ವಿಕೆಟ್ ಕಬಳಿಸಿದ್ದಾರೆ.

4 / 6

ಮೊಹಮ್ಮದ್ ಸಿರಾಜ್ ಅವರನ್ನು ಹೊರತುಪಡಿಸಿ ವಿಶ್ವದ ಯಾವುದೇ ವೇಗದ ಬೌಲರ್ ಕಳೆದ ಎರಡು ವರ್ಷಗಳಲ್ಲಿ 70 ವಿಕೆಟ್ ಕಬಳಿಸಿಲ್ಲ ಎಂಬುದು ವಿಶೇಷ. ಅಷ್ಟೇ ಅಲ್ಲದೆ ಪ್ರಸ್ತುತ ಏಕದಿನ ಬೌಲರ್​​ಗಳ ಶ್ರೇಯಾಂಕದಲ್ಲಿ ಸಿರಾಜ್​ 8ನೇ ಸ್ಥಾನದಲ್ಲಿದ್ದಾರೆ. ಅಂದರೆ ಸಿರಾಜ್ ಕಳೆದ ಕೆಲ ಸರಣಿಗಳಿಂದ ವಿಕೆಟ್ ಟೇಕರ್ ಆಗಿರುವ ಕಾರಣ ಏಕದಿನ ಶ್ರೇಯಾಂಕದಲ್ಲಿ ಟಾಪ್-10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟ.

5 / 6

ಈ ಎಲ್ಲಾ ಅಂಕಿ ಅಂಶಗಳ ಹೊರತಾಗಿಯೂ ಇಂಗ್ಲೆಂಡ್ ವಿರುದ್ಧದ ಸರಣಿಗೆ ಜಸ್​ಪ್ರೀತ್ ಬುಮ್ರಾ ಅವರ ಬದಲಿಯಾಗಿ ಆಯ್ಕೆ ಮಾಡಿಕೊಂಡಿದ್ದು ಹರ್ಷಿತ್ ರಾಣಾ ಅವರನ್ನು ಎಂಬುದೇ ಅಚ್ಚರಿ. ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಹರ್ಷಿತ್ ಈವರೆಗೆ ಪಡೆದಿರುವ ವಿಕೆಟ್​ಗಳ ಒಟ್ಟು ಸಂಖ್ಯೆ ಕೇವಲ 22 ಮಾತ್ರ. ಅಂದರೆ ಮೊಹಮ್ಮದ್ ಸಿರಾಜ್ 2 ವರ್ಷಗಳಲ್ಲಿ ಪಡೆದಿರುವುದಕ್ಕಿಂತಲೂ ಕಡಿಮೆ ಎಂಬುದು ಇಲ್ಲಿ ಉಲ್ಲೇಖಾರ್ಹ.

6 / 6

ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಟೀಮ್ ಇಂಡಿಯಾ ಏಕದಿನ ತಂಡದ ಖಾಯಂ ಸದಸ್ಯರಾಗಿದ್ದ ಮೊಹಮ್ಮದ್ ಸಿರಾಜ್ ಇದೀಗ ಹೊರಬಿದ್ದಿದ್ದಾರೆ. ಅದು ಕೂಡ ಐಸಿಸಿ ಏಕದಿನ ಬೌಲರ್​​ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವಾಗ ಎಂಬುದೇ ಅಚ್ಚರಿ.

Published On - 10:11 am, Sun, 19 January 25

Loading...
Unable to load recommendations.
Follow Us