U19 World Cup: ಟಿ20 ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ಜಯ; ಸೂಪರ್-6 ಸುತ್ತಿಗೆ ಎಂಟ್ರಿಕೊಟ್ಟ ಭಾರತ..!

Edited By:

Updated on: Jan 19, 2023 | 10:50 AM

U19 World Cup: ತನ್ನ ಮೂರನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಿದ ಶಫಾಲಿ ಪಡೆ ಬರೋಬ್ಬರಿ 83 ರನ್‌ಗಳಿಂದ ಗೆದ್ದು ಬೀಗಿತು. ಈ ಗೆಲುವಿನೊಂದಿಗೆ ಸೂಪರ್-ಸಿಕ್ಸ್ ಸುತ್ತಿಗೂ ಎಂಟ್ರಿಕೊಟ್ಟಿದೆ.

1 / 6
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್19 ಮಹಿಳಾ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಹ್ಯಾಟ್ರಿಕ್ ಜಯ ಸಾಧಿಸಿದೆ. ತನ್ನ ಮೂರನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಿದ ಶಫಾಲಿ ಪಡೆ ಬರೋಬ್ಬರಿ 83 ರನ್‌ಗಳಿಂದ ಗೆದ್ದು ಬೀಗಿತು. ಈ ಗೆಲುವಿನೊಂದಿಗೆ ಸೂಪರ್-ಸಿಕ್ಸ್ ಸುತ್ತಿಗೂ ಎಂಟ್ರಿಕೊಟ್ಟಿದೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್19 ಮಹಿಳಾ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಹ್ಯಾಟ್ರಿಕ್ ಜಯ ಸಾಧಿಸಿದೆ. ತನ್ನ ಮೂರನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಿದ ಶಫಾಲಿ ಪಡೆ ಬರೋಬ್ಬರಿ 83 ರನ್‌ಗಳಿಂದ ಗೆದ್ದು ಬೀಗಿತು. ಈ ಗೆಲುವಿನೊಂದಿಗೆ ಸೂಪರ್-ಸಿಕ್ಸ್ ಸುತ್ತಿಗೂ ಎಂಟ್ರಿಕೊಟ್ಟಿದೆ.

2 / 6

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗಧಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 149 ರನ್ ಗಳಿಸಿತು. ಇದು ಮೊದಲ ಎರಡು ಪಂದ್ಯಗಳಿಗಿಂತ ಕಡಿಮೆ ಸ್ಕೋರ್ ಆಗಿತ್ತು.

3 / 6

ಭಾರತದ ಪರ ಗೊಂಗಡಿ ತ್ರಿಶಾ 51 ಎಸೆತಗಳಲ್ಲಿ ಗರಿಷ್ಠ 57 ರನ್ ಗಳಿಸಿದರು. ಆದಾಗ್ಯೂ, ತಂಡದ ನಾಯಕಿ ಶಫಾಲಿ ವರ್ಮಾ ಈ ಬಾರಿ ಬೇಗ ವಿಕೆಟ್ ಒಪ್ಪಿಸಿದರು. ಆದರೆ ತಂಡದ ಹಿರಿಯ ಸದಸ್ಯೆ ರಿಚಾ ಘೋಷ್ 35 ಎಸೆತಗಳಲ್ಲಿ 33 ರನ್ ಗಳಿಸಿ ತಂಡಕ್ಕೆ ನೆರವಾದರು.

4 / 6

ಇಡೀ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಶ್ವೇತಾ ಸೆಹ್ರಾವತ್ ಆಕ್ರಮಣಕಾರಿ ಫಾರ್ಮ್ ತೋರದಿದ್ದರೆ ಭಾರತ ತಂಡ ಈ ಸ್ಕೋರ್ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಶ್ವೇತಾ ಕೇವಲ 10 ಎಸೆತಗಳಲ್ಲಿ 31 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಕಟ್ಟಿದರು.

5 / 6

ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ ತಂಡ ಉತ್ತಮ ಆರಂಭ ಪಡೆದುಕೊಂಡಿದಲ್ಲದೆ, ಆರನೇ ಓವರ್‌ಗೆ ಕೇವಲ 2 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿತು. ಆದರೆ ಇಲ್ಲಿಂದ ಮನ್ನತ್ ಕಶ್ಯಪ್, ಅರ್ಚನಾ ದೇವಿ ಸಿಂಗ್ ಮತ್ತು ಸೋನಮ್ ಯಾದವ್ ಅವರ ಸ್ಪಿನ್ ತ್ರಿವಳಿ ದಾಳಿ ಎದುರಾಳಿ ತಂಡಕ್ಕೆ ಸಂಕಷ್ಟ ತಂದೊಡ್ಡಿತು.

6 / 6

ಎಡಗೈ ಸ್ಪಿನ್ನರ್ ಮನ್ನತ್ ನಾಲ್ಕು ಓವರ್​ಗಳಲ್ಲಿ 12 ರನ್ ನೀಡಿ ನಾಲ್ಕು ವಿಕೆಟ್ ಪಡೆದರೆ, ಆಫ್ ಸ್ಪಿನ್ನರ್ ಅರ್ಚನಾ ದೇವಿ 14 ರನ್ ನೀಡಿ ಮೂರು ವಿಕೆಟ್ ಪಡೆದರು. ಈ ಇಬ್ಬರ ಸ್ಪಿನ್ ಮ್ಯಾಜಿಕ್ ಆಧಾರದಲ್ಲಿ ಭಾರತ ಸ್ಕಾಟ್ಲೆಂಡ್‌ನ ಉಳಿದ 8 ವಿಕೆಟ್‌ಗಳನ್ನು ಕೇವಲ 21 ರನ್‌ಗಳಿಗೆ ಕಬಳಿಸಿ 66 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಸತತ ಮೂರನೇ ಜಯ ದಾಖಲಿಸಿತು.

Published On - 10:50 am, Thu, 19 January 23

Loading...
Unable to load recommendations.
Follow Us