UAE vs WI: ಬೌಂಡರಿ, ಸಿಕ್ಸರ್ಗಳಿಂದಲೇ 72 ರನ್ ಚಚ್ಚಿದ ಕಿಂಗ್! ವಿಂಡೀಸ್ಗೆ ಸುಲಭ ಜಯ
UAE vs WI: ಶಾರ್ಜಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಯುಎಇ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದ ವೆಸ್ಟ್ ಇಂಡೀಸ್ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.
1 / 5
ಶಾರ್ಜಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಯುಎಇ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದ ವೆಸ್ಟ್ ಇಂಡೀಸ್ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಚೊಚ್ಚಲ ಏಕದಿನ ಶತಕ ಸಿಡಿಸಿದ ಬ್ರೆಂಡನ್ ಕಿಂಗ್ ವೆಸ್ಟ್ ಇಂಡೀಸ್ ಗೆಲುವಿನ ರೂವಾರಿ ಎನಿಸಿಕೊಂಡರು.
2 / 5
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಇ ತಂಡಕ್ಕೆ ಪೂರ್ಣ 50 ಓವರ್‌ಗಳನ್ನು ಆಡಲು ಸಾಧ್ಯವಾಗದೆ ಕೇವಲ 47.1 ಓವರ್‌ಗಳಲ್ಲೇ 202 ರನ್ಗಳಿಗೆ ಆಲೌಟ್ ಆಯಿತು. ತಂಡದ ಅಲಿ ನಾಸರ್ ಗರಿಷ್ಠ 58 ರನ್ ಬಾರಿಸದರೆ, ಇವರನ್ನು ಹೊರತುಪಡಿಸಿ ವಿ.ಅರವಿಂದ್ 40 ರನ್ಗಳ ಇನಿಂಗ್ಸ್ ಆಡಿದರು. ವೆಸ್ಟ್ ಇಂಡೀಸ್ ಪರ ಕೀಮೋ ಪೌಲ್ 3 ವಿಕೆಟ್ ಪಡೆದರು.
3 / 5
ಇನ್ನು ಈ ಗುರಿ ಬೆನ್ನಟ್ಟಿದ ವಿಂಡೀಸ್ ಬ್ರೆಂಡನ್ ಕಿಂಗ್ ಅವರ ಶತಕ ಹಾಗೂ ಬ್ರೂಕ್ಸ್ ಅವರ 44 ರನ್ಗಳ ನೆರವಿನಿಂದ ಕೇವಲ 3 ವಿಕೆಟ್ ಕಳೆದುಕೊಂಡು 36ನೇ ಓವರ್ನಲ್ಲೇ ಗೆಲುವಿನ ದಡ ಸೇರಿತು. ಯುಎಇ ಪರ ಅಯಾನ್, ಜಹುರ್, ರೋಹನ್ ತಲಾ ಒಂದೊಂದು ವಿಕೆಟ್ ಪಡೆದರು.
4 / 5
ಇನ್ನು ವಿಂಡೀಸ್ ಪರ ಚೊಚ್ಚಲ ಏಕದಿನ ಶತಕ ಬಾರಿಸಿದ ಕಿಂಗ್ ಆರಂಭಿಕರಾಗಿ ಕಣಕ್ಕಿಳಿದು, 140 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿ 100 ರ ಸ್ಟ್ರೈಕ್ ರೇಟ್ನಲ್ಲಿ 112 ರನ್ ಬಾರಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 112 ಎಸೆತಗಳನ್ನು ಎದುರಿಸಿದ ಕಿಂಗ್ 12 ಬೌಂಡರಿ ಮತ್ತು 4 ಸಿಕ್ಸರ್ ಕೂಡ ಸೇರಿಸಿದರು.
5 / 5
ಇದು ಏಕದಿನ ಕ್ರಿಕೆಟ್‌ನಲ್ಲಿ ಬ್ರೆಂಡನ್ ಕಿಂಗ್ ಅವರ ಮೊದಲ ಶತಕವಾಗಿದೆ. ಇದಕ್ಕೂ ಮೊದಲು ಅವರು ಏಕದಿನ ಕ್ರಿಕೆಟ್‌ನಲ್ಲಿ 4 ಅರ್ಧಶತಕಗಳನ್ನು ಬಾರಿಸಿದರು. ಈ ಶತಕ ಅವರ 23ನೇ ಏಕದಿನ ಪಂದ್ಯದಲ್ಲಿ ಬಂದಿತ್ತು. ಬ್ರೆಂಡನ್ ಕಿಂಗ್ ಅವರ ಶತಕದಿಂದಾಗಿ ವೆಸ್ಟ್ ಇಂಡೀಸ್ ಯುಎಇ ವಿರುದ್ಧದ ಪಂದ್ಯವನ್ನು 7 ವಿಕೆಟ್ಗಳಿಂದ ಗೆದ್ದುಕೊಂಡಿತು.