INDU19 vs AUSU19: ಫೈನಲ್​ನಲ್ಲಿ ಸೋತ ಬಳಿಕ ಖಡಕ್ ಆಗಿ ಮಾತನಾಡಿದ ಉದಯ್ ಸಹರಾನ್: ಏನು ಹೇಳಿದ್ರು ನೋಡಿ

|

Updated on: Feb 12, 2024 | 7:58 AM

Uday Saharan post match presentation: ಐಸಿಸಿ ಅಂಡರ್-19 ವಿಶ್ವಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಟೀಮ್ ಇಂಡಿಯಾ ನಾಯಕ ಉದಯ್ ಸಹರಾನ್ ಅಚ್ಚುಕಟ್ಟಾಗಿ ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ?. ಇಲ್ಲಿದೆ ನೋಡಿ.

1 / 6
ಸೀನಿಯರ್ ಪುರುಷರ ವಿಶ್ವಕಪ್ ನಂತರ ಇದೀಗ ಅಂಡರ್ 19 ಏಕದಿನ ವಿಶ್ವಕಪ್​ನಲ್ಲೂ ಆಸ್ಟ್ರೇಲಿಯಾ ತಂಡ ಭಾರತದ ಟ್ರೋಫಿ ಗೆಲ್ಲುವ ಕನಸನ್ನು ಮುರಿದಿದೆ. ಟೀಮ್ ಇಂಡಿಯಾವನ್ನು 79 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ನಾಲ್ಕನೇ ಬಾರಿಗೆ U19 ವಿಶ್ವಕಪ್ ಗೆದ್ದ ಸಾಧನೆ ಮಾಡಿತು.

2 / 6
ಫೈನಲ್‌ನಲ್ಲಿ ಟೀಮ್ ಇಂಡಿಯಾ ಗೆಲುವಿಗೆ 254 ರನ್‌ಗಳ ಸವಾಲನ್ನು ಆಸ್ಟ್ರೇಲಿಯಾ ನೀಡಿತ್ತು. ಆದರೆ, ಆಸ್ಟ್ರೇಲಿಯದ ಬೌಲರ್‌ಗಳ ಮುಂದೆ ಮಂಡಿ ಊರಿದ ಭಾರತ 43.5 ಓವರ್‌ಗಳಲ್ಲಿ 174 ರನ್‌ಗಳಿಗೆ ಆಯಿತು. ಇದರೊಂದಿಗೆ ಆಸ್ಟ್ರೇಲಿಯ 2010ರ ನಂತರ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿದೆ.

3 / 6
ಆದರೆ, ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಟೀಮ್ ಇಂಡಿಯಾ ನಾಯಕ ಉದಯ್ ಸಹರಾನ್ ಅಚ್ಚುಕಟ್ಟಾಗಿ ಮಾತನಾಡಿದ್ದಾರೆ. ಸೋತರೂ ಎದೆಗುಂದದ ಉದಯ್, ನಮ್ಮ ಹುಡುಗರ ಬಗ್ಗೆ ನನಗೆ ಹೆಮ್ಮೆ ಇದೆ, ಅವರು ಚೆನ್ನಾಗಿ ಆಡಿದ್ದಾರೆ ಎಂದು ಹೇಳಿದ್ದಾರೆ.

4 / 6
ನಮ್ಮ ತಂಡದ ಆಟಗಾರರು ಟೂರ್ನಿಯುದ್ದಕ್ಕೂ ಉತ್ತಮ ಹೋರಾಟದ ಮನೋಭಾವ ತೋರಿದರು. ನಾವು ಇಂದು ಕೆಲವು ಅನಗತ್ಯ ಶಾಟ್‌ಗಳನ್ನು ಆಡಿದ್ದೇವೆ, ಓವರ್​ಗಳ ಮಧ್ಯದಲ್ಲಿ ನಿಂತು ಆಡಲಿಲ್ಲ. ನಾವು ಫೈನಲ್ ಪಂದ್ಯಕ್ಕೆ ಎಲ್ಲ ಯೋಜನೆ ರೂಪಿಸಿದ್ದೆವು. ಆದರೆ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ ಎಂದು ಉದಯ್ ಸಹರಾನ್ ಹೇಳಿದ್ದಾರೆ.

5 / 6
ಅಂಡರ್-19 ವಿಶ್ವಕಪ್ ಪಂದ್ಯಾವಳಿಯಿಂದ ಸಾಕಷ್ಟು ಕಲಿತಿದ್ದೇವೆ. ಸಹಾಯಕ ಸಿಬ್ಬಂದಿಯಿಂದ ಮತ್ತು ಆಟಗಳ ಸಮಯದಲ್ಲಿಯೂ ಸಹ ಬಹಳಷ್ಟು ವಿಚಾರಗಳಲ್ಲಿ ಕಲಿತಿದ್ದೇವೆ. ನಾವು ಇಲ್ಲಿಗೆ ನಿಲ್ಲದೆ ಮುಂದೆ ಇನ್ನಷ್ಟು ಕಲಿಯುವುದನ್ನು ಮತ್ತು ಉತ್ತಮಗೊಳ್ಳಲು ಪ್ರಯತ್ನಿಸುತ್ತೇವೆ ಎಂಬುದು ಉದಯ್ ಸಹರಾನ್ ಮಾತು.

6 / 6
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ಸ್ಕೋರ್ ಮಾಡಿತು. ಕಾಂಗರೂ ಪರ ಅಗ್ರ-6 ಬ್ಯಾಟ್ಸ್‌ಮನ್‌ಗಳ ಪೈಕಿ 4 ಬ್ಯಾಟ್ಸ್‌ಮನ್‌ಗಳು 40 ಕ್ಕಿಂತ ಹೆಚ್ಚು ರನ್ ಗಳಿಸಿದರು. ಭಾರತದ ಬ್ಯಾಟಿಂಗ್ ಸಂಪೂರ್ಣ ಕಳಪೆಯಾಗಿತ್ತು. ಮೂರನೇ ಓವರ್‌ನಲ್ಲಿ ಮೊದಲ ವಿಕೆಟ್ ಪತನಗೊಂಡ ನಂತರ ಸರಾಗವಾಗಿ ವಿಕೆಟ್ ಕಳೆದುಕೊಂಡು ಸಾಗಿ 43.5 ಓವರ್‌ಗಳಲ್ಲಿ 174 ರನ್‌ಗಳಿಗೆ ಆಲೌಟ್ ಆಯಿತು.