ಟಿ20 ವಿಶ್ವಕಪ್​ಗೂ ಮುನ್ನ ಪ್ರಮುಖ ಆಟಗಾರ ಅಮಾನತು..!

Updated on: Jan 29, 2026 | 2:14 PM

Aaron Jones: ಯುಎಸ್​ಎ ತಂಡದ ಆರಂಭಿಕ ದಾಂಡಿಗ ಆರೋನ್ ಜೋನ್ಸ್ ಯುಎಸ್ಎ ಪರ 100 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 52 ಏಕದಿನ ಪಂದ್ಯಗಳಿಂದ 1664 ರನ್ ಕಲೆಹಾಕಿದ್ದಾರೆ. ಹಾಗೆಯೇ 48 ಟಿ20 ಪಂದ್ಯಗಳಿಂದ 770 ರನ್ ಕಲೆಹಾಕಿದ್ದಾರೆ. ಇದೀಗ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಅವರು ಅಮಾನತುಗೊಂಡಿದ್ದಾರೆ.

1 / 6
ಅಮೆರಿಕ ತಂಡದ ಸ್ಟಾರ್ ಬ್ಯಾಟರ್ ಆರೋನ್ ಜೋನ್ಸ್ (Aaron Jones)​ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ಅಮಾನತುಗೊಳಿಸಲಾಗಿದೆ. ಭ್ರಷ್ಟಾಚಾರ ವಿರೋಧಿ ಸಂಹಿತೆಗಳ ಉಲ್ಲಂಘನೆಗಳ ಅಡಿಯಲ್ಲಿ ಜೋನ್ಸ್ ಅವರನ್ನು ತಾತ್ಕಾಲಿಕವಾಗಿ ಸಸ್ಪೆಂಡ್ ಮಾಡಲಾಗಿದೆ ಎಂದು ಐಸಿಸಿ ತಿಳಿಸಿದೆ.

2 / 6
2023-24 ರಲ್ಲಿ ಬಾರ್ಬಡೋಸ್‌ನಲ್ಲಿ ನಡೆದ ಬಿಮ್10 ಟೂರ್ನಮೆಂಟ್‌ನಲ್ಲಿ ಆರೋನ್ ಜೋನ್ಸ್ ಐಸಿಸಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಗಳನ್ನು ಉಲ್ಲಂಘಿಸಿರುವ ಆರೋಪ ಕೇಳಿ ಬಂದಿವೆ. ಒಟ್ಟು ಐದು ಆರೋಪಗಳಲ್ಲಿ ಎರಡು ಅಂತರರಾಷ್ಟ್ರೀಯ ಪಂದ್ಯಗಳಿಗೆ ಸಂಬಂಧಿಸಿವೆ ಎಂದು ಐಸಿಸಿ ತಿಳಿಸಿದೆ. 

3 / 6
ಜೋನ್ಸ್ ಬಿಮ್​10 ಟೂರ್ನಮೆಂಟ್‌ನಲ್ಲಿ ಪಂದ್ಯಗಳಲ್ಲಿನ ಫಿಕ್ಸಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಇದಲ್ಲದೆ ಭ್ರಷ್ಟಚಾರದಲ್ಲಿ ತೊಡಗಿಸಿಕೊಳ್ಳುವ ವಿಧಾನಗಳನ್ನು ಬಹಿರಂಗಪಡಿಸದಿರುವುದು ಮತ್ತು ಗೊತ್ತುಪಡಿಸಿದ ಭ್ರಷ್ಟಾಚಾರ-ವಿರೋಧಿ ಅಧಿಕಾರಿಯಿಂದ ಸಮಂಜಸವಾದ ತನಿಖೆಗೆ ಸಹಕರಿಸದಿರುವ ಆರೋಪ ಹೊರಿಸಲಾಗಿದೆ.

4 / 6
ಈ ಆರೋಪಗಳು ವ್ಯಾಪಕ ತನಿಖೆಯ ಭಾಗವಾಗಿದ್ದು, ಹೀಗಾಗಿ ಜೋನ್ಸ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಆರೋಪಗಳಿಗೆ ಪ್ರತಿಕ್ರಿಯಿಸಲು ಅವರಿಗೆ ಜನವರಿ 28, 2026 ರಿಂದ 14 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಐಸಿಸಿ ತಿಳಿಸಿದೆ.

5 / 6
ಆರೋನ್ ಜೋನ್ಸ್ 2024 ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಯುಎಸ್​ಎ (ಅಮೆರಿಕ) ತಂಡದ ಪರ ಕಣಕ್ಕಿಳಿದಿದ್ದರು. ಅಲ್ಲದೆ ಮುಂಬರುವ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿ ಎಲ್ಲಾ ರೀತಿಯ ಕ್ರಿಕೆಟ್​ನಿಂದ ಅಮಾನತುಗೊಂಡಿದ್ದಾರೆ. ಹೀಗಾಗಿ ಅವರು ಭಾರತ-ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತ.

6 / 6
31 ವರ್ಷದ ಆರೋನ್ ಜೋನ್ಸ್ ಯುಎಸ್ಎ ಪರ 100 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 52 ಏಕದಿನ ಪಂದ್ಯಗಳಿಂದ 1664 ರನ್ ಕಲೆಹಾಕಿದ್ದಾರೆ. ಹಾಗೆಯೇ 48 ಟಿ20 ಪಂದ್ಯಗಳಿಂದ 770 ರನ್ ಕಲೆಹಾಕಿದ್ದಾರೆ. ಹಾಗೆಯೇ ಯುಎಸ್ಎ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಸಿಯಾಟಲ್ ಓರ್ಕಾಸ್ ಪರ ಮತ್ತು ಸಿಪಿಎಲ್‌ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಪರ ಕಣಕ್ಕಿಳಿದಿದ್ದಾರೆ. ಇದೀಗ ಅಮಾನತುಗೊಂಡಿದ್ದರಿಂದ ಅವರು ಇನ್ಮುಂದೆ ಯಾವುದೇ ರೀತಿಯ ಕ್ರಿಕೆಟ್ ಆಡುವಂತಿಲ್ಲ.

Published On - 2:09 pm, Thu, 29 January 26