ಬರೋಬ್ಬರಿ 226 ರನ್… ಮತ್ತೆ ಅಬ್ಬರಿಸಿದ ವೈಭವ್ ಸೂರ್ಯವಂಶಿ

Updated on: Dec 16, 2025 | 11:55 AM

Vaibhav Suryavanshi: ಭಾರತ ತಂಡದ 14 ವರ್ಷದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಕೇವಲ 3 ಇನಿಂಗ್ಸ್​ಗಳ ಮೂಲಕ ಬರೋಬ್ಬರಿ 226 ರನ್​ ಕಲೆಹಾಕಿದ್ದಾರೆ. ಅದು ಸಹ ಸ್ಫೋಟಕ ಸೆಂಚುರಿ ಹಾಗೂ ಸಿಡಿಲಬ್ಬರದ ಅರ್ಧಶತಕಗಳೊಂದಿಗೆ ಎಂಬುದು ವಿಶೇಷ. ಈ ಮೂಲಕ ಪ್ರಸ್ತುತ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್​ ಟೂರ್ನಿಯ ರನ್​ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

1 / 5
ಅಂಡರ್-19 ಏಷ್ಯಾಕಪ್​ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ವೈಭವ್ ಸೂರ್ಯವಂಶಿಯ (Vaibhav Suryavanshi) ಸಿಡಿಲಬ್ಬರ ಮುಂದುವರೆದಿದೆ. ಯುಎಇ ವಿರುದ್ಧ ಸ್ಫೋಟಕ ಸೆಂಚುರಿ ಸಿಡಿಸಿದ್ದ ವೈಭವ್ ಇದೀಗ ಮಲೇಷ್ಯಾ ವಿರುದ್ಧ ಸಿಡಿಲಬ್ಬರದ ಅರ್ಧಶತಕ ಬಾರಿಸಿದ್ದಾರೆ.

2 / 5
ದುಬೈನ ಸೆವೆನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟಾಸ್ ಗೆದ್ದ ಮಲೇಷ್ಯಾ ತಂಡ ಬೌಲಿಂಗ್ ಆಯ್ದುಕೊಂಡಿದೆ. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಬಿರುಸಿನ ಆರಂಭ ಒದಗಿಸಿದರು.

3 / 5
ಮೊದಲ ಓವರ್​ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್​ಗೆ ಒತ್ತು ನೀಡಿದ ವೈಭವ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರ ನಡುವೆ ಯುವ ದಾಂಡಿಗನ ಬ್ಯಾಟ್​ನಿಂದ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳು ಮೂಡಿಬಂದಿದ್ದವು. ಆದರೆ ಅರ್ಧಶತಕದ ಬೆನ್ನಲ್ಲೇ ಬಿರುಸಿನ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿ ಔಟಾದರು.

4 / 5
ಇದಕ್ಕೂ ಮುನ್ನ ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ವೈಭವ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪಂದ್ಯದಲ್ಲಿ 95 ಎಸೆತಗಳನ್ನು ಎದುರಿಸಿದ್ದ ಯುವ ಎಡಗೈ ದಾಂಡಿಗ 14 ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 171 ರನ್ ಬಾರಿಸಿದ್ದರು. ಈ ಮೂಲಕ ಅಂಡರ್-19 ಪಂದ್ಯದಲ್ಲಿ ಅತ್ಯಧಿಕ ಸಿಕ್ಸ್​ ಸಿಡಿಸಿದ ವಿಶ್ವ ದಾಖಲೆ ನಿರ್ಮಿಸಿದ್ದರು.

5 / 5
ಆದರೆ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 5 ರನ್​ಗಳಿಸಿ ನಿರಾಸೆ ಮೂಡಿಸಿದ್ದರು. ಇದೀಗ ಮಲೇಷ್ಯಾ ವಿರುದ್ಧ ಸ್ಫೋಟಕ ಹಾಫ್ ಸೆಂಚುರಿ ಸಿಡಿಸುವ ಮೂಲಕ ವೈಭವ್ ಮತ್ತೆ ಟ್ರ್ಯಾಕ್​ಗೆ ಮರಳಿದ್ದಾರೆ. ಈ ಮೂಲಕ 3 ಇನಿಂಗ್ಸ್​ಗಳಿಂದ ಒಟ್ಟು 226 ರನ್​ ಕಲೆಹಾಕಿದ್ದಾರೆ.