
ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಯುವ ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ ಅವರ ಅದ್ಭುತ ಪ್ರದರ್ಶನ ಮುಂದುವರಿದಿದೆ. ವಡೋದರಾದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ವೈಷ್ಣವಿ ತಮ್ಮ ಸ್ಪಿನ್ ಜಾದೂ ಮೂಲಕ ಜಿಂಬಾಬ್ವೆ ತಂಡದ ಬ್ಯಾಟರ್‌ಗಳನ್ನು ಕಾಡಿದರು. ಕೇವಲ 39 ರನ್ ನೀಡಿ ಐದು ವಿಕೆಟ್ ಕಬಳಿಸುವ ಮೂಲಕ ಎದುರಾಳಿ ತಂಡದ ಅರ್ಧದಷ್ಟು ಆಟಗಾರ್ತಿಯರನ್ನು ಪೆವಿಲಿಯನ್‌ಗೆ ಕಳುಹಿಸಿದರು(PC-BCCI Women x).
ವೈಷ್ಣವಿ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಜಿಂಬಾಬ್ವೆ ಮಹಿಳಾ ತಂಡ 39.5 ಓವರ್‌ಗಳಲ್ಲಿ ಕೇವಲ 131 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ತಂಡಕ್ಕೆ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಉತ್ತಮ ಅವಕಾಶ ಲಭಿಸಿದೆ.ಆರಂಭದಿಂದಲೇ ವೈಷ್ಣವಿ ಶರ್ಮಾ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರು. ತಮ್ಮ ಸ್ಪಿನ್ ಮೋಡಿಯ ಮೂಲಕ ಜಿಂಬಾಬ್ವೆ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದರು(PC-PTI).
ಮೊದಲು ಬಿಲವ್ಡ್ ಬಿಜಾ ಅವರನ್ನು ಔಟ್ ಮಾಡಿದರು. ಬಳಿಕ 16ನೇ ಓವರ್‌ನಲ್ಲಿ ಮುಬಾಚಿಕ್ವಾ ಅವರನ್ನು ಸ್ಟಂಪ್ ಔಟ್ ಮಾಡಿಸಿ ಮತ್ತೊಂದು ಯಶಸ್ಸು ಸಾಧಿಸಿದರು. ಇದಾದ ನಂತರ 28ನೇ ಓವರ್‌ನಲ್ಲಿ ಧುರುರು, 30ನೇ ಓವರ್‌ನಲ್ಲಿ ಮಾವುಂಗಾ ಹಾಗೂ 34ನೇ ಓವರ್‌ನಲ್ಲಿ ಗ್ವಾಂಜುರಾ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಐದು ವಿಕೆಟ್‌ಗಳ ಸಾಧನೆಯನ್ನು ಪೂರ್ಣಗೊಳಿಸಿದರು(PC-PTI).
ಈ ಮೂಲಕ ವೈಷ್ಣವಿ ಭಾರತದ ಪರ ಏಕದಿನ ಸರಣಿಯಲ್ಲಿ ಅತಿ ಕಡಿಮೆ ವಯಸ್ಸಿಯನಲ್ಲಿ ಐದು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವೈಷ್ಣವಿ 20 ವರ್ಷ 314 ದಿನಗಳಲ್ಲಿ ಈ ಸಾಧನೆ ಮಾಡಿದರೆ, ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ದೀಪ್ತಿ ಶರ್ಮಾ 18 ವರ್ಷ 179 ದಿನಗಳಲ್ಲಿ ಈ ಸಾಧನೆ ಮಾಡಿದ್ದರು(PC-PTI).
10 ಓವರ್‌ಗಳಲ್ಲಿ ಕೇವಲ 39 ರನ್ ನೀಡಿ ಐದು ವಿಕೆಟ್ ಪಡೆದ ವೈಷ್ಣವಿ, ಜಿಂಬಾಬ್ವೆ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಈ ಸರಣಿಯ ಹಿಂದಿನ ಪಂದ್ಯದಲ್ಲೂ ವೈಷ್ಣವಿ ನಾಲ್ಕು ವಿಕೆಟ್ ಕಬಳಿಸಿ ಮಿಂಚಿದ್ದರು. ಇದೀಗ ಸತತ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ(PC-BCCI Women x).