Virat Kohli Century: ವಿರಾಟ್ ಕೊಹ್ಲಿ ಮನಮೋಹಕ ಶತಕದ ರೋಚಕ ಫೋಟೋಗಳು ಇಲ್ಲಿದೆ ನೋಡಿ

|

Updated on: Mar 13, 2023 | 7:13 AM

India vs Australia 4th Test: ನಾಲ್ಕನೇ ದಿನದಾಟದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮೂರು ವರ್ಷ, ಮೂರು ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್​ನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. 241 ಎಸೆತಗಳಲ್ಲಿ ಶತಕ ಸಾಧನೆ ತೋರಿದ ಕೊಹ್ಲಿ ಇನ್ನಿಂಗ್ಸ್‌ನಲ್ಲಿ 5 ಬೌಂಡರಿಗಳಿದ್ದವು.

1 / 9
ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರುತ್ತಿದೆ. ಕಾಂಗರೂ ಪಡೆಯನ್ನು 480 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆಡಿದ ಟೀಮ್ ಇಂಡಿಯಾ 571 ರನ್​ಗೆ ಆಲೌಟ್ ಆಗುವ ಮೂಲಕ 91 ರನ್​ಗಳ ಮುನ್ನಡೆ ಪಡೆಯಿತು.

2 / 9
4ನೇ ದಿನದಾಟದ ಅಂತ್ಯ ಆಗುವ ಹೊತ್ತಿಗೆ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿ ವಿಕೆಟ್ ನಷ್ಟವಿಲ್ಲದೆ 3 ರನ್ ಗಳಿಸಿದೆ. 88 ರನ್​ಗಳ ಹಿನ್ನಡೆಯಲ್ಲಿದೆ. ಈ ಮೂಲಕ ಇಂಡೋ- ಆಸೀಸ್ ಅಂತಿಮ ನಾಲ್ಕನೇ ಟೆಸ್ಟ್ ಡ್ರಾನತ್ತ ಪಂದ್ಯ ಸಾಗುತ್ತಿದೆ.

3 / 9
ನಾಲ್ಕನೇ ದಿನದಾಟದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮೂರು ವರ್ಷ, ಮೂರು ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್​ನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. 241 ಎಸೆತಗಳಲ್ಲಿ ಶತಕ ಸಾಧನೆ ತೋರಿದ ಕೊಹ್ಲಿ ಇನ್ನಿಂಗ್ಸ್‌ನಲ್ಲಿ 5 ಬೌಂಡರಿಗಳಿದ್ದವು. ಇಷ್ಟು ಎಸೆತಗಳನ್ನು​ ಎದುರಿಸಿ ನಿಧಾನಗತಿಯಲ್ಲಿ ಶತಕ ಗಳಿಸಿರುವ ಅವರ ಎರಡನೇ ಇನ್ನಿಂಗ್ಸ್​ ಇದಾಗಿದೆ.

4 / 9
ಈ ಮೂಲಕ ಕೊಹ್ಲಿ ಅವರು ಟೆಸ್ಟ್​ ಕರಿಯರ್​​ನಲ್ಲಿ 28ನೇ ಸೆಂಚುರಿ, ಹಾಗೆಯೇ ತಮ್ಮ ವೃತ್ತಿ ಜೀವನದ 75ನೇ ಶತಕವನ್ನೂ ಪೂರ್ಣಗೊಳಿಸಿದ್ದಾರೆ. 2019 ರಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಶತಕವನ್ನು ಬಾರಿಸಿದ್ದರು.

5 / 9
ಇನ್ನು ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಸಿಡಿಸಿದ 16ನೇ ಶತಕ ಇದಾಗಿದೆ. ಈ ಶತಕದ ಮೂಲಕ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದ್ದು, ಎದುರಾಳಿ ತಂಡವೊಂದರ ವಿರುದ್ಧ ಅತೀ ಹಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಇದೀಗ 4ನೇ ಸ್ಥಾನಕ್ಕೇರಿದ್ದಾರೆ.

6 / 9
ವಿರಾಟ್ ಕೊಹ್ಲಿ ಶತಕ ಸಿಡಿಸಿದಾಗ ಖುಷಿಯಲ್ಲಿ ತನ್ನ ಲಾಕೆಟ್ ತೆಗೆದು ಮುತ್ತಿಟ್ಟು ಸಂಭ್ರಮಿಸಿದ್ದು ಹೀಗೆ.

7 / 9
ಕೊಹ್ಲಿ ಇಲ್ಲಿಯವರೆಗೆ ಭಾರತದ ನೆಲದಲ್ಲಿ 14 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ ಶತಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ. ಈ ಶತಕದಿಂದ ಮೊಹಮ್ಮದ್ ಅಜರುದ್ದೀನ್ ಶತಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಸರಿದಿದ್ದಾರೆ.

8 / 9
ಕೊಹ್ಲಿಯ ಈ ಶತಕ ಬಂದಿದ್ದು ಸುದೀರ್ಘ 41 ಇನ್ನಿಂಗ್ಸ್​​ಗಳ ಅಂತರದಲ್ಲಿ ಎಂಬುದು ವಿಶೇಷ. 28ನೇ ಟೆಸ್ಟ್ ಶತಕಕ್ಕಾಗಿ ಬರೊಬ್ಬರಿ 41 ಇನ್ನಿಂಗ್ಸ್​​ಗಳನ್ನು ಆಡಿದ್ದಾರೆ. ಇದಕ್ಕೂ ಮೊದಲು ಕೊಹ್ಲಿ ತಮ್ಮ 12ನೇ ಶತಕಕ್ಕಾಗಿ 11 ಟೆಸ್ಟ್​​​​ ಇನ್ನಿಂಗ್ಸ್​​​​​ಗಳನ್ನು ತೆಗೆದುಕೊಂಡಿದ್ದರು. 7 ಮತ್ತು 26ನೇ ಶತಕ ಸಿಡಿಸಲು ತಲಾ 10 ಇನ್ನಿಂಗ್ಸ್​ಗಳ ಅಂತರ ಇತ್ತು.

9 / 9
ಅಂತೆಯೆ ಈ ಪಂದ್ಯದಲ್ಲಿ ವಿರಾಟ್​ 44 ರನ್​ ಗಳಿಸುತ್ತಿದ್ದಂತೆ ತವರಿನಲ್ಲಿ ಟೆಸ್ಟ್​ನಲ್ಲಿ 4,000 ಗಳಿಸಿದ ದಾಖಲೆ ಮಾಡಿದರು. ನಾಲ್ಕು ಸಹಸ್ರ ರನ್​ ದಾಖಲಿಸಿದ ಭಾರತದ 5ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೊಹ್ಲಿ ಒಟ್ಟು 364 ಎಸೆತಗಳಲ್ಲಿ 15 ಫೋರ್​ನೊಂದಿಗೆ 186 ರನ್ ಗಳಿಸಿ ಔಟಾದರು.