ಆಸ್ಟ್ರೇಲಿಯನ್ನರಿಗೆ ನಡುಕ ಶುರು: ಅಡಿಲೇಡ್​​ನಲ್ಲಿ ವಿರಾಟ್ ಕೊಹ್ಲಿ ಕಿಂಗ್

|

Updated on: Dec 03, 2024 | 12:14 PM

Border Gavaskar Trophy: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಶುಕ್ರವಾರದಿಂದ ಶುರುವಾಗಲಿದೆ. ಹೊನಲು ಬೆಳಕಿನಲ್ಲಿ ನಡೆಯಲಿರುವ ಈ ಪಂದ್ಯವು ವಿರಾಟ್ ಕೊಹ್ಲಿಯ ನೆಚ್ಚಿನ ಮೈದಾನ ಅಡಿಲೇಡ್​​ನ ಓವಲ್ ಸ್ಟೇಡಿಯಂನಲ್ಲಿ ನಡೆಯಲಿರುವುದು ವಿಶೇಷ.

1 / 6
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಶುಕ್ರವಾರದಿಂದ (ಡಿ.6) ಶುರುವಾಗಲಿದೆ. ಈ ಪಂದ್ಯಕ್ಕೂ ಮುನ್ನವೇ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಬೌಲರ್​​​ಗಳ ನಿದ್ದೆಗೆಡಿಸಿದ್ದಾರೆ.

2 / 6
ಏಕೆಂದರೆ ಅಡಿಲೇಡ್ ಮೈದಾನದಲ್ಲಿ ಅತ್ಯಧ್ಬುತ ಪ್ರದರ್ಶನ ನೀಡಿದ ವಿದೇಶಿ ಬ್ಯಾಟರ್​​ಗಳಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಕಿಂಗ್ ಕೊಹ್ಲಿ ಓವಲ್​ ಮೈದಾನದಲ್ಲಿ ಈಗಾಗಲೇ 3 ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಹಾಗೆಯೇ ಒಂದು ಅರ್ಧಶತಕವನ್ನೂ ಸಹ ಬಾರಿಸಿದ್ದಾರೆ.

3 / 6
2012 ರಲ್ಲಿ ನಡೆದ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಕೊಹ್ಲಿ 213 ಎಸೆತಗಳಲ್ಲಿ 116 ರನ್ ಬಾರಿಸಿ ಮಿಂಚಿದ್ದರು.

4 / 6
2014 ರಲ್ಲಿ ನಡೆದ ಅಡಿಲೇಡ್ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್​​ಗಳಲ್ಲೂ ಸೆಂಚುರಿ ಸಿಡಿಸಿ ವಿರಾಟ್ ವಿಶೇಷ ದಾಖಲೆ ಬರೆದಿದ್ದರು. ಈ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ 115 ರನ್ ಬಾರಿಸಿದ್ದ ಕಿಂಗ್ ಕೊಹ್ಲಿ, ದ್ವಿತೀಯ ಇನಿಂಗ್ಸ್​ನಲ್ಲಿ 141 ರನ್​ ಚಚ್ಚಿದ್ದರು.

5 / 6
2021 ರಲ್ಲಿ ಅಡಿಲೇಡ್​​ನಲ್ಲಿ ನಡೆದ ಡೇ-ನೈಟ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ ವಿರಾಟ್ ಕೊಹ್ಲಿ 74 ರನ್ ಕಲೆಹಾಕಿದ್ದರು. ಈ ಮೂಲಕ ಅಡಿಲೇಡ್​ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ 50+ ಸ್ಕೋರ್​​​ಗಳಿಸಿದ ವಿಶೇಷ ದಾಖಲೆಯೊಂದನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದರು.

6 / 6
ಅಷ್ಟೇ ಅಲ್ಲದೆ ಅಡಿಲೇಡ್ ಓವಲ್​ ಮೈದಾನದಲ್ಲಿ ಆಡಿದ 15 ಇನಿಂಗ್ಸ್​​ಗಗಳಲ್ಲಿ 73.61 ಸರಾಸರಿಯಲ್ಲಿ 957 ರನ್ ಗಳಿಸಿದ್ದಾರೆ. ಹೀಗಾಗಿಯೇ ಕಿಂಗ್ ಕೊಹ್ಲಿಯ ಭರ್ಜರಿ ಫಾರ್ಮ್​​ ಇದೀಗ ಆಸ್ಟ್ರೇಲಿಯನ್ ಬೌಲರ್​​ಗಳ ಚಿಂತೆಗೆ ಕಾರಣವಾಗಿದೆ. ಅದರಲ್ಲೂ ಪರ್ತ್​ ಟೆಸ್ಟ್​​ನಲ್ಲಿ ಸೆಂಚುರಿ ಸಿಡಿಸಿರುವ ಕಿಂಗ್ ಕೊಹ್ಲಿ ಕಡೆಯಿಂದ ಓವಲ್​ ಮೈದಾನದಲ್ಲೂ ಶತಕವನ್ನು ನಿರೀಕ್ಷಿಸಲಾಗುತ್ತಿದೆ.

Published On - 10:31 am, Tue, 3 December 24