Suryakumar Yadav: ಸೂರ್ಯಕುಮಾರ್ ಔಟಾಗಿ ಪೆವಿಲಿಯನ್ನತ್ತ ಹೋಗುತ್ತಿದ್ದಾಗ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ
Virat Kohli, MI vs RCB IPL 2023: ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ 16ನೇ ಓವರ್ನಲ್ಲಿ ಔಟಾದರು. ಇವರು ಔಟಾಗಿ ಪೆವಿಲಿಯನ್ನತ್ತ ಸಾಗುತ್ತಿರುವಾಗ ವಿರಾಟ್ ಕೊಹ್ಲಿ ಏನು ಮಾಡಿದರು ನೋಡಿ.
1 / 9
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭದಲ್ಲಿ ಸತತ ಸೋಲುಂಡು ಬಳಿಕ ಭರ್ಜರಿ ಕಮ್ಬ್ಯಾಕ್ ಮಾಡಿರುವ ಮುಂಬೈ ಇಂಡಿಯನ್ಸ್ ತಂಡ ಇದೀಗ ಪಾಯಿಂಟ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿದ್ದು, ಪ್ಲೇ ಆಫರ್ ರೇಸ್ನಲ್ಲಿ ಕಾಣಿಸಿಕೊಂಡಿದೆ.
2 / 9
200+ ರನ್ಗಳ ಟಾರ್ಗೆಟ್ ನೀಡಿದ್ದರೂ ಮುಂಬೈ ಇಂಡಿಯನ್ಸ್ ಸುಲಭವಾಗಿ ಜಯ ಸಾಧಿಸುತ್ತಿದೆ. ಐಪಿಎಲ್ 2023 ರಲ್ಲಿ ರೋಹಿತ್ ಶರ್ಮಾ ಪಡೆ ಈ ಸಾಧನೆಯನ್ನು ಮೂರು ಬಾರಿ ಮಾಡಿದೆ. ಮಂಗಳವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲೂ ಮುಂಬೈ 200 ರನ್ಗಳ ಗುರಿ ಬೆನ್ನಟ್ಟಿ ಗೆದ್ದಿತು.
3 / 9
ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಜಯ ತಂದುಕೊಡುವಲ್ಲಿ ಮುಖ್ಯ ಪಾತ್ರವಹಿಸಿದರು. ಕೇವಲ 35 ಎಸೆತಗಳಲ್ಲಿ 7 ಫೋರ್ ಹಾಗೂ 6 ಮನಮೋಹಕ ಸಿಕ್ಸರ್ ಸಿಡಿಸಿ 83 ರನ್ ಚಚ್ಚಿದರು.
4 / 9
ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಸೂರ್ಯಕುಮಾರ್ 16ನೇ ಓವರ್ನ ವಿಜಯ್ಕುಮಾರ್ ಅವರ ಬೌಲಿಂಗ್ನಲ್ಲಿ ಕೇದರ್ ಜಾಧವ್ಗೆ ಕ್ಯಾಚ್ ನೀಡಿ ಔಟಾದರು. ಸೂರ್ಯ ಔಟಾದಾಗ ಮುಂಬೈ ಡಗೌಟ್ ಎದ್ದು ನಿಂತು ಚಪ್ಪಾಳೆ ತಟ್ಟಿತು.
5 / 9
ಹಾಗೆಯೆ ಸೂರ್ಯಕುಮಾರ್ ಪೆವಿಲಿಯನ್ನತ್ತ ಸಾಗುತ್ತಿರುವಾಗ ಆರ್ಸಿಬಿ ತಂಡದ ವಿರಾಟ್ ಕೊಹ್ಲಿ ತಬ್ಬಿಕೊಂಡು ಶುಭಕೋರಿದರು. ಪಂದ್ಯ ಮುಗಿದ ಬಳಿಕ ಕೂಡ ಕೊಹ್ಲಿ ಅವರು ಸೂರ್ಯ ಅವರ ಆಟವನ್ನು ಪ್ರಶಂಸಿಸಿ ಮತ್ತೊಮ್ಮೆ ತಬ್ಬಿಕೊಂಡರು. ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
6 / 9
ಸೂರ್ಯಕುಮಾರ್ ಯಾದವ್ಗೆ ಶೇಕ್ಹ್ಯಾಂಡ್ ನೀಡಿ ಭರ್ಜರಿ ಆಟವನ್ನು ಪ್ರಶಂಸಿಸಿದ ವಿರಾಟ್ ಕೊಹ್ಲಿ.
7 / 9
ಪಂದ್ಯ ಮುಗಿದ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್, ಅಂಕಗಳ ದೃಷ್ಟಿಯಿಂದ ಈ ಪಂದ್ಯದಲ್ಲಿ ಗೆಲುವು ನಮಗೆ ತುಂಬಾ ಮುಖ್ಯವಾಗಿತ್ತು. ಹೋಮ್ ಗ್ರೌಂಡ್ನಲ್ಲಿ ಜಯ ಸಾಧಿಸಿದ್ದು ಸಂಸತವಾಗಿದೆ. ನೀವು ಅಭ್ಯಾಸ ನಡೆಸಿದಷ್ಟು ಪಂದ್ಯದಲ್ಲಿ ಆಡಲು ಸುಲಭವಾಗುತ್ತದೆ ಎಂದು ಹೇಳಿದ್ದಾರೆ.
8 / 9
ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಕೂಡ ಸೂರ್ಯಕುಮಾರ್ ಆಟವನ್ನು ಹಾಡಿಹೊಗಳಿದ್ದಾರೆ. ಸೂರ್ಯಕುಮಾರ್ ಅವರ ಬ್ಯಾಟಿಂಗ್ ಅದ್ಭುತವಾಗಿತ್ತು. ಅವರಿಂದ ಅತ್ಯುತ್ತಮ ಪ್ರದರ್ಶನ ಮೂಡಿಬಂದಿದೆ. ಅವರು ಸೆಟಲ್ ಆಗಿ ಸ್ಫೋಟಕ ಆಟಕ್ಕೆ ಮುಂದಾದರೆ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
9 / 9
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಗ್ಲೆನ್ ಮ್ಯಾಕ್ಸ್ವೆಲ್ ಅವರ 68 ಹಾಗೂ ಡುಪ್ಲೆಸಿಸ್ ಅವರ 65 ರನ್ಗಳ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಪರ ಸೂರ್ಯಕುಮಾರ್(83), ನೆಹಾಲ್ ವಧೀರ(ಅಜೇಯ 52) ಬ್ಯಾಟ್ ಬೀಸಿ16.3 ಓವರ್ನಲ್ಲೇ ಗೆಲುವು ಸಾಧಿಸಿತು.