ಪಂದ್ಯಶ್ರೇಷ್ಠ ಸ್ವೀಕರಿಸುವ ವೇಳೆ ತನ್ನನ್ನು ತಾನೇ ಹೊಗಳಿಕೊಂಡ ಕೊಹ್ಲಿ?: ಏನಂದ್ರು ನೋಡಿ
Virat Kohli Post Match Presentation, IND vs PAK Asia Cup: ಏಷ್ಯಾಕಪ್ನಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ನೀಡಿದ ಅದ್ಭುತ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಒದಗಿಬಂತು. ಆದರೆ, ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ವೇಳೆ ವಿರಾಟ್ ಆಡಿದ ಕೆಲವು ಮಾತುಗಳು ಇದೀಗ ವೈರಲ್ ಆಗುತ್ತಿದೆ. ಇಲ್ಲಿ ಕೊಹ್ಲಿ ತನ್ನನ್ನು ತಾನೇ ಹೊಗಳಿಕೊಂಡಿದ್ದಾರೆ ಎಂದು ಕೆಲವು ಹೇಳುತ್ತಿದ್ದಾರೆ.
1 / 8
ಏಷ್ಯಾಕಪ್ 2023ರ ಸೂಪರ್ -4 ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಜಯ ಸಾಧಿಸಲು ವಿರಾಟ್ ಕೊಹ್ಲಿ ಪ್ರಮುಖ ಪಾತ್ರವಹಿಸಿದರು. ಕೇವಲ 94 ಎಸೆತಗಳಲ್ಲಿ 9 ಫೋರ್, 3 ಸಿಕ್ಸರ್ ಸಿಡಿಸಿದ ಕೊಹ್ಲಿ ಅಜೇಯ 122 ರನ್ ಚಚ್ಚಿದರು. ಇದರ ಜೊತೆಗೆ ಹಲವು ದಾಖಲೆ ಕೂಡ ನಿರ್ಮಾಣ ಮಾಡಿದರು.
2 / 8
ಕೊಹ್ಲಿ ನೀಡಿದ ಈ ಅದ್ಭುತ ಪ್ರದರ್ಶನಕ್ಕೆ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಒದಗಿಬಂತು. ಆದರೆ, ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ವೇಳೆ ವಿರಾಟ್ ಆಡಿದ ಕೆಲವು ಮಾತುಗಳು ಇದೀಗ ವೈರಲ್ ಆಗುತ್ತಿದೆ. ಇಲ್ಲಿ ಕೊಹ್ಲಿ ತನ್ನನ್ನು ತಾನೇ ಹೊಗಳಿಕೊಂಡಿದ್ದಾರೆ ಎಂದು ಕೆಲವರು ಎಕ್ಸ್ (ಟ್ವಿಟ್ಟರ್) ನಲ್ಲಿ ಬರೆದುಕೊಂಡಿದ್ದಾರೆ.
3 / 8
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ''ಈ ಸಂದರ್ಶನವನ್ನು ಆದಷ್ಟು ಬೇಗ ಮುಗಿಸಿ, ನನಗೆ ತುಂಬಾ ಸುಸ್ತಾಗಿದೆ,'' ಎಂದು ಆರಂಭದಲ್ಲೇ ಹೇಳಿದರು. ಇದರ ಜೊತೆಗೆ ಒಂದು ದಿನದ ಒಳಗೆ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ತಯಾರಾಗಬೇಕಲ್ಲವೇ? ಎಂದು ಕೇಳಿದ ಪ್ರಶ್ನೆಗೆ ಕೊಹ್ಲಿ ನೀಡಿದ ಉತ್ತರ ಅಚ್ಚರಿಗೊಳಿಸಿತು.
4 / 8
ಏಕದಿನ ಕ್ರಿಕೆಟ್‌ಗೆ ಮರಳಿ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ. ಆದರೆ ನಾನು ನಾಳೆ (ಇಂದು) ಮಧ್ಯಾಹ್ನ 3 ಗಂಟೆಗೆ ಶ್ರೀಲಂಕಾ ವಿರುದ್ಧ ಆಡಬೇಕು. ಅದೃಷ್ಟವಶಾತ್, ನಾವು ಟೆಸ್ಟ್ ಆಟಗಾರರು, ನಾನು 100 ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದೇನೆ. ಹೀಗಾಗಿ ಇಂದು ಪಂದ್ಯ ಆಡಿ ಮರುದಿನ ಇದಕ್ಕೆ ಹೇಗೆ ತಯಾರಾಗಬೇಕು, ಯಾವರೀತಿ ಆಡಬೇಕೆಂದು ನನಗೆ ತಿಳಿದಿದೆ ಎಂದು ಕೊಹ್ಲಿ ಹೇಳಿದ್ದಾರೆ.
5 / 8
ತಂಡಕ್ಕೆ ವಿವಿಧ ರೀತಿಯಲ್ಲಿ ಸಹಾಯ ಮಾಡಲು ನಾನು ಯಾವಾಗಲೂ ಸಿದ್ಧನಿದ್ದೇನೆ. ಇಂದು, ಕೆಎಲ್ ರಾಹುಲ್ ಉತ್ತಮ ಆರಂಭವನ್ನು ತಂದುಕೊಟ್ಟರು. ಈ ಸಂದರ್ಭ ನನ್ನ ಕೆಲಸವು ಕೇವಲ ಸ್ಟ್ರೈಕ್ ಅನ್ನು ರೊಟೆಟ್ ಮಾಡುವುದು ಆಗಿತ್ತು. ಸುಲಭವಾಗಿ ರನ್ ಗಳಿಸಲು ನಾನು ಹೆಚ್ಚು ಪ್ರಯತ್ನಿಸುತ್ತೇನೆ ಎಂಬುದು ಕೊಹ್ಲಿ ಮಾತು.
6 / 8
ನಾನು ಈ ಪಂದ್ಯದಲ್ಲಿ ಕೆಲ ವಿಶೇಷ ಶಾಟ್‌ಗಳನ್ನು ಆಡಿದೆ. ಶತಕ ಬಾರಿಸಿ ಆ ಶಾಟ್ ಆಡಿದ್ದರಿಂದ ಅದಕ್ಕೆ ಸ್ವಲ್ಪ ಗೌರವವಿತ್ತು. ಸಾಮಾನ್ಯವಾಗಿ ನಾನು ಅಂತಹ ಶಾಟ್‌ಗಳನ್ನು ಆಡುವುದಿಲ್ಲ. ಅದನ್ನು ಆಡುವಾಗ ನಾನು ತುಂಬಾ ಕೆಟ್ಟದಾಗಿ ಕಾಣಿಸುತ್ತೇನೆ. ನಾನು ಮತ್ತು ರಾಹುಲ್ ಸಾಂಪ್ರದಾಯಿಕ ಕ್ರಿಕೆಟಿಗರು, ನಾವು ಅಂತಹ ಶಾಟ್ ಆಡಲು ಇಷ್ಟಪಡುವುದಿಲ್ಲ. ಭಾರತೀಯ ಕ್ರಿಕೆಟ್‌ಗೆ ನಮ್ಮ ಜೊತೆಯಾಟ ಉತ್ತಮ ಸೈನ್ ಆಗಿದೆ - ವಿರಾಟ್ ಕೊಹ್ಲಿ.
7 / 8
ನಾಯಕ ರೋಹಿತ್ ಶರ್ಮಾ ಕೂಡ ಕೊಹ್ಲಿ, ರಾಹುಲ್ ಆಟವನ್ನು ಹಾಡಿಹೊಗಳಿದರು. ಕೊಹ್ಲಿ ಮತ್ತು ರಾಹುಲ್ ಸೆಟಲ್ ಆಗಲು ನೋಡುತ್ತಾರೆ, ನಂತರ ಅವರು ಅಬ್ಬರಿಸುತ್ತಾರೆ ಎಂದು ನಮಗೆ ತಿಳಿದಿದೆ. ಕೊಹ್ಲಿ ಮತ್ತು ಕೆಎಲ್ ಅತ್ಯುತ್ತಮ ಬ್ಯಾಟಿಂಗ್ ನಡೆಸಿದರು. ವಿರಾಟ್ ಇನ್ನಿಂಗ್ಸ್ ಅದ್ಭುತವಾಗಿ ಸಾಗಿತ್ತು. ಕೆಎಲ್ ಇಂಜುರಿಯಿಂದ ಕಮ್ಬ್ಯಾಕ್ ಮಾಡಿ ಶತಕ ಸಿಡಿಸಿರುವುದು ಒಳ್ಳೆಯ ಸಂಗತಿ ಎಂಬುದು ರೋಹಿತ್ ಶರ್ಮಾ ಮಾತು.
8 / 8
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ರೋಹಿತ್, ಗಿಲ್ ಅರ್ಧಶತಕ, ಕೊಹ್ಲಿ, ರಾಹುಲ್ ಶತಕದ ನೆರಿವಿನಿಂದ 50 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ 32 ಓವರ್ಗಳಲ್ಲಿ ಕೇವಲ 128 ರನ್ಗಳಿಗೆ ಆಲೌಟ್ ಆಯಿತು. ಭಾರತ ಪರ ಕುಲ್ದೀಪ್ ಯಾದವ್ 5 ಓವರ್ಗೆ 26 ರನ್ ನೀಡಿ 5 ವಿಕೆಟ್ ಕಬಳಿಸಿದರು.