ಕಿಂಗ್ ಕೊಹ್ಲಿಯ 1 ಶತಕಕ್ಕೆ 10 ದಾಖಲೆಗಳು ಉಡೀಸ್..!

Virat Kohli's Record: ಈ ಪಂದ್ಯದಲ್ಲಿ 94 ಎಸೆತಗಳನ್ನು ಎದುರಿಸಿದ ಕೊಹ್ಲಿ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ ಅಜೇಯ 122 ರನ್​ ಬಾರಿಸಿದರು. ಇದರೊಂದಿಗೆ ಹಲವು ದಾಖಲೆಗಳು ಕಿಂಗ್ ಕೊಹ್ಲಿಯ ಪಾಲಾಯಿತು. ಆ ದಾಖಲೆಗಳಾವುವು ಎಂಬುದರ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ...

| Edited By: Zahir Yusuf

Updated on: Sep 11, 2023 | 10:56 PM

ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಇದರಲ್ಲಿ ವಿಶ್ವ ದಾಖಲೆಗಳು ಕೂಡ ಸೇರಿವೆ.

1 / 12
ಈ ಪಂದ್ಯದಲ್ಲಿ 94 ಎಸೆತಗಳನ್ನು ಎದುರಿಸಿದ ಕೊಹ್ಲಿ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ ಅಜೇಯ 122 ರನ್​ ಬಾರಿಸಿದರು. ಇದರೊಂದಿಗೆ ಹಲವು ದಾಖಲೆಗಳು ಕಿಂಗ್ ಕೊಹ್ಲಿಯ ಪಾಲಾಯಿತು. ಆ ದಾಖಲೆಗಳಾವುವು ಎಂಬುದರ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ...

2 / 12
1- ಶತಕದ ಸರದಾರ: ಏಷ್ಯಾಕಪ್​ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಇದೀಗ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಇದುವರೆಗೆ 4 ಸೆಂಚುರಿಗಳನ್ನು ಸಿಡಿಸಿದ್ದಾರೆ.

3 / 12
2- 13 ಸಾವಿರ ರನ್: ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗವಾಗಿ 13 ಸಾವಿರ ರನ್ ಪೂರೈಸಿದ ವಿಶ್ವ ದಾಖಲೆಯನ್ನು ಕಿಂಗ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ವಿರಾಟ್ ಕೇವಲ 267 ಇನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

4 / 12
3- ಸೆಂಚುರಿ ಸ್ಟೇಡಿಯಂ: ಒಂದೇ ಮೈದಾನದಲ್ಲಿ ಸತತ 4 ಶತಕಗಳನ್ನು ಬಾರಿಸಿದ ವಿಶೇಷ ದಾಖಲೆ ಕೂಡ ಕಿಂಗ್ ಕೊಹ್ಲಿ ಪಾಲಾಗಿದೆ. ಅಂದರೆ ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ಆಡಿದ ಕೊನೆಯ 4 ಇನಿಂಗ್ಸ್​ನಲ್ಲಿ ಕೊಹ್ಲಿ 128*(119), 131(96), 110*(116), 122* (94) ಶತಕ ಸಿಡಿಸಿದ್ದಾರೆ.

5 / 12
4- ಟಾಪ್-5 ಬ್ಯಾಟರ್ಸ್​: ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಟಾಪ್-5 ಬ್ಯಾಟರ್​ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಸೇರ್ಪಡೆಯಾಗಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (18426 ರನ್)  ಅಗ್ರಸ್ಥಾನದಲ್ಲಿದ್ದು, ಕಿಂಗ್ ಕೊಹ್ಲಿ (13024) 5ನೇ ಸ್ಥಾನ ಅಲಂಕರಿಸಿದ್ದಾರೆ.

6 / 12
5- 47ನೇ ಶತಕ: ಸಚಿನ್ ತೆಂಡೂಲ್ಕರ್ (49 ಶತಕಗಳು) ಬಳಿಕ ಏಕದಿನ ಕ್ರಿಕೆಟ್​ನಲ್ಲಿ 47 ಶತಕಗಳನ್ನು ಸಿಡಿಸಿದ ವಿಶ್ವದ ಎರಡನೇ ಬ್ಯಾಟರ್ ಎಂಬ ವಿಶ್ವ ದಾಖಲೆ ಕೂಡ ಕೊಹ್ಲಿ ಪಾಲಾಗಿದೆ.

7 / 12
6- ರನ್ ಮೆಷಿನ್: ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 8 ಸಾವಿರದಿಂದ 13 ಸಾವಿರ ರನ್​ ಕಲೆಹಾಕಿದ ವಿಶ್ವ ದಾಖಲೆ ಕೂಡ ವಿರಾಟ್ ಕೊಹ್ಲಿ ಹೆಸರಿಗೆ ಸೇರ್ಪಡೆಯಾಗಿದೆ.

8 / 12
7- 77 ಶತಕಗಳ ಸಾಧನೆ: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ವೇಗವಾಗಿ 77 ಶತಕಗಳನ್ನು ಸಿಡಿಸಿದ ವಿಶ್ವ ದಾಖಲೆ ಕೂಡ ವಿರಾಟ್ ಕೊಹ್ಲಿಯ ಪಾಲಾಗಿದೆ. ಇದಕ್ಕೂ ಮುನ್ನ 594 ಇನಿಂಗ್ಸ್​ಗಳಲ್ಲಿ ಸಚಿನ್ 77 ಶತಕ ಸಿಡಿಸಿದ್ದರು. ಇದೀಗ ಕೇವಲ 561 ಇನಿಂಗ್ಸ್​ಗಳ ಮೂಲಕ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

9 / 12
8- 50+ ಸ್ಕೋರ್ಸ್​: ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಬಾರಿ 50+ ಸ್ಕೋರ್ ಗಳಿಸಿದ ವಿಶ್ವದ ಮೂರನೇ ಬ್ಯಾಟರ್ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ (145) ಅಗ್ರಸ್ಥಾನದಲ್ಲಿದ್ದರೆ, ಕುಮಾರ ಸಂಗಾಕ್ಕರ (118) ದ್ವಿತೀಯ ಸ್ಥಾನದಲ್ಲಿದ್ದಾರೆ. ಇದೀಗ 112ನೇ ಬಾರಿ 50+ ಸ್ಕೋರ್​ಗಳಿಸುವ ಮೂಲಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿದ್ದಾರೆ.

10 / 12
9- 1000 ರನ್​: ಪಾಕ್ ವಿರುದ್ಧದ ಶತಕದೊಂದಿಗೆ ವಿರಾಟ್ ಕೊಹ್ಲಿ 2023 ರಲ್ಲಿ ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಅತೀ ಹೆಚ್ಚು ವರ್ಷ ಸಾವಿರ ರನ್ ಪೂರೈಸಿದ 2ನೇ ಬ್ಯಾಟರ್​ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು, ಮಾಸ್ಟರ್ ಬ್ಲಾಸ್ಟರ್ 16 ಬಾರಿ ಪ್ರತಿ ವರ್ಷ ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದರು. ಇದೀಗ ವಿರಾಟ್ ಕೊಹ್ಲಿ 12ನೇ ಬಾರಿ ವರ್ಷದಲ್ಲಿ 1000 ಸಾವಿರ ರನ್ ಪೂರೈಸಿದ್ದಾರೆ.

11 / 12
10- ಸೆಂಚುರಿ ಸರದಾರ: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 77 ಶತಕಗಳನ್ನು ಬಾರಿಸಿದ ವಿಶ್ವದ 2ನೇ ಬ್ಯಾಟರ್​ ಎಂಬ ದಾಖಲೆ ಕೂಡ ಕಿಂಗ್ ಕೊಹ್ಲಿ ಪಾಲಾಗಿದೆ. ಈ ಪಟ್ಟಿಯಲ್ಲಿ ಒಟ್ಟು 100 ಸೆಂಚುರಿ ಸಿಡಿಸಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು, ಈ ವಿಶ್ವ ದಾಖಲೆಯನ್ನು ಮುರಿಯಲು ಕಿಂಗ್ ಕೊಹ್ಲಿಗೆ ಇನ್ನೂ 24 ಶತಕಗಳ ಅವಶ್ಯಕತೆಯಿದೆ.

12 / 12
Follow us
ಕಾವೇರಿ ಹೋರಾಟದ ಬಗ್ಗೆ ವಿನೋದ್ ರಾಜ್​ ದಿಟ್ಟ ಮಾತು

ಯಾದಗಿರಿ: ಕೋಳಿ ಪಂದ್ಯದ ವೇಳೆ ಹುಂಜಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ

ಕಿಮ್ಸ್​ ಆವರಣದಲ್ಲೇ ಡಿಜೆ ಹಾಡಿಗೆ ಕುಣಿದ ವಿದ್ಯಾರ್ಥಿಗಳು; ವಿಡಿಯೋ ನೋಡಿ

ಗಣೇಶನ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!

ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ

ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video

ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ

ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ

ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ

‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​