
ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 100 ಅಥ್ಲೀಟ್‌ಗಳ ಪಟ್ಟಿಯಲ್ಲಿ ಕೇವಲ ಇಬ್ಬರು ಏಷ್ಯನ್ನರು ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ. ಭಾರತದ ಅತ್ಯಂತ ಪ್ರಸಿದ್ಧ ಮತ್ತು ಶ್ರೀಮಂತ ಅಥ್ಲೀಟ್ ವಿರಾಟ್ ಕೊಹ್ಲಿ 2022 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 100 ರ ಪೈಕಿ ದೇಶದಿಂದ ಒಬ್ಬರೇ ಆಗಿದ್ದಾರೆ.

ಸುಮಾರು 1,000 ಕೋಟಿಗೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿರುವ ಕೊಹ್ಲಿ, 2022 ರಲ್ಲಿ ಸ್ಪೋರ್ಟಿಕೊದ ಟಾಪ್ 100 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯಲ್ಲಿ 61 ನೇ ಸ್ಥಾನದಲ್ಲಿದ್ದಾರೆ.

ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಕೊಹ್ಲಿ ಭಾರತೀಯ ರಾಷ್ಟ್ರೀಯ ತಂಡದಲ್ಲಿ ಆಡಿದ ಆಟ ಹೊರತುಪಡಿಸಿ, ಉಳಿದ ಕಡೆಗಳಿಂದ 2.9 ಮಿಲಿಯನ್ ಡಾಲರ್ ವೇತನವನ್ನು ಪಡೆಯುತ್ತಾರೆ.

ಕೊಹ್ಲಿ ಜಾಹೀರಾತುಗಳ ಮೂಲಕ ಸುಮಾರು 31 ಮಿಲಿಯನ್ ಡಾಲರ್ ಪಡೆಯುತ್ತಾರೆ. ಕೊಹ್ಲಿ ಒಟ್ಟು ನಿವ್ವಳ ಆದಾಯವು 33.9 ಮಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ.

ವಿರಾಟ್ ಕೊಹ್ಲಿ 2021 ರಲ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 100 ಕ್ರೀಡಾಪಟುಗಳ ಪಟ್ಟಿಯಲ್ಲಿ 59 ನೇ ಸ್ಥಾನದಲ್ಲಿದ್ದರು. ಆದರೆ ಈ ವರ್ಷ ಎರಡು ಸ್ಥಾನ ಕೆಳಕ್ಕೆ ಇಳಿದು 61 ನೇ ಸ್ಥಾನದಲ್ಲಿದ್ದಾರೆ. ಈ ಹಿಂದೆಯೂ ಕೂಡಾ ಏಷ್ಯಾದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಲ್ಲಿ ಕಿಂಗ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಕೊಹ್ಲಿಯನ್ನು ಹೊರತುಪಡಿಸಿ, ಏಷ್ಯಾದ ಏಕೈಕ ಅಥ್ಲೀಟ್ ಜಪಾನಿನ ಟೆನಿಸ್ ತಾರೆ 25 ವರ್ಷ ವಯಸ್ಸಿನ ನವೋಮಿ ಒಸಾಕಾ ಇದ್ದಾರೆ. ಇವರು ತಮ್ಮ ವೃತ್ತಿಜೀವನದಲ್ಲಿ 4 ಗ್ರ್ಯಾಂಡ್ ಸ್ಲಾಮ್ಸ್, ಎರಡು ಯುಎಸ್ ಓಪನ್ ಮತ್ತು ಎರಡು ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದಾರೆ.

ಯುಎಸ್ ಮತ್ತು ಯುರೋಪಿಯನ್ ಅಥ್ಲೀಟ್‌ಗಳು ಪ್ರಾಬಲ್ಯ ಹೊಂದಿರುವ ಪಟ್ಟಿಯಲ್ಲಿ ಒಸಾಕಾ 20 ನೇ ಸ್ಥಾನದಲ್ಲಿ ಮತ್ತು ಏಷ್ಯನ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ.

ಒಸಾಕಾ ಅವರ ಒಟ್ಟು ಗಳಿಕೆಯನ್ನು $53.2 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಕೇವಲ $1.2 ಮಿಲಿಯನ್ ಗೆಲುವಿನಿಂದ ಬಂದರೆ $52 ಮಿಲಿಯನ್ ಜಾಹೀರಾತುಗಳಿಂದ ಗಳಿಸುತ್ತಾರೆ. ಒಸಾಕಾ ಅವರು ಈ ಪಟ್ಟಿಯಲ್ಲಿ ಎರಡನೇ ಟೆನಿಸ್ ಆಟಗಾರರಾಗಿದ್ದಾರೆ.