Virat Kohli: ಇದು ವಿರಾಟ್ ಕೊಹ್ಲಿ ಕಟ್ಟಿದ ತಂಡ, ಅದಕ್ಕೆ ಗೆಲ್ತಿದೆ ಎಂದ ಗಂಭೀರ್

| Updated By: ಝಾಹಿರ್ ಯೂಸುಫ್

Updated on: Feb 22, 2023 | 6:24 PM

Virat Kohli: ವಿರಾಟ್ ಕೊಹ್ಲಿ ಅವರು ಟೆಸ್ಟ್ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದರು. ಇದೀಗ ರೋಹಿತ್ ಶರ್ಮಾ ಅವರ ಹಾದಿಯಲ್ಲಿ ಸಾಗುತ್ತಿದ್ದಾರೆ ಅಷ್ಟೇ.

1 / 7
ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಪಾರುಪತ್ಯ ಮುಂದುವರೆದಿದೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳನ್ನು ಟೀಮ್ ಇಂಡಿಯಾ ಕೇವಲ 3 ದಿನಗಳಲ್ಲಿ ಮುಕ್ತಾಯಗೊಳಿಸಿದೆ.

2 / 7
ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಆಟಗಾರರು ತೋರುತ್ತಿರುವ ಇಂತಹದೊಂದು ಅದ್ಭುತ ಪ್ರದರ್ಶನಕ್ಕೆ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಈ ಪ್ರಶಂಸೆಗಳ ನಡುವೆ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಕೊಂಡಾಡಿರುವುದು ವಿಶೇಷ.

3 / 7
ಭಾರತ ತಂಡ ಅದ್ಭುತವಾಗಿ ಗೆಲ್ಲುತ್ತಿದೆ ನಿಜ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ರೋಹಿತ್ ಶರ್ಮಾ ಅದ್ಭುತ ನಾಯಕ ಎಂದು ನಾನು ಸಹ ನಂಬುತ್ತೇನೆ. ಆದರೆ ನಿಜ ವಿಷಯ ಎಂದರೆ ಟೆಸ್ಟ್ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಾಯಕತ್ವದ ನಡುವೆ ವಿಶೇಷ ವ್ಯತ್ಯಾಸವಿಲ್ಲ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

4 / 7
ವಿರಾಟ್ ಕೊಹ್ಲಿ ಅವರು ಟೆಸ್ಟ್ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದರು. ಇದೀಗ ರೋಹಿತ್ ಶರ್ಮಾ ಅವರ ಹಾದಿಯಲ್ಲಿ ಸಾಗುತ್ತಿದ್ದಾರೆ ಅಷ್ಟೇ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ರೋಹಿತ್ ತಮ್ಮದೇ ಆದ ಹೊಸ ಯೋಜನೆಯನ್ನು ಟೆಸ್ಟ್​ ಕ್ರಿಕೆಟ್​ ನಾಯಕತ್ವದಲ್ಲಿ ರಚಿಸಿಲ್ಲ. ಬದಲಾಗಿ ವಿರಾಟ್ ಕೊಹ್ಲಿ ಅಶ್ವಿನ್ ಮತ್ತು ಜಡೇಜಾರನ್ನು ಬಳಸುತ್ತಿದ್ದ ರೀತಿಯನ್ನೇ ಇಲ್ಲಿ ಮುಂದುವರೆಸುತ್ತಿದ್ದಾರೆ ಎಂದು ಗಂಭೀರ್ ಹೇಳಿದರು.

5 / 7
ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ಗೆ ಹೋದಾಗ ರೋಹಿತ್ ಶರ್ಮಾಗೆ ನಿಜವಾದ ಸವಾಲು ಎದುರಾಗಲಿದೆ. ಏಕೆಂದರೆ ಅಲ್ಲಿ ಬಲಿಷ್ಠ ತಂಡವನ್ನು ರೂಪಿಸಿ ವಿರಾಟ್ ಕೊಹ್ಲಿ ಎಲ್ಲಾ ಸವಾಲುಗಳನ್ನು ಗೆದ್ದಿದ್ದಾರೆ. ಇದಕ್ಕೆ ಸಾಕ್ಷಿಯೇ ಪ್ರಸ್ತುತ ತಂಡದಲ್ಲಿರುವ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರಿತ್ ಬುಮ್ರಾ, ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್.

6 / 7
ಈ ಎಲ್ಲಾ ಆಟಗಾರರನ್ನು ಒಳಗೊಂಡಂತಹ ಬಲಿಷ್ಠ ತಂಡವನ್ನು ಕಟ್ಟಿದ್ದೇ ವಿರಾಟ್ ಕೊಹ್ಲಿ. ಇದೇ ಕಾರಣದಿಂದಾಗಿ ನಾನು ಈ ತಂಡವನ್ನು ಕಟ್ಟಿದ್ದು ವಿರಾಟ್ ಕೊಹ್ಲಿ ಅಂದಿರುವುದು. ಇದೀಗ ಈ ತಂಡ ಭಾರತದಲ್ಲಿ ಗೆಲ್ಲುತ್ತಿದೆ. ಆದರೆ ಇದೇ ತಂಡವನ್ನು ಸಾಗರೋತ್ತರದಲ್ಲಿ ಮುನ್ನಡೆಸಬೇಕಿರುವುದು ರೋಹಿತ್ ಶರ್ಮಾ ಮುಂದಿರುವ ಸವಾಲು.

7 / 7