Virat Kohli: ಸ್ಟೀವ್ ಸ್ಮಿತ್ ಸೆಂಚುರಿ ದಾಖಲೆ ಸರಿಗಟ್ಟುವ ಸನಿಹದಲ್ಲಿ ಕಿಂಗ್ ಕೊಹ್ಲಿ

| Updated By: ಝಾಹಿರ್ ಯೂಸುಫ್

Updated on: Dec 25, 2023 | 7:59 AM

Virat Kohli Records: ಟೆಸ್ಟ್​ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಇದುವರೆಗೆ ಬಾರಿಸಿರುವ ಶತಕಗಳ ಸಂಖ್ಯೆ 29. ಇದರಲ್ಲಿ ವಿದೇಶಿ ಪಿಚ್​ನಲ್ಲಿ ಕಿಂಗ್ ಕೊಹ್ಲಿ ಬ್ಯಾಟ್​ನಿಂದ ಮೂಡಿಬಂದಿರುವ ಸೆಂಚುರಿಗಳ ಸಂಖ್ಯೆ 15. ಅಂದರೆ ಸ್ಮಿತ್​​ಗಿಂತ ಕೊಹ್ಲಿ ಒಂದು ಶತಕದಿಂದ ಹಿಂದಿದ್ದಾರೆ.

1 / 6
ಸೆಂಚುರಿಯನ್​ನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಮೂಲಕ ವಿರಾಟ್ ಕೊಹ್ಲಿ (Virat Kohli) ವಿಶೇಷ ದಾಖಲೆ ಬರೆಯಬಹುದು. ಅದು ಕೂಡ ಟೆಸ್ಟ್ ಸ್ಪೆಷಲಿಸ್ಟ್ ಸ್ಟೀವ್ ಸ್ಮಿತ್ (Steve Smith) ಅವರ ಸೆಂಚುರಿ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

2 / 6
ಟೆಸ್ಟ್​ ಕ್ರಿಕೆಟ್​ನಲ್ಲಿ ವಿದೇಶದಲ್ಲಿ ಅತ್ಯಧಿಕ ಶತಕ ಸಿಡಿಸಿರುವ ಸಕ್ರೀಯ ಬ್ಯಾಟರ್​ಗಳ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ ಅಗ್ರಸ್ಥಾನದಲ್ಲಿದ್ದಾರೆ. ಸ್ಮಿತ್ ಇದುವರೆಗೆ 32 ಶತಕಗಳನ್ನು ಸಿಡಿಸಿದ್ದಾರೆ. ಇದರಲ್ಲಿ 16 ಸೆಂಚುರಿಗಳು ಮೂಡಿಬಂದಿರುವುದು ವಿದೇಶದಲ್ಲಿ ಎಂಬುದು ವಿಶೇಷ.

3 / 6
ಇತ್ತ ಟೆಸ್ಟ್​ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಇದುವರೆಗೆ ಬಾರಿಸಿರುವ ಶತಕಗಳ ಸಂಖ್ಯೆ 29. ಇದರಲ್ಲಿ ವಿದೇಶಿ ಪಿಚ್​ನಲ್ಲಿ ಕಿಂಗ್ ಕೊಹ್ಲಿ ಬ್ಯಾಟ್​ನಿಂದ ಮೂಡಿಬಂದಿರುವ ಸೆಂಚುರಿಗಳ ಸಂಖ್ಯೆ 15. ಅಂದರೆ ಸ್ಮಿತ್​​ಗಿಂತ ಕೊಹ್ಲಿ ಒಂದು ಶತಕದಿಂದ ಹಿಂದಿದ್ದಾರೆ.

4 / 6
ಒಂದು ವೇಳೆ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದರೆ, ವಿದೇಶದಲ್ಲಿ ಅತ್ಯಧಿಕ ಸೆಂಚುರಿ ಬಾರಿಸಿದ ಸಕ್ರೀಯ ಬ್ಯಾಟರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸ್ಮಿತ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.

5 / 6
ಆಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್​ನಲ್ಲಿ 30 ಶತಕಗಳನ್ನು ಸಿಡಿಸಿರುವ ಬ್ಯಾಟರ್​ಗಳ ಪಟ್ಟಿಗೂ ವಿರಾಟ್ ಕೊಹ್ಲಿ ಎಂಟ್ರಿ ಕೊಡಲಿದ್ದಾರೆ. ಅದರಂತೆ ಸೆಂಚುರಿಯನ್​ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಕಿಂಗ್ ಕೊಹ್ಲಿ ಬ್ಯಾಟ್​​ನಿಂದ ಸೆಂಚುರಿ ಮೂಡಿಬರಲಿದೆಯಾ ಕಾದು ನೋಡೋಣ.

6 / 6
ವಿದೇಶಿ ಟೆಸ್ಟ್​ ಪಂದ್ಯಗಳಲ್ಲಿ ಅತ್ಯಧಿಕ ಶತಕ ಬಾರಿಸಿದ ಬ್ಯಾಟರ್​ಗಳು: ಸ್ಟೀವ್ ಸ್ಮಿತ್ (16), ವಿರಾಟ್ ಕೊಹ್ಲಿ (15), ಕೇನ್ ವಿಲಿಯಮ್ಸನ್ (13), ಜೋ ರೂಟ್ (12), ಚೇತೇಶ್ವರ ಪೂಜಾರ (9).

Published On - 7:59 am, Mon, 25 December 23