Virat Kohli: ಐಪಿಎಲ್ ಇತಿಹಾಸದಲ್ಲಿ ಯಾರೂ ಮಾಡಿರದ ದಾಖಲೆ ಸೃಷ್ಟಿಸಲು ವಿರಾಟ್ ಕೊಹ್ಲಿ ಸಜ್ಜು
RR vs RCB, IPl 2022: ಕೊಹ್ಲಿ ಒಂದು ಬೌಂಡರಿ ಬಾರಿಸಿದ ತಕ್ಷಣ ಐಪಿಎಲ್ ನಲ್ಲಿ 550 ಬೌಂಡರಿಗಳನ್ನು ಸಿಡಿಸಿದಂತಾಗುತ್ತದೆ. ಇದರೊಂದಿಗೆ 550 ಬೌಂಡರಿಗಳ ಸಹಿತ 200 ಸಿಕ್ಸರ್ ಗಳನ್ನು ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಇದು ವರೆಗೆ ಐಪಿಎಲ್ ನಲ್ಲಿ ಯಾರೂ ಈ ಸಾಧನೆ ಮಾಡಿಲ್ಲ.
1 / 4
ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ (RR vs RCB) ನಡುವೆ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಆರ್ ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ ಕೊಹ್ಲಿ ಒಂದು ಫೋರ್ ಬಾರಿಸಿದರೆ ವಿಶೇಷ ದಾಖಲೆ ನಿರ್ಮಾಣವಾಗಲಿದೆ.
2 / 4
ಹೌದು, ಕೊಹ್ಲಿ ಒಂದು ಬೌಂಡರಿ ಬಾರಿಸಿದ ತಕ್ಷಣ ಐಪಿಎಲ್ ನಲ್ಲಿ 550 ಬೌಂಡರಿಗಳನ್ನು ಸಿಡಿಸಿದಂತಾಗುತ್ತದೆ. ಇದರೊಂದಿಗೆ 550 ಬೌಂಡರಿಗಳ ಸಹಿತ 200 ಸಿಕ್ಸರ್ ಗಳನ್ನು ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಇದು ವರೆಗೆ ಐಪಿಎಲ್ ನಲ್ಲಿ ಯಾರೂ ಈ ಸಾಧನೆ ಮಾಡಿಲ್ಲ.
3 / 4
ಅಂದಹಾಗೆ, ಐಪಿಎಲ್ ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ದಾಖಲೆ ಶಿಖರ್ ಧವನ್ ಹೆಸರಿನಲ್ಲಿದೆ. ಅವರು ಇಲ್ಲಿಯವರೆಗೆ 664 ಬೌಂಡರಿಗಳನ್ನು ಗಳಿಸಿದ್ದಾರೆ. ಅದೇ ಸಮಯದಲ್ಲಿ, ವಿರಾಟ್ ಎರಡನೇ ಸ್ಥಾನದಲ್ಲಿದ್ದರೆ, ಡೇವಿಡ್ ವಾರ್ನರ್ 526 ಬೌಂಡರಿಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
4 / 4
ಐಪಿಎಲ್ ನಲ್ಲಿ ಅತಿ ಹೆಚ್ಚು 355 ಸಿಕ್ಸರ್ ಗಳ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ವಿರಾಟ್ ಕೊಹ್ಲಿ ಇದುವರೆಗೆ 212 ಸಿಕ್ಸರ್ ಗಳೊಂದಿಗೆ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.
Published On - 11:48 am, Tue, 5 April 22