ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಬ್ಯಾಟರ್ಗಳನ್ನ ನೋಡಿ ಕಲಿಯಬೇಕು: ಚೇತೇಶ್ವರ ಪೂಜಾರ
Australia vs India: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯವು ಡಿಸೆಂಬರ್ 14 ರಿಂದ ಶುರುವಾಗಲಿದೆ. ಬ್ರಿಸ್ಬೇನ್ನ ಗಬ್ಬಾ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಈ ಪಂದ್ಯದಲ್ಲಿ ಗೆದ್ದ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ.
1 / 5
ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆದ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್ಗಳನ್ನು ಎದುರಿಸುವಲ್ಲಿ ಭಾರತೀಯ ಬ್ಯಾಟರ್ಗಳು ತಡಕಾಡಿದ್ದರು. ಅದರಲ್ಲೂ ವಿರಾಟ್ ಕೊಹ್ಲಿ ಎರಡೂ ಇನಿಂಗ್ಸ್ಗಳಲ್ಲೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು.
2 / 5
ಮೊದಲ ಇನಿಂಗ್ಸ್ನಲ್ಲಿ 7 ರನ್ ಬಾರಿಸಿದ್ದ ಕೊಹ್ಲಿ, ದ್ವಿತೀಯ ಇನಿಂಗ್ಸ್ನಲ್ಲಿ 11 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಹೀಗೆ ಸುಲಭವಾಗಿ ವಿಕೆಟ್ ಕೈಚೆಲ್ಲಿದ ಕೊಹ್ಲಿಯ ಬ್ಯಾಟಿಂಗ್ ಸ್ಟ್ರಾಟಜಿಯನ್ನು ಟೀಮ್ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಪ್ರಶ್ನಿಸಿದ್ದಾರೆ.
3 / 5
ವಿರಾಟ್ ಕೊಹ್ಲಿ ಪರ್ತ್ ಟೆಸ್ಟ್ನಲ್ಲಿ ಮಾಡಿದ ತಪ್ಪನ್ನೇ ಅಡಿಲೇಡ್ನಲ್ಲೂ ಪುನರಾವರ್ತಿಸಿದ್ದಾರೆ. ಏಕೆಂದರೆ ಕ್ರೀಸ್ಗೆ ಆಗಮಿಸುತ್ತಿದ್ದಂತೆ ಕೊಹ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾಗುತ್ತಿದ್ದಾರೆ. ಇದೇ ಕಾರಣದಿಂದಾಗಿ ಅವರು ಬೇಗನೆ ವಿಕೆಟ್ ಕೈ ಚೆಲ್ಲಿದ್ದಾರೆ ಎಂದು ಚೇತೇಶ್ವರ ಪೂಜಾರ ಅಭಿಪ್ರಾಯಪಟ್ಟಿದ್ದಾರೆ.
4 / 5
ಅದೇ ಆಸ್ಟ್ರೇಲಿಯಾ ಆಟಗಾರರಾದ ನಾಥನ್ ಮೆಕ್ಸ್ವೀನಿ ಹಾಗೂ ಮಾರ್ನಸ್ ಲಾಬುಶೇನ್ ತುರ್ತಾಗಿ ರನ್ಗಳಿಸಲು ಮುಂದಾಗಲಿಲ್ಲ. ಬದಲಾಗಿ ಸಾಕಷ್ಟು ಎಸೆತಗಳನ್ನು ಅವರು ಬಿಟ್ಟಿದ್ದಾರೆ. ನೀವು ಪ್ರತಿ ಎಸೆತದಲ್ಲೂ ಶಾಟ್ ಆಡಲು ಸಾಧ್ಯವಿಲ್ಲ. ಇದನ್ನು ವಿರಾಟ್ ಕೊಹ್ಲಿ, ನಾಥನ್ ಮೆಕ್ಸ್ವೀನಿ ಹಾಗೂ ಮಾರ್ನಸ್ ಲಾಬುಶೇನ್ ಅವರ ಬ್ಯಾಟಿಂಗ್ ನೋಡಿ ಕಲಿಯಬೇಕು ಎಂದು ಪೂಜಾರ ಹೇಳಿದ್ದಾರೆ.
5 / 5
ನನ್ನ ಪ್ರಕಾರ ಪಿಂಕ್ ಬಾಲ್ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಔಟಾದ ಎಸೆತವನ್ನು ಸುಲಭವಾಗಿ ಬಿಡಬಹುದಿತ್ತು. ಅಲ್ಲದೆ ಚೆಂಡು ಬೌನ್ಸ್ ಆಗುತ್ತಿದೆ ಎಂಬುದು ಅವರಿಗೂ ಗೊತ್ತಿದೆ. ಆದರೆ ಕೊಹ್ಲಿ ಎಲ್ಲಾ ಎಸೆತಗಳನ್ನು ಆಡಬೇಕೆಂಬ ಮನಸ್ಥಿತಿಯಲ್ಲಿದ್ದಾರೆ. ಅದೇ ಆಸ್ಟ್ರೇಲಿಯಾ ಬ್ಯಾಟರ್ಗಳು ಎಸೆತಗಳನ್ನು ಆಯ್ಕೆ ಮಾಡಲು ಚುರುಕಾಗಿದ್ದರು. ಹೀಗಾಗಿ ಅಂತಹ ಎಸೆತಗಳನ್ನು ಮಾತ್ರ ಎದುರಿಸಿ ಸ್ಕೋರ್ಗಳಿಸಿದ್ದಾರೆ. ಇದೇ ತಂತ್ರವನ್ನು ವಿರಾಟ್ ಕೊಹ್ಲಿ ಕೂಡ ಅನುಸರಿಸಬೇಕೆಂದು ಚೇತೇಶ್ವರ ಪೂಜಾರ ಸಲಹೆ ನೀಡಿದ್ದಾರೆ.