ಅಚ್ಚರಿ ಎನಿಸಿದರೂ ಸತ್ಯ… ವಿರಾಟ್ ಕೊಹ್ಲಿ ಹೀಗೆ ಬ್ಯಾಟ್ ಬೀಸಿದ್ದು ಇದೇ ಮೊದಲು

Updated on: Dec 07, 2025 | 12:00 PM

Virat Kohli Records: ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 302 ರನ್​ ಕಲೆಹಾಕುವ ಮೂಲಕ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದು ಕಿಂಗ್ ಕೊಹ್ಲಿಯ 12ನೇ ಏಕದಿನ ಸರಣಿ ಶ್ರೇಷ್ಠ ಪ್ರಶಸ್ತಿ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಸಚಿನ್ ತೆಂಡೂಲ್ಕರ್ (15 ಬಾರಿ) ಅತ್ಯಧಿಕ ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ.

1 / 5
ಸೌತ್ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಭರ್ಜರಿ ಪ್ರದರ್ಶನ ನೀಡಿದ್ದಾರೆ. ರಾಂಚಿಯಲ್ಲಿ ನಡೆದ ಮೊದಲ ಮ್ಯಾಚ್​ನಲ್ಲಿ 135 ರನ್ ಬಾರಿಸಿದ್ದ ಕಿಂಗ್ ಕೊಹ್ಲಿ ರಾಯ್​ಪುರದಲ್ಲಿ 102 ರನ್​ಗಳ ಇನಿಂಗ್ಸ್ ಆಡಿದ್ದರು. ಇನ್ನು ವಿಶಾಖಪಟ್ಟಣದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್​ನಿಂದ ಮೂಡಿಬಂದ ಸ್ಕೋರ್ 65 ರನ್​ಗಳು.

2 / 5
ಹೀಗೆ ಒಂದೇ ಸರಣಿಯಲ್ಲಿ ಕಿಂಗ್ ಕೊಹ್ಲಿ 302 ರನ್ ಕಲೆಹಾಕಿದ್ದಾರೆ. ಈ 302 ರನ್​ಗಳಲ್ಲಿ  12 ಸಿಕ್ಸರ್​ಗಳು ಕೂಡ ಒಳಗೊಂಡಿವೆ. ಅಂದರೆ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿ 10 ಕ್ಕಿಂತ ಹೆಚ್ಚು ಸಿಕ್ಸ್ ಬಾರಿಸಿದ್ದಾರೆ. 2008 ರಿಂದ ಏಕದಿನ ಸರಣಿ ಆಡುತ್ತಿರುವ ಕೊಹ್ಲಿ ಒಮ್ಮೆಯೂ ಸರಣಿಯೊಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸ್ ಬಾರಿಸಿಲ್ಲ ಎಂಬುದೇ ಸತ್ಯ.

3 / 5
2023 ಏಕದಿನ ವಿಶ್ವಕಪ್ ಹಾಗೂ 2023 ರಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ತಲಾ 9 ಸಿಕ್ಸ್ ಬಾರಿಸಿದ್ದರು. ಅದರಲ್ಲೂ 2023ರ ಏಕದಿನ ವಿಶ್ವಕಪ್​ನಲ್ಲಿ ವಿಶ್ವ ದಾಖಲೆಯ 765 ರನ್​ಗಳಿಸಿದರೂ ಕಿಂಗ್ ಕೊಹ್ಲಿ ಬ್ಯಾಟ್​ನಿಂದ ಮೂಡಿಬಂದಿದ್ದು ಕೇವಲ 9 ಸಿಕ್ಸ್​ಗಳು ಮಾತ್ರ.

4 / 5
ಆದರೆ ಈ ಬಾರಿ ಸೌತ್ ಆಫ್ರಿಕಾ ವಿರುದ್ಧ ಆರ್ಭಟಿಸಿದ ವಿರಾಟ್ ಕೊಹ್ಲಿ ಸಿಕ್ಸರ್​ಗಳ ಸುರಿಮಳೆಗೈದಿದ್ದಾರೆ. ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 7 ಸಿಕ್ಸ್ ಸಿಡಿಸಿದ್ದ ಕೊಹ್ಲಿ ರಾಯ್​ಪುರದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ 2 ಸಿಕ್ಸ್ ಬಾರಿಸಿದ್ದರು. ಇನ್ನು ಮೂರನೇ ಏಕದಿನ ಪಂದ್ಯದಲ್ಲಿ 3 ಸಿಕ್ಸರ್​ಗಳೊಂದಿಗೆ ಅಜೇಯ 65 ರನ್ ಸಿಡಿಸಿದ್ದಾರೆ.

5 / 5
ಈ ಮೂಲಕ 17 ವರ್ಷಗಳ ತಮ್ಮ ಏಕದಿನ ಕ್ರಿಕೆಟ್ ಕೆರಿಯರ್​ನಲ್ಲಿ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಒಂದೇ ಸರಣಿಯಲ್ಲಿ 12 ಸಿಕ್ಸರ್​ಗಳನ್ನು ಸಿಡಿಸಿದ್ದಾರೆ. ಇನ್ನು 296 ಏಕದಿನ ಇನಿಂಗ್ಸ್ ಆಡಿರುವ ಕೊಹ್ಲಿ ಬ್ಯಾಟ್​ನಿಂದ ಈವರೆಗೆ ಮೂಡಿಬಂದಿರುವ ಒಟ್ಟು ಸಿಕ್ಸರ್​ಗಳ ಸಂಖ್ಯೆ 165 ಮಾತ್ರ.

Published On - 11:58 am, Sun, 7 December 25