ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ನಿರ್ಮಿಸಿದ ವೆಸ್ಟ್ ಇಂಡೀಸ್

Updated on: Oct 22, 2025 | 7:32 AM

Bangladesh vs West Indies: ಏಕದಿನ ಕ್ರಿಕೆಟ್ ಶುರುವಾಗಿ 93 ವರ್ಷಗಳಾಗಿವೆ. ಈ 93 ವರ್ಷಗಳಲ್ಲಿ ಸಾವಿರಕ್ಕೂ ಅಧಿಕ ಪಂದ್ಯಗಳನ್ನಾಡಲಾಗಿದೆ. ಆದರೆ ಹಿಂದೆಂದೂ ಕಂಡರಿಯದ ಹಾಗೂ ಕೇಳರಿಯದ ರೀತಿಯಲ್ಲಿ ವೆಸ್ಟ್ ಇಂಡೀಸ್ ತಂಡವು ಏಕದಿನ ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದೆ.

1 / 5
93 ವರ್ಷಗಳ ಏಕದಿನ ಇತಿಹಾಸದಲ್ಲಿ ಹೊಸ ವಿಶ್ವ ದಾಖಲೆ (World Record) ನಿರ್ಮಾಣವಾಗಿದೆ. ಈ ದಾಖಲೆ ನಿರ್ಮಿಸಿರುವುದು ವೆಸ್ಟ್ ಇಂಡೀಸ್ (West Indies) ತಂಡ. ಅದು ಸಹ ಏಕದಿನ ಪಂದ್ಯದಲ್ಲಿ ಐವರು ಸ್ಪಿನ್ ಬೌಲರ್​ಗಳನ್ನು ಮಾತ್ರ ಬಳಸಿಕೊಳ್ಳುವ ಮೂಲಕ ಎಂಬುದು ವಿಶೇಷ.

2 / 5
ಹೌದು, ಢಾಕಾದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ಶೈ ಹೋಪ್ ಐವರು ಬೌಲರ್ ಗಳಿಂದ 50 ಓವರ್‌ಗಳನ್ನು ಮಾಡಿಸಿದ್ದಾರೆ. ಈ ಐವರು ಬೌಲರ್‌ಗಳು ಸ್ಪಿನ್ನರ್ ಗಳು ಎಂಬುದೇ ಇಲ್ಲಿ ವಿಶೇಷ.

3 / 5
ಅಂದರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 50 ಓವರ್‌ಗಳನ್ನು ಸ್ಪಿನ್ನರ್ ಗಳೇ ಎಸೆದಿದ್ದಾರೆ. ವೆಸ್ಟ್ ಇಂಡೀಸ್‌ನ ಸ್ಪಿನ್ನರ್ ಗಳಾದ ಅಕಿಲ್ ಹೊಸೈನ್, ರೋಸ್ಟನ್ ಚೇಸ್, ಖಾರಿ ಪಿಯರಿ, ಗುಡಕೇಶ್ ಮೋಟಿ ಹಾಗೂ ಅಲಿಕ್ ಅಥನಾಝ್ ತಲಾ 10 ಓವರ್‌ಗಳನ್ನು ಎಸೆದು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

4 / 5
ಇದಕ್ಕೂ ಮುನ್ನ ಇಂತಹದೊಂದು ವಿಶ್ವ ದಾಖಲೆ ಶ್ರೀಲಂಕಾ ತಂಡದ ಹೆಸರಿನಲ್ಲಿತ್ತು. ವೆಸ್ಟ್ ಇಂಡೀಸ್ (1996), ನ್ಯೂಝಿಲೆಂಡ್ (1998), ಆಸ್ಟ್ರೇಲಿಯಾ (2004) ವಿರುದ್ಧದ ಪಂದ್ಯಗಳಲ್ಲಿ ಶ್ರೀಲಂಕಾ ತಂಡವು ಸ್ಪಿನ್ನರ್ ಗಳಿಂದ 44 ಓವರ್‌ಗಳನ್ನು ಮಾಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

5 / 5
ಇದೀಗ ಈ ಭರ್ಜರಿ ದಾಖಲೆ ಮುರಿಯುವಲ್ಲಿ ವಿಂಡೀಸ್ ಪಡೆ ಯಶಸ್ವಿಯಾಗಿದೆ. ಢಾಕಾ ಪಿಚ್‌ನಲ್ಲಿ ಸ್ಪಿನ್ನರ್ ಗಳಾದ ಅಕಿಲ್ ಹೊಸೈನ್, ರೋಸ್ಟನ್ ಚೇಸ್, ಖಾರಿ ಪಿಯರಿ, ಗುಡಕೇಶ್ ಮೋಟಿ ಹಾಗೂ ಅಲಿಕ್ ಅಥನಾಝ್ ತಲಾ 10 ಓವರ್‌ಗಳೊಂದಿಗೆ 50 ಓವರ್ ಪೂರೈಸಿ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.