ಇಂಗ್ಲೆಂಡ್ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕನ್ನಡಿಗ
TV9 Web | Updated By: ಝಾಹಿರ್ ಯೂಸುಫ್
Updated on:
Oct 05, 2023 | 10:12 PM
Rachin Ravindra Records: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 96 ಎಸೆತಗಳನ್ನು ಎದುರಿಸಿದ ರಚಿನ್ 5 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 123 ರನ್ ಬಾರಿಸಿ ಮಿಂಚಿದ್ದಾರೆ.
1 / 7
ಅಹಮದಾಬಾದ್ನಲ್ಲಿ ನಡೆದ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡದ ಯುವ ದಾಂಡಿಗ ರಚಿನ್ ರವೀಂದ್ರ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಚಿನ್ 82 ಎಸೆತಗಳಲ್ಲಿ ಶತಕ ಪೂರೈಸಿದರು.
2 / 7
ಇದರೊಂದಿಗೆ ಏಕದಿನ ವಿಶ್ವಕಪ್ನಲ್ಲಿ ಶತಕ ಸಿಡಿಸಿದ ನ್ಯೂಝಿಲೆಂಡ್ನ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ 23 ವರ್ಷದ ರಚಿನ್ ರವೀಂದ್ರ ಪಾಲಾಯಿತು. ವಿಶೇಷ ಎಂದರೆ ರಚಿನ್ ಪೋಷಕರು ಮೂಲತಃ ಬೆಂಗಳೂರಿನವರು.
3 / 7
ನ್ಯೂಝಿಲೆಂಡ್ನಲ್ಲಿ ಸಾಫ್ಟ್ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ಬೆಂಗಳೂರು ಮೂಲದ ರವೀಂದ್ರ ಕೃಷ್ಣಮೂರ್ತಿ ಹಾಗೂ ದೀಪಾ ಕೃಷ್ಣಮೂರ್ತಿ ದಂಪತಿ ಪುತ್ರ. 1990ರಲ್ಲಿ ನ್ಯೂಝಿಲೆಂಡ್ಗೆ ತೆರಳಿದ್ದ ರಚಿನ್ ಅವರ ತಂದೆ ಅಲ್ಲಿ ಹಟ್ ಹಾಕ್ಸ್ ಕ್ರಿಕೆಟ್ ಕ್ಲಬ್ ಅನ್ನು ಸ್ಥಾಪಿಸಿದ್ದರು.
4 / 7
ಅಲ್ಲಿಯೇ ಕ್ರಿಕೆಟ್ ಅನ್ನು ಕರಗತ ಮಾಡಿಕೊಂಡ ರಚಿನ್ ರವೀಂದ್ರ ಹಲವು ಬಾರಿ ಭಾರತದಲ್ಲಿ ಟೂರ್ನಿಗಳನ್ನು ಆಡಲು ಬಂದಿದ್ದಾರೆ. ಅಲ್ಲದೆ ಕೆಲ ಕ್ಲಬ್ಗಳ ವಿರುದ್ಧ ಆಡಿದ ಅನುಭವಗಳನ್ನು ಸಹ ಹೊಂದಿದ್ದಾರೆ. ಹೀಗಾಗಿಯೇ ಇಲ್ಲಿನ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಲು ಯುವ ಆಟಗಾರನಿಗೆ ಕಷ್ಟವಾಗಲಿಲ್ಲ ಎನ್ನಬಹುದು.
5 / 7
ಅಷ್ಟೇ ಅಲ್ಲದೆ ರಚಿನ್ ಅವರ ತಂದೆ ಟೀಮ್ ಇಂಡಿಯಾದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಹಾಗೂ ಕರ್ನಾಟಕದ ಕ್ರಿಕೆಟಿಗ ಜೆ ಅರುಣ್ ಕುಮಾರ್ ಅವರ ಒಡನಾಡಿ. ಇತ್ತ ತಂದೆಯ ಗೆಳೆಯರ ಕ್ರಿಕೆಟ್ ಸಲಹೆಗಳೊಂದಿಗೆ ರಚಿನ್ ಅತ್ಯುತ್ತಮ ಆಲ್ರೌಂಡರ್ ಆಗಿ ರೂಪುಗೊಂಡಿದ್ದಾರೆ.
6 / 7
ಅದರಂತೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 96 ಎಸೆತಗಳನ್ನು ಎದುರಿಸಿದ ರಚಿನ್ 5 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 123 ರನ್ ಬಾರಿಸಿ ಮಿಂಚಿದ್ದಾರೆ.
7 / 7
ಇಲ್ಲಿ ಮತ್ತೊಂದು ವಿಶೇಷ ಎಂದರೆ ರಚಿನ್ ಹೆಸರಿನ ಹಿಂದಿರುವ ಸಿಕ್ರೇಟ್. ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ಅಭಿಮಾನಿಯಾಗಿರುವ ಕೃಷ್ಣಮೂರ್ತಿಯವರು ತಮ್ಮ ಮಗನಿಗೆ ಈ ರಾಹುಲ್ ದ್ರಾವಿಡ್ ಹೆಸರಿನ "ರ" (RA) ಹಾಗೂ ಸಚಿನ್ ಹೆಸರಿನ "ಚಿನ್" (CHIN) ಸೇರಿಸಿ ರಚಿನ್ ಎಂದು ಹೆಸರಿಟಿದ್ದಾರೆ. ಇದೀಗ ಅದೇ ಹುಡುಗ ಕ್ರಿಕೆಟ್ ಅಂಗಳದಲ್ಲಿ ಮಿಂಚುತ್ತಿರುವುದು ವಿಶೇಷ. (PC- AP/Getty Images)
Published On - 10:06 pm, Thu, 5 October 23