ಟೀಮ್ ಇಂಡಿಯಾ ನಾಯಕತ್ವದ ಮೇಲೆ ಕಣ್ಣು: ಮಿಸ್ಟರ್ ಫಿಕ್ಸ್ ಇಟ್ ಯಾರು?

|

Updated on: Jan 02, 2025 | 9:23 AM

Team India: ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ. ಇನ್ನು ಉಪನಾಯಕ ಜಸ್​ಪ್ರೀತ್ ಬುಮ್ರಾ. ಟೆಸ್ಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ. ಈ ಮೂವರಲ್ಲಿ ಅತ್ಯಂತ ಹಿರಿಯ ಆಟಗಾರ ರೋಹಿತ್ ಶರ್ಮಾ. ಹೀಗಾಗಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಳಿಕ ಹಿಟ್​ಮ್ಯಾನ್ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಬಹುದು. ಆ ಬಳಿಕ ಭಾರತ ತಂಡ ನಾಯಕ ಯಾರಾಗಲಿದ್ದಾರೆ? ಎಂಬುದೇ ಪ್ರಶ್ನೆ.

1 / 6
ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಯುಗಾಂತ್ಯವಾಗುವುದು ಬಹುತೇಕ ಖಚಿತವಾಗಿದೆ. ಈ ಯುಗಾಂತ್ಯದ ಬೆನ್ನಲ್ಲೇ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಲು ಪ್ರಮುಖ ಆಟಗಾರರೊಬ್ಬರು ತೆರೆ ಮರೆಯ ಪ್ರಯತ್ನಕ್ಕೆ ಕೈ ಹಾಕಿರುವುದು ಬಹಿರಂಗವಾಗಿದೆ. ಅದರಲ್ಲೂ ಬಾರ್ಡರ್-ಗವಾಸ್ಕರ್ ಸರಣಿ ನಡುವೆಯೇ ರೋಹಿತ್ ಶರ್ಮಾ ಅವರ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎಂಬ ವಿಷಯ ಇದೀಗ ಜಗಜ್ಜಾಹೀರಾಗಿದೆ.

2 / 6
37 ವರ್ಷದ ರೋಹಿತ್ ಶರ್ಮಾ ಬಾರ್ಡರ್-ಗವಾಸ್ಕರ್ ಸರಣಿಯ ಬಳಿಕ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡುವುದು ಬಹುತೇಕ ಕನ್ಫರ್ಮ್​. ಇದು ಖಚಿತವಾಗುತ್ತಿದ್ದಂತೆ ಅತ್ತ ಟೀಮ್ ಇಂಡಿಯಾದಲ್ಲಿರುವ ಹಿರಿಯ ಆಟಗಾರರೊಬ್ಬರು ತಂಡದ ಮುಂದಾಳತ್ವ ವಹಿಸಿಕೊಳ್ಳಲು ಸಿದ್ಧನಿರುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

3 / 6
ತಮ್ಮನ್ನು 'ಮಿಸ್ಟರ್ ಫಿಕ್ಸ್-ಇಟ್' ಎಂದು ಬಿಂಬಿಸಿಕೊಳ್ಳುತ್ತಿರುವ ಹಿರಿಯ ಆಟಗಾರ, ಭಾರತ ತಂಡದಲ್ಲಿನ ಯುವ ಆಟಗಾರರು ಇನ್ನೂ ನಾಯಕತ್ವದ ಪಾತ್ರವನ್ನು ವಹಿಸಿಕೊಳ್ಳಲು ಸಿದ್ಧವಾಗಿಲ್ಲ ಎಂದು ಮನವರಿಕೆ ಮಾಡಿದ್ದಾರೆ. ಅಲ್ಲದೆ ಮಧ್ಯಂತರ ಆಯ್ಕೆಯಾಗಿ ನಾನು ಭಾರತ ತಂಡವನ್ನು ಮುನ್ನಡೆಸಲು ಸಿದ್ಧವಿದ್ದೇನೆ ತಿಳಿಸಿದ್ದಾರಂತೆ.

4 / 6
ಇದರ ಬೆನ್ನಲ್ಲೇ ಆ ಮಿಸ್ಟರ್ ಫಿಕ್ಸ್-ಇಟ್ ಯಾರೆಂಬ ಚರ್ಚೆಗಳು ಶುರುವಾಗಿದೆ. ಈ ಚರ್ಚೆಯ ನಡುವೆ ಕೇಳಿ ಬರುತ್ತಿರುವ ಹೆಸರುಗಳೆಂದರೆ ವಿರಾಟ್ ಕೊಹ್ಲಿ ಮತ್ತು ಜಸ್​ಪ್ರೀತ್ ಬುಮ್ರಾ. ಈ ಹಿಂದೆ ಅನಿರೀಕ್ಷಿತವಾಗಿ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿದಿದ್ದ ಕಿಂಗ್ ಕೊಹ್ಲಿ ಇದೀಗ ಮತ್ತೆ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಳ್ಳಲು ಆಸಕ್ತಿ ತೋರಿದ್ದಾರೆ ಎಂಬ ಮಾತುಗಳು ಕೇಳಿ ಬರಲಾರಂಭಿಸಿದೆ.

5 / 6
ಮತ್ತೊಂದೆಡೆ ಪರ್ತ್​ ಟೆಸ್ಟ್ ಪಂದ್ಯದಲ್ಲಿ ನಾಯಕರಾಗಿ ಜಸ್​ಪ್ರೀತ್ ಬುಮ್ರಾ ಯಶಸ್ವಿಯಾಗಿದ್ದರು. ಈ ಯಶಸ್ಸಿನ ಬೆನ್ನಲ್ಲೇ ಬುಮ್ರಾ ಅವರನ್ನು ಟೆಸ್ಟ್​ನಲ್ಲಿ ನಾಯಕರಾಗಿ ಮುಂದುವರೆಸಬೇಕೆಂಬ ಕೂಗುಗಳು ಕೇಳಿ ಬಂದಿದ್ದವು. ಇದೀಗ ರೋಹಿತ್ ಶರ್ಮಾ ಅವರಿಂದ ತೆರವಾಗುವ ಸ್ಥಾನದ ಮೇಲೆ ಬುಮ್ರಾ ಕೂಡ ಕಣ್ಣಿಟ್ಟಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದೆ.

6 / 6
ಹೀಗಾಗಿಯೇ ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕತ್ವದ ಮೇಲೆ ಕಣ್ಣಿಟ್ಟಿರುವ 'ಮಿಸ್ಟರ್ ಫಿಕ್ಸ್-ಇಟ್' ವಿರಾಟ್ ಕೊಹ್ಲಿ ಅಥವಾ ಜಸ್​ಪ್ರೀತ್ ಬುಮ್ರಾ ಎನ್ನಲಾಗುತ್ತಿದೆ. ಹಾಗಾಗಿ ರೋಹಿತ್ ಶರ್ಮಾ ಬಳಿಕ ಟೆಸ್ಟ್ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಅಥವಾ ಜಸ್​ಪ್ರೀತ್ ಬುಮ್ರಾ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.