IND vs AUS: ಟ್ರಾವಿಸ್ ಹೆಡ್ vs ಜಸ್​ಪ್ರೀತ್ ಬುಮ್ರಾ: ಸರಣಿ ಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ?

|

Updated on: Jan 05, 2025 | 12:00 PM

BGT 2024-25: ಈ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ್ದು ಆಸ್ಟ್ರೇಲಿಯಾ ದಾಂಡಿಗ ಟ್ರಾವಿಸ್ ಹೆಡ್. ಇನ್ನು ಬೌಲಿಂಗ್​​ನಲ್ಲಿ ಪರಾಕ್ರಮ ಮೆರೆದ ಬೌಲರ್​ ಟೀಮ್ ಇಂಡಿಯಾದ ಜಸ್​ಪ್ರೀತ್ ಬುಮ್ರಾ. ಇಲ್ಲಿ ಟ್ರಾವಿಸ್ ಹೆಡ್ 448 ರನ್ ಕಲೆಹಾಕಿದರೆ, ಜಸ್​ಪ್ರೀತ್ ಬುಮ್ರಾ 32 ವಿಕೆಟ್ ಕಬಳಿಸಿದ್ದರು. ಹೀಗಾಗಿಯೇ ಬಾರ್ಡರ್-ಗವಾಸ್ಕರ್ ಸರಣಿಯ ಪ್ಲೇಯರ್ ಆಫ್ ಸಿರೀಸ್ ಪ್ರಶಸ್ತಿ ಯಾರಿಗೆ ನೀಡುವುದು ಎಂಬ ಗೊಂದಲ ಏರ್ಪಟ್ಟಿತ್ತು.

1 / 5
17ನೇ ಆವೃತ್ತಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ತೆರೆಬಿದ್ದಿದೆ. ಈ ಬಾರಿಯ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಪರಾಕ್ರಮ ಮೆರೆಯುವ ಮೂಲಕ ಟ್ರೋಫಿ ಎತ್ತಿ ಹಿಡಿದಿದೆ. ಐದು ಪಂದ್ಯಗಳ ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು 3-1 ಅಂತರದಿಂದ ಬಗ್ಗು ಬಡಿದು ಆಸೀಸ್ ಪಡೆ 10 ವರ್ಷಗಳ ಬಳಿಕ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

2 / 5
ಇನ್ನು ಈ ಬಾರಿಯ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರೆಂದರೆ ಟೀಮ್ ಇಂಡಿಯಾದ ಜಸ್​ಪ್ರೀತ್ ಬುಮ್ರಾ ಹಾಗೂ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್. 5 ಪಂದ್ಯಗಳಲ್ಲೂ ಕಣಕ್ಕಿಳಿದಿದ್ದ ಹೆಡ್ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದರೆ, ಬುಮ್ರಾ ಬೌಲಿಂಗ್​​ನಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದ್ದರು. ಹೀಗಾಗಿಯೇ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲು ಸಂದಿಗ್ಧ ಪರಿಸ್ಥಿತಿ ಎದುರಾಗಿತ್ತು.

3 / 5
5 ಪಂದ್ಯಗಳಲ್ಲಿ 9 ಇನಿಂಗ್ಸ್ ಆಡಿದ್ದ ಟ್ರಾವಿಸ್ ಹೆಡ್ 2 ಭರ್ಜರಿ ಶತಕ ಹಾಗೂ ಒಂದು ಅರ್ಧಶತಕದೊಂದಿಗೆ ಒಟ್ಟು 448 ರನ್​ ಕಲೆಹಾಕಿದ್ದಾರೆ. ವಿಶೇಷ ಎಂದರೆ 448 ರನ್​ ಕಲೆಹಾಕಲು ಟ್ರಾವಿಸ್ ಹೆಡ್ ತೆಗೆದುಕೊಂಡಿದ್ದು ಕೇವಲ 484 ಎಸೆತಗಳನ್ನು ಮಾತ್ರ. ಈ ವೇಳೆ 52 ಫೋರ್ ಹಾಗೂ 4 ಸಿಕ್ಸ್​ಗಳನ್ನು ಸಿಡಿಸಿದ್ದರು. ಈ ಮೂಲಕ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದರು.

4 / 5
ಮತ್ತೊಂದೆಡೆ ಜಸ್​ಪ್ರೀತ್ ಬುಮ್ರಾ 5 ಪಂದ್ಯಗಳಲ್ಲಿ ಕಣಕ್ಕಿಳಿದರೂ 9 ಇನಿಂಗ್ಸ್​ಗಳಲ್ಲಿ ಮಾತ್ರ ಬೌಲಿಂಗ್ ಮಾಡಿದ್ದರು. ಈ ವೇಳೆ 908 ಎಸೆತಗಳನ್ನು ಎಸೆದಿರುವ ಬುಮ್ರಾ ಕೇವಲ 418 ರನ್​ಗಳನ್ನು ಮಾತ್ರ ಬಿಟ್ಟುಕೊಟ್ಟಿದ್ದರು. ಅಲ್ಲದೆ 2.76 ಎಕನಾಮಿ ರೇಟ್​ನಲ್ಲಿ ಬರೋಬ್ಬರಿ 32 ವಿಕೆಟ್ ಉರುಳಿಸಿ ಮಿಂಚಿದ್ದರು.

5 / 5
ಇಲ್ಲಿ ಟ್ರಾವಿಸ್ ಹೆಡ್ ಬ್ಯಾಟಿಂಗ್ ಮೂಲಕ ಪರಾಕ್ರಮ ಮೆರೆದರೆ, ಜಸ್​ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಸಂಚಲನ ಸೃಷ್ಟಿಸಿದ್ದರು. ಇದೇ ಕಾರಣದಿಂದಾಗಿ ಯಾರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಬೇಕೆಂಬ ಗೊಂದಲ ಏರ್ಪಟ್ಟಿತ್ತು. ಆದರೆ ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿದ್ದರು. ಈ ಅತ್ಯದ್ಭುತ ಪ್ರದರ್ಶನವನ್ನು ಪರಿಗಣಿಸಿ ಜಸ್​ಪ್ರೀತ್ ಬುಮ್ರಾಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿದೆ.