ಅನುಭವಿಗಳ ಫ್ಲಾಪ್ ಶೋ: ಒಂದೆಡೆ ತಂಡದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ಗಳ ಕೊರತೆ ಇದ್ದರೆ, ಇನ್ನೊಂದೆಡೆ ಅನುಭವಿಗಳು ಕೂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ರಂತಹ ಬ್ಯಾಟ್ಸ್ಮನ್ಗಳು ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡಲಿಲ್ಲ. ಇತ್ತ ಕಳೆದ ಪ್ರವಾಸದಲ್ಲಿ ಮಿಂಚಿದ್ದ ರಿಷಬ್ ಪಂತ್ಗೂ ವಿಶೇಷವಾಗಿ ಏನನ್ನು ಮಾಡಲು ಸಾಧ್ಯವಾಗಲಿಲ್ಲ.