
IPL 2023 RCB vs RR: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಆರ್ಸಿಬಿ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದರು.

ಇತ್ತ ಫಾಫ್ ಡುಪ್ಲೆಸಿಸ್ ತಂಡದಲ್ಲಿದ್ದರೂ ವಿರಾಟ್ ಕೊಹ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸುತ್ತಿರುವುದೇಕೆ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತಮ ಆರ್ಸಿಬಿ ನಾಯಕನ ಫಿಟ್ನೆಸ್ ಸಮಸ್ಯೆ.

ಅಂದರೆ ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಪೆಕ್ಕೆಲುಬಿನ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಿಎಸ್ಕೆ ವಿರುದ್ಧದ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವ ಡುಪ್ಲೆಸಿಸ್ ಅವರ ಪಕ್ಕೆಲುಬಿಗೆ ಗಾಯವಾಗಿತ್ತು. ಇದೀಗ ಫೀಲ್ಡಿಂಗ್ ಮಾಡುವಾಗ ಆ ನೋವಿನ ಸಮಸ್ಯೆಯನ್ನು ಎದುರಾಗುತ್ತಿದೆ.

ಇದೇ ಕಾರಣದಿಂದಾಗಿ ಫಾಫ್ ಡುಪ್ಲೆಸಿಸ್ ಕೇವಲ ಬ್ಯಾಟಿಂಗ್ಗೆ ಮಾತ್ರ ಆಗಮಿಸುತ್ತಿದ್ದಾರೆ. ಅಲ್ಲದೆ ಫೀಲ್ಡಿಂಗ್ ವೇಳೆ ಡುಪ್ಲೆಸಿಸ್ ಸ್ಥಾನದಲ್ಲಿ ಆರ್ಸಿಬಿ ಇಂಪ್ಯಾಕ್ಟ್ ಸಬ್ ಅನ್ನು ಕಣಕ್ಕಿಳಿಸುತ್ತಿದ್ದಾರೆ. ಇದೇ ಕಾರಣದಿಂದಾಗಿ ಡುಪ್ಲೆಸಿಸ್ ಬದಲಿಗೆ ಕಿಂಗ್ ಕೊಹ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಇಲ್ಲಿ ಫಾಫ್ ಡುಪ್ಲೆಸಿಸ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳುವ ಮೂಲಕ ಆರ್ಸಿಬಿ ತಂಡದಲ್ಲಿ ಉಂಟಾಗಬಹುದಾದ ಮಹತ್ವದ ಬದಲಾವಣೆಯನ್ನು ತಪ್ಪಿಸಿಕೊಳ್ಳುತ್ತಿದೆ ಎನ್ನಬಹುದು. ಏಕೆಂದರೆ ಡುಪ್ಲೆಸಿಸ್ ತಂಡದಿಂದ ಹೊರಗುಳಿದರೆ, ಆರಂಭಿಕ ಆಟಗಾರ, ನಾಯಕ ಕೂಡ ಬದಲಾಗುತ್ತದೆ. ಅಲ್ಲದೆ ಓರ್ವ ಹೊಸ ಆಟಗಾರನಿಗೆ ಅವಕಾಶ ನೀಡಬೇಕಾಗುತ್ತದೆ.

ಆದರೆ ಆರ್ಸಿಬಿ ಮ್ಯಾನೇಜ್ಮೆಂಟ್, ವಿರಾಟ್ ಕೊಹ್ಲಿಗೆ ನಾಯಕತ್ವ ನೀಡಿ, ಫಾಫ್ ಡುಪ್ಲೆಸಿಸ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಂಡಿದೆ. ಅದರಂತೆ ಫಾಫ್ ಡುಪ್ಲೆಸಿಸ್ ಸಂಪೂರ್ಣ ಫಿಟ್ನೆಸ್ ಸಾಧಿಸುವವರೆಗೂ ಕಿಂಗ್ ಕೊಹ್ಲಿಯೇ ಆರ್ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11: ಜೋಸ್ ಬಟ್ಲರ್ , ಯಶಸ್ವಿ ಜೈಸ್ವಾಲ್ , ಸಂಜು ಸ್ಯಾಮ್ಸನ್ (ನಾಯಕ) , ದೇವದತ್ ಪಡಿಕ್ಕಲ್ , ಶಿಮ್ರಾನ್ ಹೆಟ್ಮೆಯರ್ , ಧ್ರುವ್ ಜುರೆಲ್ , ರವಿಚಂದ್ರನ್ ಅಶ್ವಿನ್ , ಜೇಸನ್ ಹೋಲ್ಡರ್ , ಟ್ರೆಂಟ್ ಬೌಲ್ಟ್ , ಸಂದೀಪ್ ಶರ್ಮಾ , ಯುಜ್ವೇಂದ್ರ ಚಾಹಲ್

ಆರ್ಸಿಬಿ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ (ನಾಯಕ) , ಫಾಫ್ ಡು ಪ್ಲೆಸಿಸ್ , ಮಹಿಪಾಲ್ ಲೊಮ್ರೋರ್ , ಗ್ಲೆನ್ ಮ್ಯಾಕ್ಸ್ ವೆಲ್ , ಶಹಬಾಜ್ ಅಹ್ಮದ್ , ದಿನೇಶ್ ಕಾರ್ತಿಕ್ ( ವಿಕೆಟ್ ಕೀಪರ್ ) , ಸುಯಶ್ ಪ್ರಭುದೇಸಾಯಿ , ಡೇವಿಡ್ ವಿಲ್ಲಿ , ವನಿಂದು ಹಸರಂಗ , ಮೊಹಮ್ಮದ್ ಸಿರಾಜ್ , ವೈಶಾಕ್ ವಿಜಯ್ ಕುಮಾರ್.