Updated on: Feb 18, 2023 | 1:40 PM
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ರೋಚಕ ಹಂತ ತಲುಪಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ ಟೂರ್ನಿಯಲ್ಲಿ ಸತತ ಎರಡು ಗೆಲುವು ಸಾಧಿಸಿದೆ ಶುಭಾರಂಭ ಮಾಡಿದೆ. ಇದೀಗ ಇಂದು ಗ್ಕೆಬರ್ಹಾನಾದಲ್ಲಿರುವ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಸದ್ಯ ಇಂಗ್ಲೆಂಡ್ ರನ್ ರೇಟ್ ಆಧಾರದಲ್ಲಿ 4 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಭಾರತ ಎರಡನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲೂ ಭಾರತ ವನಿತೆಯರ ತಂಡ ಗೆದ್ದರೆ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಲಿದೆ.
ಭಾರತವು ಶಫಾಲಿ ವರ್ಮಾ, ಸ್ಮೃತಿ ಮಂದಾನ, ಜಾಮಿಯಾ, ಹರ್ಮನ್‌ಪ್ರೀತ್, ರಿಚಾ ಘೋಷ್‌ರಂತಹ ಸ್ಟಾರ್ ಬ್ಯಾಟರ್ಗಳನ್ನು ಹೊಂದಿದೆ. ಆದರೆ ಅನುಭವಿ ಆಟಗಾರ್ತಿಯರಾದ ಮಂದಾನ, ಕೌರ್ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಇಂದು ನಿರ್ಣಾಯಕ ಪಂದ್ಯವಾಗಿರುವುದರಿಂದ ಇಬ್ಬರೂ ಮಿಂಚಬೇಕಿದೆ.
ಇಂಗ್ಲೆಂಡ್ ಇಲ್ಲಿ ಬಲಿಷ್ಠವಾಗಿದೆ. ಬೌಲಿಂಗ್ ವಿಭಾಗದಲ್ಲಿ ಅಲಿನ್ ಕಾಪ್ಸ್, ನಾಯಕಿ ಹೇಲಿ ಮ್ಯಾಥ್ಯೂಸ್ ಮತ್ತು ಕ್ಯಾಂಪ್‌ಬೆಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಹಾಗಾಗಿ ಭಾರತದ ಬೌಲರ್ಗಳು ಕೂಡ ಇಂದಿನ ಪಂದ್ಯದಲ್ಲಿ ಮಿಂಚಬೇಕಿದೆ.
ಭಾರತೀಯ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್‌ಕೀಪರ್), ರಿಚಾ ಘೋಷ್ (ವಿಕೆಟ್‌ಕೀಪರ್), ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಕರ್ , ಶಿಖಾ ಪಾಂಡೆ, ರೇಣುಕಾ ಠಾಕೂರ್, ಅಂಜಲಿ ಶರ್ವಾನಿ
Published On - 1:40 pm, Sat, 18 February 23