World Cup 2023 schedule: ‘ನಮಗೆ ಅನ್ಯಾಯವಾಗಿದೆ’; ಬಿಸಿಸಿಐ ವಿರುದ್ಧ ಭುಗಿಲೆದ್ದ ಆಕ್ರೋಶ
World Cup 2023 schedule: ವೇಳಾಪಟ್ಟಿ ಪ್ರಕಾರ ಈ ಬಾರಿಯ ವಿಶ್ವಕಪ್ ಭಾರತದ 10 ನಗರಗಳಲ್ಲಿ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿದೆ. ಆದರೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಬಿಸಿಸಿಐ ವಿರುದ್ಧ ರಾಜ್ಯ ಸಂಘಗಳು ಅಸಮಾಧಾನ ಹೊರಹಾಕಿವೆ.
1 / 6
ಈ ವರ್ಷ ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿವೆ. ವೇಳಾಪಟ್ಟಿ ಪ್ರಕಾರ ಈ ಬಾರಿಯ ವಿಶ್ವಕಪ್ ಭಾರತದ 10 ನಗರಗಳಲ್ಲಿ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿದೆ. ಆದರೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಬಿಸಿಸಿಐ ವಿರುದ್ಧ ರಾಜ್ಯ ಸಂಘಗಳು ಅಸಮಾಧಾನ ಹೊರಹಾಕಿವೆ.
2 / 6
ವಾಸ್ತವವಾಗಿ ಈ ಬಾರಿಯ ವಿಶ್ವಕಪ್ ಅಹಮದಾಬಾದ್, ಹೈದರಾಬಾದ್, ಧರ್ಮಶಾಲಾ, ದೆಹಲಿ, ಚೆನ್ನೈ, ಲಕ್ನೋ, ಪುಣೆ, ಬೆಂಗಳೂರು, ಮುಂಬೈ, ಕೋಲ್ಕತ್ತಾ ಸೇರಿದಂತೆ 10 ನಗರಗಳಲ್ಲಿ ನಡೆಯಲ್ಲಿದೆ. ಆದರೆ ಈ ವೇಳಾಪಟ್ಟಿ ಪ್ರಕಟವಾಗುವ ಮುನ್ನ ತಿರುವನಂತಪುರಂ ಸೇರಿದಂತೆ 12 ನಗರಗಳು ಪಟ್ಟಿಯಲ್ಲಿದ್ದವು. ಆದರೆ ಐಸಿಸಿ ತನ್ನ ಅಂತಿಮ ಪಟ್ಟಿಯಲ್ಲಿ ಕೇವಲ 10 ನಗರಗಳ ಹೆಸರನ್ನು ಮಾತ್ರ ಅನುಮೋದಿಸಿದೆ. ಇದರಲ್ಲಿ ಮೊಹಾಲಿ, ಇಂದೋರ್, ರಾಂಚಿ, ನಾಗ್ಪುರ ಸೇರಿದಂತೆ ಭಾರತದ ಹಲವು ದೊಡ್ಡ ಮೈದಾನಗಳು ವಿಶ್ವಕಪ್ ಆತಿಥ್ಯದಿಂದ ವಂಚಿತವಾಗಿವೆ.
3 / 6
ಇದೀಗ ಐತಿಹಾಸಿಕ ಮೈದಾನದಲ್ಲಿ ವಿಶ್ವಕಪ್ ಆಯೋಜನೆಗೆ ಅವಕಾಶ ನೀಡದ ಬಿಸಿಸಿಐ ವಿರುದ್ಧ ರಾಜ್ಯ ಕ್ರಿಕೆಟ್ ಸಂಘಗಳು ಅಸಮಾಧಾನ ಹೊರಹಾಕಿವೆ. ಈ ಬಗ್ಗೆ ಮಾತನಾಡಿದ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ (ಎಂಪಿಸಿಎ) ಅಧ್ಯಕ್ಷ ಅಭಿಲಾಷ್ ಖಾಂಡೇಕರ್, 1987 ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಪಂದ್ಯ ಇಂದೋರ್‌ನಲ್ಲಿ ನಡೆದಿತ್ತು.
4 / 6
ಇಂದೋರ್ ಕ್ರಿಕೆಟ್ ಮೈದಾನ ಹಲವು ವಿಶ್ವಕಪ್ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಹೀಗಾಗಿ ಈ ಬಾರಿಯ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ನಿರೀಕ್ಷೆಯಿತ್ತು. ಆದರೆ ಈ ಬಾರಿ ಒಂದೇ ಒಂದು ವಿಶ್ವಕಪ್ ಪಂದ್ಯವನ್ನು ಇಂದೋರ್‌ನಲ್ಲಿ ಆಯೋಜಿಸದಿರುವುದು ಬೇಸರ ತಂದಿದೆ ಎಂದಿದ್ದಾರೆ. ಅಲ್ಲದೆ ಇಂದೋರ್‌ನಲ್ಲಿ ಏಕದಿನ, ಟಿ20 ಮತ್ತು ಟೆಸ್ಟ್ ಪಂದ್ಯಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಇತ್ತೀಚೆಗೆ ಈ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟೆಸ್ಟ್ ಪಂದ್ಯವನ್ನು ನಡೆಸಲಾಯಿತು.
5 / 6
ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್‌ನ ಮೂಲಗಳು, ಮೆಟ್ರೋ ನಗರಗಳಿಗೆ ಮಾತ್ರ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ಅವಕಾಶ ನೀಡಲಾಗಿದೆ. ಪಂಜಾಬ್‌ಗೆ ಕನಿಷ್ಠ ಪಕ್ಷ ಅಭ್ಯಾಸ ಪಂದ್ಯವನ್ನು ಆಯೋಜಿಸಲು ಅವಕಾಶ ನೀಡಿಲ್ಲ. ಇದರಿಂದಾಗಿ ನಾವು ತುಂಬಾ ನಿರಾಶೆಗೊಂಡಿದ್ದೇನೆ ಎಂದು ತಿಳಿಸಿವೆ.
6 / 6
ಆದರೆ ರಾಜ್ಯ ಸಂಘಗಳ ಅಸಮಾಧಾನಕ್ಕೆ ಸ್ಪಷ್ಟನೇ ನೀಡಿರುವ ಬಿಸಿಸಿಐ ಮೂಲಗಳು, ವಿಶ್ವಕಪ್ ಆತಿಥ್ಯಕ್ಕೆ ಯಾವುದೇ ಮಿತಿಯನ್ನು ನಿಗದಿಪಡಿಸಿಲ್ಲ. ಆದರೆ ಕಡಿಮೆ ಸ್ಥಳಗಳಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲು ಪ್ರಮುಖ ಕಾರಣವೆಂದರೆ ತಂಡದ ನಿರ್ವಹಣೆ ಮತ್ತು ಆಟಗಾರರಿಗೆ ಪ್ರಯಾಣದಿಂದಾಗುವ ತೊಂದರೆಗಳನ್ನು ತಪ್ಪಿಸುವುದಕ್ಕಾಗಿ. ಈ ಕ್ರಮದಿಂದಾಗಿ ಆಟಗಾರರು ಪಂದ್ಯಕ್ಕೂ ಮುನ್ನ ಸಾಕಷ್ಟು ವಿಶ್ರಾಂತಿ ಪಡೆಯುತ್ತಾರೆ. ಆದ್ದರಿಂದ ನಾವು ಕಡಿಮೆ ಸ್ಥಳಗಳನ್ನು ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದೆ.