World Cup 2023: ಆಸೀಸ್ ವಿರುದ್ಧ ಸೋತು ಪಾಯಿಂಟ್ ಪಟ್ಟಿಯಲ್ಲಿ ಜಾರಿದ ಪಾಕಿಸ್ತಾನ
ICC World Cup 2023 Updated Points Table: ಶುಕ್ರವಾರದ ಗೆಲುವಿನ ಮೂಲಕ ಆಸ್ಟ್ರೇಲಿಯಾ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದ್ದು, ಬಾಬರ್ ಪಡೇ ಐದನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ಎಂಬುದನ್ನು ನೋಡುವುದಾದರೆ..
1 / 8
ಶುಕ್ರವಾರದಂದು ಬೆಂಗಳೂರಿನಲ್ಲಿ ನಡೆದ ವಿಶ್ವಕಪ್‌ನಲ್ಲಿ ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಅವರ ಶತಕಗಳ ನೆರವಿನಿಂದ ಆಸ್ಟ್ರೇಲಿಯಾ ಪಾಕಿಸ್ತಾನವನ್ನು 62 ರನ್‌ಗಳಿಂದ ಸೋಲಿಸಿತು.
2 / 8
ಶುಕ್ರವಾರದ ಗೆಲುವಿನ ಮೂಲಕ ಆಸ್ಟ್ರೇಲಿಯಾ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದ್ದು, ಬಾಬರ್ ಪಡೇ ಐದನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ಎಂಬುದನ್ನು ನೋಡುವುದಾದರೆ..
3 / 8
ಆಡಿರುವ ನಾಲ್ಕು ಪಂದ್ಯಗಳಲ್ಲಿ ನಾಲ್ಕನ್ನೂ ಗೆದ್ದಿರುವ ನ್ಯೂಜಿಲೆಂಡ್ 8 ಅಂಕ ಹಾಗೂ +1.923 ನೆಟ್ ರನ್ರೇಟ್ನೊಂದಿಗೆ ಮೊದಲ ಸ್ಥಾನದಲ್ಲಿದೆ.
4 / 8
ಭಾರತ ಕೂಡ ನಾಲ್ಕು ಪಂದ್ಯಗಳನ್ನು ಗೆದ್ದಿದ್ದು, 8 ಅಂಕ ಹಾಗೂ +1.659 ನೆಟ್ ರನ್ರೇಟ್ನೊಂದಿಗೆ ಎರಡನೇ ಸ್ಥಾನದಲ್ಲಿದೆ.
5 / 8
ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ 2 ಗೆಲುವು, ಒಂದು ಸೋಲಿನೊಂದಿಗೆ 4 ಅಂಕ ಸಂಪಾದಿಸಿದೆ.
6 / 8
ಇದೀಗ ಪಾಕಿಸ್ತಾನ ತಂಡವನ್ನು ಮಣಿಸಿರುವ ಆಸ್ಟ್ರೇಲಿಯಾ 2 ಗೆಲುವು, 2 ಸೋಲಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
7 / 8
ಆಸೀಸ್ ವಿರುದ್ಧ ಮುಗ್ಗರಿಸಿದ ಪಾಕಿಸ್ತಾನ 2 ಗೆಲುವು, 2 ಸೋಲಿನೊಂದಿಗೆ ಐದನೇ ಸ್ಥಾನದಲ್ಲಿದೆ.
8 / 8
ಉಳಿದಂತೆ ತಲಾ ಒಂದೊಂದು ಪಂದ್ಯದಲ್ಲಿ ಗೆಲುವು ಸಾಧಿಸಿರುವ ಇಂಗ್ಲೆಂಡ್, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ಅಫ್ಘಾನಿಸ್ತಾನ ಕ್ರಮವಾಗಿ 6,7,8,9ನೇ ಸ್ಥಾನದಲ್ಲಿವೆ. ಶ್ರೀಲಂಕಾ ಕೊನೆಯ ಸ್ಥಾನ ಪಡೆದುಕೊಂಡಿದೆ.