4,4,4,4,4,4,4: ಟಿ20 ಕ್ರಿಕೆಟ್ನಲ್ಲಿ ದಾಖಲೆ ಬರೆದ ಹರ್ಮನ್ಪ್ರೀತ್ ಕೌರ್
TV9 Web | Updated By: ಝಾಹಿರ್ ಯೂಸುಫ್
Updated on:
Mar 04, 2023 | 11:08 PM
WPL 2023: ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಹರ್ಮನ್ಪ್ರೀತ್ ಗುಜರಾತ್ ಜೈಂಟ್ಸ್ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದರು. ಅದರಲ್ಲೂ ಒಟ್ಟು 14 ಫೋರ್ಗಳನ್ನು ಬಾರಿಸುವ ಮೂಲಕ ಅಬ್ಬರಿಸಿದರು.
1 / 7
ವುಮೆನ್ಸ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್ಪ್ರೀತ್ ಕೌರ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಬ್ಯಾಕ್ ಟು ಬ್ಯಾಕ್ 7 ಫೋರ್ಗಳನ್ನು ಬಾರಿಸುವ ಮೂಲಕ ಎಂಬುದೇ ವಿಶೇಷ.
2 / 7
ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಹರ್ಮನ್ಪ್ರೀತ್ ಗುಜರಾತ್ ಜೈಂಟ್ಸ್ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದರು. ಅದರಲ್ಲೂ ಒಟ್ಟು 14 ಫೋರ್ಗಳನ್ನು ಬಾರಿಸುವ ಮೂಲಕ ಅಬ್ಬರಿಸಿದರು.
3 / 7
ಈ ಸಿಡಿಲಬ್ಬರದ ನಡುವೆ ಹರ್ಮನ್ಪ್ರೀತ್ ಕೌರ್ ಬ್ಯಾಟ್ನಿಂದ ಸತತವಾಗಿ 7 ಬೌಂಡರಿಗಳು ಮೂಡಿಬಂದಿರುವುದು ವಿಶೇಷ. ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ನ 15ನೇ ಓವರ್‌ನಲ್ಲಿ ಫೋರ್ಗಳ ಸುರಿಮಳೆ ಪ್ರಾರಂಭವಾಯಿತು.
4 / 7
23 ವರ್ಷದ ಎಡಗೈ ವೇಗದ ಬೌಲರ್ ಮೋನಿಕಾ ಪಟೇಲ್ ಅವರನ್ನು ಗುರಿಯಾಗಿಸಿದ ಹರ್ಮನ್ಪ್ರೀತ್ ಕೌರ್ ಕೊನೆಯ 4 ಎಸೆತಗಳಲ್ಲಿ ಸತತ ಬೌಂಡರಿಗಳನ್ನು ಬಾರಿಸಿದರು. ಇದಾದ ನಂತರ ಗುಜರಾತ್ ತಂಡದ ನಾಯಕಿ ಬೆತ್ ಮೂನಿ ಅವರು ಆಶ್ ಗಾರ್ಡ್ನರ್ಗೆ ಚೆಂಡನ್ನು ನೀಡಿದರು.
5 / 7
ಆದರೆ, ಅನುಭವಿ ಆಟಗಾರ್ತಿ ಗಾರ್ಡ್ನರ್ರನ್ನು ಕೂಡ ಲೀಲಾಜಾಲವಾಗಿ ಎದುರಿಸಿದ ಹರ್ಮನ್ಪ್ರೀತ್ ಕೌರ್ ಹ್ಯಾಟ್ರಿಕ್ ಬೌಂಡರಿ ಬಾರಿಸಿದರು. ಓವರ್‌ನ ಮೊದಲ ಎಸೆತದಲ್ಲಿ, ಅಮೆಲಿಯಾ ಕೆರ್ ಸಿಂಗಲ್ ತೆಗೆದರೆ, ಆ ಬಳಿಕ ಸ್ಟ್ರೈಕ್ಗೆ ಬಂದ ಹರ್ಮನ್ ಬ್ಯಾಕ್ ಟು ಬ್ಯಾಕ್ 3 ಬೌಂಡರಿ ಬಾರಿಸಿದರು. ಇದರೊಂದಿಗೆ ಎದುರಿಸಿದ 7 ಎಸೆತಗಳಲ್ಲಿ ಸತತವಾಗಿ 7 ಬೌಂಡರಿಗಳನ್ನು ಬಾರಿಸಿದ ವಿಶೇಷ ದಾಖಲೆಯೊಂದು ಹರ್ಮನ್ಪ್ರೀತ್ ಕೌರ್ ಪಾಲಾಯಿತು.
6 / 7
ಅಷ್ಟೇ ಅಲ್ಲದೆ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ ಹಾಫ್ ಸೆಂಚುರಿ ಸಿಡಿಸಿದ ಭಾರತೀಯ ಆಟಗಾರ್ತಿ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಸ್ಮೃತಿ ಮಂಧಾನ (23 ಎಸೆತ) ಹೆಸರಿನಲ್ಲಿತ್ತು.
7 / 7
ಇನ್ನು ಈ ಪಂದ್ಯದಲ್ಲಿ 30 ಎಸೆತಗಳನ್ನು ಎದುರಿಸಿದ ಹರ್ಮನ್ಪ್ರೀತ್ ಕೌರ್ 14 ಫೋರ್ನೊಂದಿಗೆ 65 ರನ್ ಬಾರಿಸಿದರು. ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮೊದಲ ಅರ್ಧಶತಕ ಬಾರಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.