WPL 2024: ಆರ್​ಸಿಬಿ ಕ್ವೀನ್ ಶ್ರೇಯಾಂಕ ಪಾಟೀಲ್​ಗೆ ಬಂತು ಮದುವೆ ಪ್ರಪೋಸಲ್

Updated on: Feb 28, 2024 | 8:22 PM

Shreyanka Patil: ಮಂಗಳವಾರ ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹಣಾಹಣಿ ಏರ್ಪಟ್ಟಿತ್ತು. ಈ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಯುವಕನೊಬ್ಬ ಶ್ರೇಯಾಂಕ ಪಾಟೀಲ್​ ಮುಂದೆ ಮದುವೆ ಪ್ರಪೋಸಲ್ ಇಟ್ಟಿದ್ದಾನೆ. ಅದರ ಪೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

1 / 8
ತನ್ನ ಆಲ್‌ರೌಂಡರ್ ಪ್ರದರ್ಶನದಿಂದಲೇ ಆರ್​ಸಿಬಿ ಮಹಿಳಾ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಕನ್ನಡತಿ ಶ್ರೇಯಾಂಕ ಪಾಟೀಲ್​ ಆಟಕ್ಕೆ ಮನಸೋಲದವರಿಲ್ಲ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೂ ಸೈ, ಮಧ್ಯಮ ಓವರ್​ಗಳಲ್ಲಿ ಬೌಲಿಂಗ್​ನಲ್ಲೂ ಸೈ ಎನಿಸಿಕೊಂಡಿರುವ ಶ್ರೇಯಾಂಕ ಆರ್​ಸಿಬಿ ತಂಡದ ಪ್ರಮುಖ ಸದಸ್ಯರಾಗಿದ್ದಾರೆ.

ತನ್ನ ಆಲ್‌ರೌಂಡರ್ ಪ್ರದರ್ಶನದಿಂದಲೇ ಆರ್​ಸಿಬಿ ಮಹಿಳಾ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಕನ್ನಡತಿ ಶ್ರೇಯಾಂಕ ಪಾಟೀಲ್​ ಆಟಕ್ಕೆ ಮನಸೋಲದವರಿಲ್ಲ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೂ ಸೈ, ಮಧ್ಯಮ ಓವರ್​ಗಳಲ್ಲಿ ಬೌಲಿಂಗ್​ನಲ್ಲೂ ಸೈ ಎನಿಸಿಕೊಂಡಿರುವ ಶ್ರೇಯಾಂಕ ಆರ್​ಸಿಬಿ ತಂಡದ ಪ್ರಮುಖ ಸದಸ್ಯರಾಗಿದ್ದಾರೆ.

2 / 8

ಲೀಗ್​ನ ಮೊದಲ ಆವೃತ್ತಿಯಲ್ಲಿ ಬೌಲಿಂಗ್​ನಲ್ಲಿ 6ವಿಕೆಟ್ ಕಬಳಿಸಿದ್ದ ಶ್ರೇಯಾಂಕ ಬ್ಯಾಟಿಂಗ್​ನಲ್ಲೂ ಕಮಾಲ್ ಮಾಡಿ 62 ರನ್ ಕಲೆಹಾಕಿದ್ದರು. ಹೀಗಾಗಿ ಎರಡನೇ ಆವೃತ್ತಿಯಲ್ಲಿ ಶ್ರೇಯಾಂಕರನ್ನು ತಂಡದ ಪ್ರಮುಖ ಸದಸ್ಯರನ್ನಾಗಿ ಆಡಿಸಲಾಗುತ್ತಿದೆ.

3 / 8

ಆದರೆ ಎರಡನೇ ಸೀಸನ್​ನಲ್ಲಿ ಇದುವರೆಗೆ ಬೌಲಿಂಗ್​ನಲ್ಲಿ ಮ್ಯಾಜಿಕ್ ಮಾಡದ ಶ್ರೇಯಾಂಕ, ಮೊದಲ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿ ಯಾವುದೇ ವಿಕೆಟ್ ಪಡೆಯದೆ 32 ರನ್ ನೀಡಿದರೆ, ಎರಡನೇ ಪಂದ್ಯದಲ್ಲಿ 1 ಓವರ್ ಬೌಲ್ ಮಾಡಿ 13 ರನ್ ಬಿಟ್ಟುಕೊಟ್ಟರು. ಆಡಿದ ಎರಡೂ ಪಂದ್ಯಗಳಲ್ಲಿ ಅವರಿಗೆ ಯಾವುದೇ ವಿಕೆಟ್ ಸಿಕ್ಕಿಲ್ಲ.

4 / 8

ಆದರೂ ಶ್ರೇಯಾಂಕಗಿರುವ ಬೇಡಿಕೆ ಏನು ಕಡಿಮೆಯಾಗಿಲ್ಲ. ಈ ನಡುವೆ ಶ್ರೇಯಾಂಕ ತನ್ನ ಆಟದ ಹೊರತಾಗಿ ಮೈದಾನದಲ್ಲಿ ನಡೆದ ಅಪರೂಪದ ಘಟನೆಯಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಲೈವ್ ಪಂದ್ಯದ ವೇಳೆ ಶ್ರೇಯಾಂಕಗೆ ಮದುವೆ ಪ್ರಪೋಸಲ್ ಬಂದಿದ್ದು, ಯುವಕನ ಮದುವೆ ನಿವೇದನೆಯ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

5 / 8

ವಾಸ್ತವವಾಗಿ ಮಂಗಳವಾರ ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹಣಾಹಣಿ ಏರ್ಪಟ್ಟಿತ್ತು. ಈ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಯುವಕನೊಬ್ಬ ಶ್ರೇಯಾಂಕ ಪಾಟೀಲ್​ ಮುಂದೆ ಮದುವೆ ಪ್ರಪೋಸಲ್ ಇಟ್ಟಿದ್ದಾನೆ. ಅದರ ಪೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

6 / 8

ಬೆಂಗಳೂರು ತಂಡ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಆರ್‌ಸಿಬಿ ಟೀ ಶರ್ಟ್ ಧರಿಸಿದ್ದ ಅಭಿಮಾನಿಯೊಬ್ಬರು ಪ್ಲೇ ಕಾರ್ಡ್ ಹಿಡಿದು ಶ್ರೇಯಾಂಕಾ ಪಾಟೀಲ್‌ಗೆ ಪ್ರಪೋಸ್ ಮಾಡಿದ್ದಾರೆ. ಅದರಲ್ಲಿ ವಿಲ್ ಯು ಮ್ಯಾರಿ ಮಿ.. ಶ್ರೇಯಾಂಕಾ ಪಾಟೀಲ್ ಎಂದು ಬರೆದುಕೊಂಡಿದ್ದಾನೆ.

7 / 8

ಪ್ಲೇ ಕಾರ್ಡ್ ನಲ್ಲಿ ಬರೆದಿದ್ದ ಮದುವೆ ಪ್ರಸ್ತಾವನೆಯ ವಿಡಿಯೋ ಮೈದಾನದ ಪ್ರೊಜೆಕ್ಟರ್​ನಲ್ಲಿ ಭಿತ್ತರವಾಗುತ್ತಿದ್ದಂತೆ ಬೆಂಗಳೂರು ತಂಡದ ಡಗ್ ಔಟ್​ನಲ್ಲಿ ಕುಳಿತಿದ್ದ ಇತರೆ ಆಟಗಾರ್ತಿಯರು ನಗಲಾರಂಭಿಸಿದರು. ಇತ್ತ ಯುವಕ ಕೂಡ ತನ್ನ ಪ್ಲೇ ಕಾರ್ಡ್ ಭಿತ್ತರವಾಗಿದ್ದನ್ನು ಕಂಡ ಹರ್ಷ ವ್ಯಕ್ತಪಡಿಸಿದ್ದಾನೆ.

8 / 8

ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ.. ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ 7 ವಿಕೆಟ್ ಕಳೆದುಕೊಂಡು 107 ರನ್ ಕಲೆಹಾಕಿತು. ಉತ್ತರವಾಗಿ ಬೆಂಗಳೂರು 13ನೇ ಓವರ್‌ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ದಾಟಿತು. ಹೀಗಾಗಿ ಬೆಂಗಳೂರು, ಗುಜರಾತ್ ಜೈಂಟ್ಸ್ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿತು.

Loading...
Unable to load recommendations.
Follow Us