WTC Final 2023: ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಸಿಕ್ಸರ್ ಕಿಂಗ್ ಯಾರು ಗೊತ್ತಾ?
TV9 Web | Updated By: ಝಾಹಿರ್ ಯೂಸುಫ್
Updated on:
Jun 05, 2023 | 11:29 PM
WTC Final 2023: ಹಿಟ್ಮ್ಯಾನ್ಗೆ ಸಚಿನ್ ದಾಖಲೆ ಮುರಿಯಲು ಕೇವಲ ಒಂದು ಸಿಕ್ಸ್ನ ಅವಶ್ಯಕತೆಯಿದೆ. ಹೀಗಾಗಿ ಓವಲ್ ಮೈದಾನದಲ್ಲಿ ರೋಹಿತ್ ಶರ್ಮಾ ಬ್ಯಾಟ್ನಿಂದ ವಿಶೇಷ ದಾಖಲೆ ನಿರೀಕ್ಷಿಸಬಹುದು.
1 / 7
WTC Final 2023: ಭಾರತ-ಆಸ್ಟ್ರೇಲಿಯಾ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವು ಬುಧವಾರದಿಂದ (ಜೂ 7) ಶುರುವಾಗಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಹಿತ್ ಶರ್ಮಾ ಒಂದು ಸಿಕ್ಸ್ ಬಾರಿಸಿದರೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಂದಿಕ್ಕಬಹುದು.
2 / 7
ಟೀಮ್ ಇಂಡಿಯಾ ಪರ ಒಟ್ಟು 329 ಟೆಸ್ಟ್ ಇನಿಂಗ್ಸ್ ಆಡಿರುವ ಸಚಿನ್ ತೆಂಡೂಲ್ಕರ್ ಒಟ್ಟು 69 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಸದ್ಯ 83 ಇನಿಂಗ್ಸ್ಗಳಲ್ಲಿ 69 ಸಿಕ್ಸ್ಗಳನ್ನು ಸಿಡಿಸಿರುವ ಹಿಟ್ಮ್ಯಾನ್ಗೆ ಸಚಿನ್ ದಾಖಲೆ ಮುರಿಯಲು ಕೇವಲ ಒಂದು ಸಿಕ್ಸ್ನ ಅವಶ್ಯಕತೆಯಿದೆ. ಹೀಗಾಗಿ ಓವಲ್ ಮೈದಾನದಲ್ಲಿ ರೋಹಿತ್ ಶರ್ಮಾ ಬ್ಯಾಟ್ನಿಂದ ವಿಶೇಷ ದಾಖಲೆ ನಿರೀಕ್ಷಿಸಬಹುದು.
3 / 7
ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಸಿಡಿಲಮರಿ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿದೆ. ಒಟ್ಟು 180 ಟೆಸ್ಟ್ ಇನಿಂಗ್ಸ್ಗಳಲ್ಲಿ ವೀರು 91 ಸಿಕ್ಸ್ಗಳನ್ನು ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.
4 / 7
ಹಾಗೆಯೇ 2ನೇ ಸ್ಥಾನದಲ್ಲಿರುವುದು ಮಹೇಂದ್ರ ಸಿಂಗ್ ಧೋನಿ. 144 ಟೆಸ್ಟ್ ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಧೋನಿ ಒಟ್ಟು 78 ಸಿಕ್ಸ್ಗಳನ್ನು ಸಿಡಿಸಿದ್ದಾರೆ.
5 / 7
329 ಟೆಸ್ಟ್ ಇನಿಂಗ್ಸ್ಗಳಲ್ಲಿ 69 ಸಿಕ್ಸ್ ಬಾರಿಸಿರುವ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
6 / 7
ಹಾಗೆಯೇ 4ನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದು, ಹಿಟ್ಮ್ಯಾನ್ 83 ಇನಿಂಗ್ಸ್ಗಳಲ್ಲಿ 69 ಸಿಕ್ಸ್ಗಳನ್ನು ಬಾರಿಸಿದ್ದಾರೆ.
7 / 7
ಇನ್ನು 184 ಟೆಸ್ಟ್ ಇನಿಂಗ್ಸ್ಗಳಲ್ಲಿ 61 ಸಿಕ್ಸ್ಗಳನ್ನು ಸಿಡಿಸಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.