WTC Final: ಟೀಂ ಇಂಡಿಯಾದ ಈ ಇಬ್ಬರ ಬಗ್ಗೆ ಆಸೀಸ್ ತಂಡ ತಲೆ ಕೆಡಿಸಿಕೊಂಡಿದೆ ಎಂದ ರಿಕಿ ಪಾಂಟಿಂಗ್

|

Updated on: Jun 01, 2023 | 3:15 PM

WTC Final 2023: ಟೀಂ ಇಂಡಿಯಾವನ್ನು ಹಣಿಯಲೇ ಬೇಕೆಂದುಕೊಂಡಿರುವ ಆಸೀಸ್ ತಂಡದಲ್ಲಿ ಟೀಂ ಇಂಡಿಯಾದ ಯಾವ ಆಟಗಾರರ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ ಎಂಬುದನ್ನು ಆಸೀಸ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ರಿವೀಲ್ ಮಾಡಿದ್ದಾರೆ.

1 / 7
ಭಾರತದಲ್ಲಿ ನಡೆದ ಭಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕಾಂಗರೂಗಳನ್ನು 2-1 ಅಂತರದಿಂದ ಮಣಿಸಿ ಸರಣಿ ಗೆದ್ದಿದ್ದಲ್ಲದೆ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗೆ ಟಿಕೆಟ್ ಖಚಿತಪಡಿಸಿಕೊಂಡಿದ್ದ ಟೀಂ ಇಂಡಿಯಾ ಇದೀಗ ಫೈನಲ್​ನಲ್ಲಿ ಇದೇ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುತ್ತಿದೆ.

2 / 7
ಉಭಯ ತಂಡಗಳ ನಡುವಣ ಈ ಟೆಸ್ಟ್ ವಿಶ್ವಕಪ್ ಜೂ.7 ರಿಂದ 11ರ ವರೆಗೆ ಇಂಗ್ಲೆಂಡ್​ನ ಓವೆಲ್​ನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ತಾಲೀಮು ಆರಂಭಿಸಿವೆ. ಟೀಂ ಇಂಡಿಯಾವನ್ನು ಹಣಿಯಲೇ ಬೇಕೆಂದುಕೊಂಡಿರುವ ಆಸೀಸ್ ತಂಡದಲ್ಲಿ ಟೀಂ ಇಂಡಿಯಾದ ಯಾವ ಆಟಗಾರರ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ ಎಂಬುದನ್ನು ಆಸೀಸ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ರಿವೀಲ್ ಮಾಡಿದ್ದಾರೆ.

3 / 7
ಪ್ಯಾಟ್ ಕಮಿನ್ಸ್ ನೇತೃತ್ವದ ಆಸೀಸ್ ತಂಡಕ್ಕೆ ಭಯ ಹುಟ್ಟಿಸಿರುವ ಆ ಇಬ್ಬರ ಬಗ್ಗೆ ಐಸಿಸಿ ರಿವ್ಯೂವ್ ಮೀಟಿಂಗ್​ನಲ್ಲಿ ಮಾತನಾಡಿದ ಪಾಂಟಿಂಗ್, ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಬಗ್ಗೆ ಆಸೀಸ್ ತಂಡದಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ ಎಂದಿದ್ದಾರೆ.

4 / 7
ಆಸ್ಟ್ರೇಲಿಯಾ ತಂಡ ಈ ಇಬ್ಬರ ಬಗ್ಗೆ ಇಷ್ಟು ಚರ್ಚೆ ನಡೆಸಲು ಕಾರಣವೂ ಇದ್ದು, ಆಸೀಸ್ ವಿರುದ್ಧ24 ಟೆಸ್ಟ್ ಪಂದ್ಯಗಳನ್ನಾಡಿರುವ ಚೇತೇಶ್ವರ್ ಪೂಜಾರ ಐದು ಶತಕಗಳು ಸೇರಿದಂತೆ 2033 ರನ್ ಬಾರಿಸಿದ್ದಾರೆ.

5 / 7
ಮತ್ತೊಂದೆಡೆ, ಐಪಿಎಲ್​ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಕಿಂಗ್ ಕೊಹ್ಲಿ ಆಡಿದ 16 ಪಂದ್ಯಗಳಲ್ಲಿ 2 ಶತಕ ಹಾಗೂ 6 ಅರ್ಧ ಶತಕ ಸೇರಿದಂತೆ ಒಟ್ಟು 639 ರನ್ ಬಾರಿಸಿದರು. ಇದುವರೆಗೆ ಆಸೀಸ್ ವಿರುದ್ಧ 24 ಪಂದ್ಯಗಳನ್ನಾಡಿರುವ ಕೊಹ್ಲಿ 42 ಇನ್ನಿಂಗ್ಸ್​ಗಳಲ್ಲಿ 1979 ರನ್ ಬಾರಿಸಿದ್ದಾರೆ. 48.26ರ ಸರಾಸರಿಯಲ್ಲಿ ರನ್ ಕಲೆಹಾಕಿರುವ ಕೊಹ್ಲಿ ಆಸೀಸ್ ವಿರುದ್ಧ 8 ಶತಕ ಹಾಗೂ 5 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

6 / 7
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರವಿಚಂದ್ರನ್ ಅಶ್ವಿನ್, ಕೆಎಸ್ ಭರತ್, ಶುಭ್​ಮನ್ ಗಿಲ್, ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಚೇತೇಶ್ವರ ಪೂಜಾರ, ಅಕ್ಷರ್ ಪಟೇಲ್, ಅಜಿಂಕ್ಯ ರಹಾನೆ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಜಯದೇವ್ ಉನಾದ್ಕಟ್, ಉಮೇಶ್ ಯಾದವ್.  ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.

7 / 7
ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೊಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.  ಮೀಸಲು ಆಟಗಾರರು: ಮಿಚ್ ಮಾರ್ಷ್, ಮ್ಯಾಟ್ ರೆನ್ಶಾ