ಇಂಗ್ಲೆಂಡ್ ದಾಂಡಿಗರ ನಡುವೆ ಯಶಸ್ವಿ ಜೈಸ್ವಾಲ್ ರನ್ನೋಟ
2024 ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಇಂಗ್ಲೆಂಡ್ನ ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಮೊದಲ ಸ್ಥಾನದಲ್ಲಿರುವ ರೂಟ್ ಅವರನ್ನು ಹಿಂದಿಕ್ಕಿಲು ಟೀಮ್ ಇಂಡಿಯಾದ ಯುವ ದಾಂಡಿಗ ಯಶಸ್ವಿ ಜೈಸ್ವಾಲ್ಗೆ ಉತ್ತಮ ಅವಕಾಶವಿದೆ. ಇದಕ್ಕಾಗಿ ಮೆಲ್ಬೋರ್ನ್ ಟೆಸ್ಟ್ನಲ್ಲಿ ಜೈಸ್ವಾಲ್ ಅಬ್ಬರಿಸಲೇಬೇಕು.
1 / 5
2024ರ ವರ್ಷಾಂತ್ಯಕ್ಕೆ ಬಂದು ನಿಂತಿದ್ದೇವೆ. ಈ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಟಾಪ್-3 ಬ್ಯಾಟರ್ ಪಟ್ಟಿಯಲ್ಲಿ ಇಬ್ಬರು ಇಂಗ್ಲೆಂಡ್ ದಾಂಡಿಗರಿದ್ದರೆ, ಇವರ ಮಧ್ಯೆ ಟೀಮ್ ಇಂಡಿಯಾದ ಯುವ ದಾಂಡಿಗ ಯಶಸ್ವಿ ಜೈಸ್ವಾಲ್ ಕೂಡ ಕಾಣಿಸಿಕೊಂಡಿದ್ದಾರೆ.
2 / 5
ಈ ವರ್ಷ ಟೆಸ್ಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಜೋ ರೂಟ್ ಅಗ್ರಸ್ಥಾನದಲ್ಲಿದ್ದಾರೆ. ಈ ವರ್ಷ 31 ಇನಿಂಗ್ಸ್ ಆಡಿರುವ ಜೋ ರೂಟ್, 6 ಶತಕ ಹಾಗೂ 5 ಅರ್ಧಶತಕಗಳೊಂದಿಗೆ ಒಟ್ಟು 1556 ರನ್ ಕಲೆಹಾಕಿದ್ದಾರೆ.
3 / 5
ದ್ವಿತೀಯ ಸ್ಥಾನದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕಾಣಿಸಿಕೊಂಡಿದ್ದಾರೆ. ಈವರೆಗೆ 27 ಟೆಸ್ಟ್ ಇನಿಂಗ್ಸ್ ಆಡಿರುವ ಜೈಸ್ವಾಲ್ ಒಟ್ಟು 1312 ರನ್ ಕಲೆಹಾಕಿದ್ದಾರೆ. ಈ ವೇಳೆ ಯಶಸ್ವಿ ಬ್ಯಾಟ್ನಿಂದ 3 ಶತಕ ಹಾಗೂ 7 ಅರ್ಧಶತಕಗಳು ಮೂಡಿಬಂದಿವೆ.
4 / 5
ಹಾಗೆಯೇ ಮೂರನೇ ಸ್ಥಾನದಲ್ಲಿರುವುದು ಇಂಗ್ಲೆಂಡ್ ತಂಡದ ಬೆನ್ ಡಕೆಟ್. ಈ ವರ್ಷ 32 ಟೆಸ್ಟ್ ಇನಿಂಗ್ಸ್ ಆಡಿರುವ ಡಕೆಟ್ 2 ಶತಕ ಹಾಗೂ 6 ಅರ್ಧಶತಕಗಳೊಂದಿಗೆ ಒಟ್ಟು 1149 ರನ್ ಗಳಿಸಿದ್ದಾರೆ.
5 / 5
ಇದೀಗ ದ್ವಿತೀಯ ಸ್ಥಾನದಲ್ಲಿರುವ ಯಶಸ್ವಿ ಜೈಸ್ವಾಲ್ಗೆ ಅಗ್ರಸ್ಥಾನಕ್ಕೇರಲು ಉತ್ತಮ ಅವಕಾಶವಿದೆ. ಏಕೆಂದರೆ ಇಂಗ್ಲೆಂಡ್ ತಂಡಕ್ಕೆ ಇನ್ನು ಯಾವುದೇ ಟೆಸ್ಟ್ ಸರಣಿಯಿಲ್ಲ. ಇತ್ತ ಜೈಸ್ವಾಲ್ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೂಲಕ 245 ರನ್ ಕಲೆಹಾಕಿದರೆ, ಜೋ ರೂಟ್ ಅವರನ್ನು ಹಿಂದಿಕ್ಕಿ ಈ ವರ್ಷ ಟೆಸ್ಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಳ್ಳಬಹುದು. ಹೀಗಾಗಿಯೇ ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಮೂಲಕ ಜೈಸ್ವಾಲ್ ಯಶಸ್ವಿಯಾಗಿ ಅಗ್ರಸ್ಥಾನಕ್ಕೇರಲಿದ್ದಾರಾ ಕಾದು ನೋಡಬೇಕಿದೆ.