Year Ender 2022: 2022ರಲ್ಲಿ ತಂಡದ ನಾಯಕತ್ವದಿಂದ ಕೆಳಗಿಳಿದ 6 ಕ್ರಿಕೆಟಿಗರಿವರು

| Updated By: ಪೃಥ್ವಿಶಂಕರ

Updated on: Dec 31, 2022 | 4:28 PM

Year Ender 2022: 2022ರಲ್ಲಿ ವಿಶ್ವ ಕ್ರಿಕೆಟ್​ನಲ್ಲಿ ಮಹತ್ವದ ಬದಲಾವಣೆಗಳಾಗಿದ್ವು. ಕೊಹ್ಲಿಯೂ ಸೇರಿದಂತೆ ಪ್ರಮುಖ ಸ್ಟಾರ್ ಕ್ರಿಕೆಟರ್ಸ್, ಕ್ಯಾಪ್ಟನ್ಸಿಯಿಂದ ಕೆಳಗಿಳಿದು ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದ್ರು. ಅಂತಹವರ ಪಟ್ಟಿ ಇಲ್ಲಿದೆ.

1 / 7
2022ರಲ್ಲಿ ವಿಶ್ವ ಕ್ರಿಕೆಟ್​ನಲ್ಲಿ ಮಹತ್ವದ ಬದಲಾವಣೆಗಳಾಗಿದ್ವು. ಕೊಹ್ಲಿಯೂ ಸೇರಿದಂತೆ ಪ್ರಮುಖ ಸ್ಟಾರ್ ಕ್ರಿಕೆಟರ್ಸ್, ಕ್ಯಾಪ್ಟನ್ಸಿಯಿಂದ ಕೆಳಗಿಳಿದು ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದ್ರು. ಹಾಗಾದ್ರೆ, 2022ರಲ್ಲಿ ಕ್ಯಾಪ್ಟನ್ಸಿ ತೊರೆದ ಸ್ಟಾರ್​ಗಳ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ? ಸಣ್ಣ ಇಣುಕುನೋಟ ಹರಿಸೋಣ ಬನ್ನಿ.

2 / 7
ವಿರಾಟ್ ಕೊಹ್ಲಿ, ಭಾರತ: 2021ರ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಸೋತ ಬೆನ್ನಲ್ಲೇ ನಾಯಕತ್ವ ವಹಿಸಿದ್ದ ಕಿಂಗ್ ಕೊಹ್ಲಿ, ಟಿ20 ನಾಯಕತ್ವದಿಂದ ಕೆಳಗಿಳಿದಿದ್ರು. ಮುಂದೆ ಏಕದಿನ ನಾಯಕತ್ವದಿಂದಲೂ ಕೊಹ್ಲಿಯನ್ನು ಕೆಳಗಿಳಿಸಲಾಯ್ತು. ಬಳಿಕ, ಟೆಸ್ಟ್​ ನಾಯಕತ್ವ ಮಾತ್ರ ಉಳಿಸಿಕೊಂಡಿದ್ದ ಕೊಹ್ಲಿ, 2022ರ ಜನವರಿ 15ರಂದು ಟೆಸ್ಟ್​ ನಾಯಕತ್ವಕ್ಕೂ ಗುಡ್​ಬೈ ಹೇಳಿ ಭಾರತೀಯ ಅಭಿಮಾನಿಗಳಿಗೆ ಆಘಾತ ನೀಡಿದ್ರು.

3 / 7
ಕೇನ್ ವಿಲಿಯಮ್ಸನ್, ನ್ಯೂಜಿಲೆಂಡ್: ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯಂತೆ ಬೆಸ್ಟ್​ ನಾಯಕನಾಗಿ ನ್ಯೂಜಿಲೆಂಡ್​ನ ಕೇನ್ ವಿಲಿಯಮ್ಸನ್ ಗುರುತಿಸಿಕೊಂಡಿದ್ರು. ಆದ್ರೆ, ಬ್ಯಾಟಿಂಗ್​ ವೈಫಲ್ಯದಿಂದ ಬೇಸತ್ತು ವಿಲಿಯಮ್ಸನ್, ಕಳೆದ ಡಿಸೆಂಬರ್​ 15ಂದು ಟೆಸ್ಟ್​ ಕ್ಯಾಪ್ಟನ್ಸಿ ಬಿಟ್ಟುಕೊಟ್ಟಿದ್ರು.

4 / 7
ಜೋ ರೂಟ್, ಇಂಗ್ಲೆಂಡ್: ಇಂಗ್ಲೆಂಡ್ ತಂಡದಲ್ಲಿ ಟೆಸ್ಟ್​ ಸ್ಪೆಷಾಲಿಸ್ಟ್​ ಅಂತ ಕರೆಸಿಕೊಂಡವರು ಜೋ ರೂಟ್. ಆದ್ರೆ, ಆ್ಯಷಸ್ ಟೆಸ್ಟ್​ ಸರಣಿಯಲ್ಲಿ ಯಾವಾಗ ಇಂಗ್ಲೆಂಡ್ 4-0ಯಿಂದ ಹೀನಾಯವಾಗಿ ಸೋತಿತೋ, ಅದರ ಬೆನ್ನಲ್ಲೇ, ಅಂದ್ರೆ ಏಪ್ರಿಲ್ 15ರಂದು ರೂಟ್ ಟೆಸ್ಟ್​ ನಾಯಕತ್ವಕ್ಕೆ ಬೈ ಅಂದುಬಿಟ್ರು.

5 / 7
ಇಯಾನ್ ಮಾರ್ಗನ್, ಇಂಗ್ಲೆಂಡ್: ಏಕದಿನ ವಿಶ್ವಕಪ್​ ವಿಜೇತ ಇಂಗ್ಲೆಂಡ್ ತಂಡದ ನಾಯಕ, ಇಯಾನ್ ಮಾರ್ಗನ್ ಈಚಿನ ದಿನಗಳಲ್ಲಿ ಫಾರ್ಮ್​ನ ಸಮಸ್ಯೆಯಿಂದ ಬಳಲುತ್ತಿದ್ರು. ಹೀಗಾಗಿ ಜೂನ್ 28ರಂದು ಮಾರ್ಗನ್, ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ರು. ಈ ಮೂಲಕ ಮಾರ್ಗನ್ ವೈಟ್​ಬಾಲ್ ಕ್ರಿಕೆಟ್ ನಾಯಕತ್ವವನ್ನೂ ಕೊನೆಗೊಳಿಸಿದ್ರು.

6 / 7
ಆ್ಯರನ್ ಫಿಂಚ್, ಆಸ್ಟ್ರೇಲಿಯಾ: ಸ್ಫೋಟಕ ಬ್ಯಾಟ್ಸ್​ಮನ್​ಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್ ಆ್ಯರನ್ ಫಿಂಚ್, ಸೆಪ್ಟೆಂಬರ್ 10ರಂದು ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ರು. ಹೀಗಾಗಿ ಫಿಂಚ್, ಏಕದಿನ ನಾಯಕತ್ವಕ್ಕೆ ಅಂತ್ಯಹಾಡಬೇಕಾಯ್ತು. ಆದ್ರೆ, ಫಿಂಚ್ ಸದ್ಯ ಆಸೀಸ್ ಟಿ20 ತಂಡದ ನಾಯಕತ್ವ ಮುಂದುವರೆಸಿದ್ದಾರೆ.

7 / 7
ಮಿಥಾಲಿ ರಾಜ್, ಭಾರತ: ಭಾರತೀಯ ವನಿತಾ ಏಕದಿನ ಮತ್ತು ಟೆಸ್ಟ್​ ತಂಡವನ್ನು ಮುನ್ನಡೆಸ್ತಿದ್ದ ಮಿಥಾಲಿ ರಾಜ್, ಜೂನ್ 8ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ರು. ಹೀಗಾಗಿ ಭಾರತೀಯ ತಂಡದ ನಾಯಕತ್ವವೀಗ ಹರ್ಮನ್​ಪ್ರೀತ್​ ಕೌರ್​ನ ಹೆಗಲಿಗೇರಿದೆ.

Published On - 4:28 pm, Sat, 31 December 22