‘ಧೋನಿ ನನ್ನ ಮಗನ ಜೀವನವನ್ನು ಹಾಳುಮಾಡಿದ’; ಮತ್ತೆ ಬೆಂಕಿ ಉಗುಳಿದ ಯುವಿ ತಂದೆ ಯೋಗರಾಜ್
Yograj Singh: ಯುವರಾಜ್ ಸಿಂಗ್ ತಂದೆ ಹಾಗೂ ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ಮತ್ತೊಮ್ಮೆ 2011ರ ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಗುರಿಯಾಗಿಸಿಕೊಂಡಿದ್ದು. ಸಾರ್ವಜನಿಕ ವೇದಿಕೆಗಳಲ್ಲಿ ಧೋನಿಯನ್ನು ಟೀಕಿಸಿದ್ದಾರೆ. ಯುವರಾಜ್ ಅವರ ವೃತ್ತಿಜೀವನವನ್ನು ಧೋನಿ ಹಾಳು ಮಾಡಿದ್ದಾರೆ ಎಂದು ಯೋಗರಾಜ್ ಆರೋಪಿಸಿದ್ದಾರೆ.
1 / 5
ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾದ ನಾಯಕ ಎಂಎಸ್ ಧೋನಿಯನ್ನು ಅಜಾತಶತ್ರು ಎನ್ನುತ್ತಾರೆ. ಅಂದರೆ ಧೋನಿಯನ್ನು ವಿರೋಧಿಸುವವರೇ ಇಲ್ಲ ಎನ್ನುವ ಮಾತು ಕ್ರಿಕೆಟ್ ವಲಯದಲ್ಲಿದೆ. ಆದರೆ ಧೋನಿಯನ್ನು ಕಂಡರೆ ಕೆಂಡ ಉಗುಳುವವರೊಬ್ಬರು ಭಾರತದಲ್ಲಿದ್ದಾರೆ. ಆ ವ್ಯಕ್ತಿ ಬೇರೆ ಯಾರು ಅಲ್ಲ, ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್.
2 / 5
ಯುವರಾಜ್ ಸಿಂಗ್ ತಂದೆ ಹಾಗೂ ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ಮತ್ತೊಮ್ಮೆ 2011ರ ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಗುರಿಯಾಗಿಸಿಕೊಂಡಿದ್ದು. ಸಾರ್ವಜನಿಕ ವೇದಿಕೆಗಳಲ್ಲಿ ಧೋನಿಯನ್ನು ಟೀಕಿಸಿದ್ದಾರೆ. ಯುವರಾಜ್ ಅವರ ವೃತ್ತಿಜೀವನವನ್ನು ಧೋನಿ ಹಾಳು ಮಾಡಿದ್ದಾರೆ ಎಂದು ಯೋಗರಾಜ್ ಆರೋಪಿಸಿದ್ದಾರೆ.
3 / 5
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಯೋಗರಾಜ್, ‘ಧೋನಿ ಯುವರಾಜ್ ಅವರ ವೃತ್ತಿಜೀವನವನ್ನು ಹಾಳುಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಧೋನಿಯನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಧೋನಿ ಬಗ್ಗೆ ಅವರು, ‘ನಾನು ಎಂಎಸ್ ಧೋನಿಯನ್ನು ಕ್ಷಮಿಸುವುದಿಲ್ಲ. ಅವರು ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಬೇಕು.
4 / 5
ಆತ ಮಹಾನ್ ಕ್ರಿಕೆಟಿಗ, ಆದರೆ ನನ್ನ ಮಗನಿಗೆ ಆತ ಮಾಡಿದ್ದು ಈಗ ಬೆಳಕಿಗೆ ಬರುತ್ತಿದೆ. ಅವನನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ನನ್ನ ಜೀವನದಲ್ಲಿ ನಾನು ಎರಡು ಕೆಲಸಗಳನ್ನು ಮಾಡಿಲ್ಲ - ಮೊದಲನೆಯದಾಗಿ, ನನಗೆ ಅನ್ಯಾಯ ಮಾಡಿದ ವ್ಯಕ್ತಿಯನ್ನು ನಾನು ಎಂದಿಗೂ ಕ್ಷಮಿಸಿಲ್ಲ. ಎರಡನೆಯದಾಗಿ, ಅನ್ಯಾಯ ಮಾಡಿದ ವ್ಯಕ್ತಿ ನನ್ನ ಕುಟುಂಬದ ಸದಸ್ಯರಾಗಿದ್ದರೂ ಅಥವಾ ನನ್ನ ಮಕ್ಕಳಾಗಿದ್ದರೂ ನಾನು ಯಾರನ್ನೂ ಕ್ಷಮಿಸಲ್ಲ.
5 / 5
ಎಂಎಸ್ ಧೋನಿ ನನ್ನ ಮಗನ ಜೀವನವನ್ನು ಹಾಳುಮಾಡಿದ್ದಾನೆ. ಯುವರಾಜ್ ಇನ್ನೂ ನಾಲ್ಕೈದು ವರ್ಷ ಆಡಬಹುದಿತ್ತು. ಯುವರಾಜ್ ಅವರಂತಹ ಮಗನಿಗೆ ಜನ್ಮ ನೀಡುವಂತೆ ನಾನು ಎಲ್ಲರಿಗೂ ಸವಾಲು ಹಾಕುತ್ತೇನೆ. ಕ್ಯಾನ್ಸರ್‌ನೊಂದಿಗೆ ಆಡಿದ್ದಕ್ಕಾಗಿ ಮತ್ತು ದೇಶಕ್ಕಾಗಿ ವಿಶ್ವಕಪ್ ಗೆದ್ದಿದ್ದಕ್ಕಾಗಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಯೋಗರಾಜ್ ಆಗ್ರಹಿಸಿದ್ದಾರೆ.