‘ಕೊಹ್ಲಿಯನ್ನು ನೋಡಿ ಕಲಿ’; ಬಾಬರ್ ಆಝಂಗೆ ಯೂನಿಸ್ ಖಾನ್ ಸಲಹೆ
Younis Khan: ಆರಂಭದಲ್ಲಿ ವಿರಾಟ್ ಕೊಹ್ಲಿಗೆ ಸರಿಸಮನಾದ ಆಟಗಾರ ಎಂದು ಕರೆಸಿಕೊಳ್ಳುತ್ತಿದ್ದ ಬಾಬರ್ ಆಝಂ, ಇದೀಗ ನಾಯಕತ್ವ ಕಳೆದುಕೊಳ್ಳುವುದರ ಜೊತೆಗೆ ತಂಡದಿಂದಲೂ ಹೊರಬೀಳುವ ಆತಂಕದಲ್ಲಿದ್ದಾರೆ. ಈ ನಡುವೆ ಕಳಪೆ ಫಾರ್ಮ್‌ನಿಂದ ಕಂಗೆಟ್ಟಿರುವ ಬಾಬರ್ ಆಝಂಗೆ ವಿರಾಟ್ ಕೊಹ್ಲಿಯನ್ನು ನೋಡಿ ಕಲಿಯುವಂತೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಯೂನಿಸ್ ಖಾನ್ ಸಲಹೆ ನೀಡಿದ್ದಾರೆ.
1 / 7
ಪಾಕಿಸ್ತಾನ ಸೀಮಿತ ಓವರ್ಗಳ ನಾಯಕ ಬಾಬರ್ ಆಝಂ ಕೆಲವು ದಿನಗಳಿಂದ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಹೀಗಾಗಿಯೇ ಬಾಬರ್ ನಾಯಕತ್ವವನ್ನು ಕಳೆದುಕೊಳ್ಳಬೇಕಾಯಿತು. ಆ ಬಳಿಕ ಮತ್ತೊಮ್ಮೆ ನಾಯಕತ್ವ ಪಡೆಯುವಲ್ಲಿ ಯಶಸ್ವಿಯಾಗಿರುವ ಬಾಬರ್ ಅವರ ಆಟದಲ್ಲಿ ಮಾತ್ರ ಯಾವುದೇ ಬದಲಾವಣೆ ಕಂಡುಬಂದಿಲ್ಲ.
2 / 7
ಒಂದು ಕಾಲದಲ್ಲಿ ವಿರಾಟ್ ಕೊಹ್ಲಿಗೆ ಸರಿಸಮನಾದ ಆಟಗಾರ ಎಂದು ಕರೆಸಿಕೊಳ್ಳುತ್ತಿದ್ದ ಬಾಬರ್ ಆಝಂ, ಇದೀಗ ನಾಯಕತ್ವ ಕಳೆದುಕೊಳ್ಳುವುದರ ಜೊತೆಗೆ ತಂಡದಿಂದಲೂ ಹೊರಬೀಳುವ ಆತಂಕದಲ್ಲಿದ್ದಾರೆ. ಈ ನಡುವೆ ಕಳಪೆ ಫಾರ್ಮ್‌ನಿಂದ ಕಂಗೆಟ್ಟಿರುವ ಬಾಬರ್ ಆಝಂಗೆ ವಿರಾಟ್ ಕೊಹ್ಲಿಯನ್ನು ನೋಡಿ ಕಲಿಯುವಂತೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಯೂನಿಸ್ ಖಾನ್ ಸಲಹೆ ನೀಡಿದ್ದಾರೆ.
3 / 7
ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೂನಿಸ್ ಖಾನ್, ‘ಬಾಬರ್‌ಗೆ ನನ್ನ ಏಕೈಕ ಸಲಹೆ ಎಂದರೆ ಅವರು ಕ್ರಿಕೆಟ್‌ನತ್ತ ಗಮನ ಹರಿಸಬೇಕು. ಅವರು ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಬೇಕು. ಬಾಬರ್ ಆಜಂ ಅವರನ್ನು ನಾಯಕನನ್ನಾಗಿ ಮಾಡಲಾಯಿತು. ಏಕೆಂದರೆ ಅವರು ಆ ಸಮಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರು.
4 / 7
ತಂಡದ ಅತ್ಯುತ್ತಮ ಆಟಗಾರನನ್ನು ನಾಯಕನನ್ನಾಗಿ ಮಾಡಬೇಕು ಎಂದು ನಿರ್ಧರಿಸಿದಾಗ ನಾನು ಅಲ್ಲಿಯೇ ಇದ್ದೆ. ಬಾಬರ್ ಮತ್ತು ಇತರ ಆಟಗಾರರು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಫಲಿತಾಂಶವು ಎಲ್ಲರಿಗೂ ಗೋಚರಿಸುತ್ತದೆ. ನಮ್ಮ ಆಟಗಾರರು ಪ್ರದರ್ಶನಕ್ಕಿಂತ ಹೆಚ್ಚು ಮಾತನಾಡುವುದನ್ನು ನಾನು ನೋಡಿದ್ದೇನೆ. ಬಾಬರ್, ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಸಾಧಿಸಿದ್ದಾರೆ. ಆದರೆ ಪ್ರಸ್ತುತ ಬಾಬರ್ ಮುಂದೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು.
5 / 7
ನಾಯಕತ್ವ ಒಂದು ಸಣ್ಣ ವಿಷಯ, ಕಾರ್ಯಕ್ಷಮತೆ ಮುಖ್ಯವಾಗಿದೆ. ವಿರಾಟ್ ಕೊಹ್ಲಿಯನ್ನು ನೋಡಿ. ಅವರು ತಮ್ಮದೇ ಆದ ಷರತ್ತುಗಳ ಮೇಲೆ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದರು. ಈಗ ವಿಶ್ವದಾದ್ಯಂತ ದಾಖಲೆಗಳನ್ನು ಮುರಿಯುತ್ತಿದ್ದಾರೆ. ದೇಶಕ್ಕಾಗಿ ಆಡುವುದು ಆದ್ಯತೆಯಾಗಿರಬೇಕು ಎಂಬುದನ್ನು ಇದು ತೋರಿಸುತ್ತದೆ. ನಿಮ್ಮಲ್ಲಿ ಯಾವುದೇ ಶಕ್ತಿ ಉಳಿದಿದ್ದರೆ, ನಿಮಗಾಗಿ ಆಟವಾಡಿ ಎಂದು ಯೂನಿಸ್ ಖಾನ್, ಬಾಬರ್ ಆಝಂಗೆ ಸಲಹೆ ನೀಡಿದ್ದಾರೆ.
6 / 7
ವಾಸ್ತವವಾಗಿ 2023 ರ ಏಕದಿನ ವಿಶ್ವಕಪ್‌ನಲ್ಲೂ ಬಾಬರ್ ಆಝಂ ಅವರ ಬ್ಯಾಟ್ ಮೌನಕ್ಕೆ ಶರಣಾಗಿತ್ತು. ಅವರ ನಾಯಕತ್ವದಲ್ಲಿ, ಪಾಕಿಸ್ತಾನ ತಂಡವು ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿತು. ನಂತರ ಬಾಬರ್ ನಾಯಕತ್ವದಲ್ಲೇ ತಂಡವು 2024 ರ ಟಿ20 ವಿಶ್ವಕಪ್‌ನಲ್ಲಿ ಗುಂಪು ಹಂತದಿಂದ ಹೊರಬಿದ್ದಿತ್ತು.
7 / 7
ಅಚ್ಚರಿಯ ಸಂಗತಿಯೆಂದರೆ ಬಲಿಷ್ಠ ಪಾಕಿಸ್ತಾನ ತಂಡ ಅಮೆರಿಕದಂತಹ ಸಣ್ಣ ತಂಡದ ವಿರುದ್ಧವೂ ಸೋಲೊಪ್ಪಿಕೊಂಡಿತ್ತು. ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಪಾಕ್ ತಂಡ ಸೋತಿತ್ತು. ಇಡೀ ಸರಣಿಯಲ್ಲಿ ಬಾಬರ್ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರು. ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಬಾಬರ್ ಕೇವಲ 64 ರನ್ ಕಲೆಹಾಕಿದ್ದರು.