2 ತಿಂಗಳಿಗೆ ಗೊತ್ತಾದ್ರೆ.. ಮಾಜಿ ಮಡದಿ ಧನಶ್ರೀ ಅರೋಪಗಳಿಗೆ ಚಾಹಲ್ ನೀಡಿದ ಉತ್ತರವೇನು?

Updated on: Oct 08, 2025 | 6:05 PM

Yuzvendra Chahal: ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನದ ನಂತರ, ಧನಶ್ರೀ ರಿಯಾಲಿಟಿ ಶೋನಲ್ಲಿ ಚಾಹಲ್ ಮದುವೆಯಾದ ಎರಡೇ ತಿಂಗಳಿಗೆ ಮೋಸ ಮಾಡಿದ್ದರು ಎಂದು ಆರೋಪಿಸಿದ್ದರು. ಈ ಆರೋಪಗಳಿಗೆ ಚಾಹಲ್ ಈಗ ಪ್ರತಿಕ್ರಿಯಿಸಿ, ಅವುಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. "ನಾನು ಆಟಗಾರ, ಮೋಸ ಮಾಡುವುದಿಲ್ಲ. ಆ ಅಧ್ಯಾಯ ಮುಗಿದಿದೆ, ನಾನು ಮುಂದೆ ಹೋಗಿದ್ದೇನೆ," ಎಂದು ಹಿಂದೂಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಚಾಹಲ್ ಸ್ಪಷ್ಟಪಡಿಸಿದ್ದಾರೆ.

1 / 6
ಯುಜ್ವೇಂದ್ರ ಚಾಹಲ್ ಮತ್ತು ಅವರ ಮಡದಿ ಧನಶ್ರೀ ವರ್ಮಾ ಮಾರ್ಚ್ 20, 2025 ರಂದು ವಿಚ್ಛೇದನ ಪಡೆಯುವ ಮೂಲಕ ಪರಸ್ಪರ ಬೇರ್ಪಟ್ಟ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೆ. ಡಿಸೆಂಬರ್ 22, 2020 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಈ ಜೋಡಿ ಸರಿಯಾಗಿ ಐದು ವರ್ಷವೂ ಜೊತೆಯಾಗಿ ಬಾಳಲಿಲ್ಲ. ಮದುವೆಯಾದ ಎರಡನೇ ವರ್ಷಕ್ಕೆ ಇವರಿಬ್ಬರ ನಡುವೆ ಬಿರುಕು ಮೂಡಿತ್ತು ಎಂದು ವರದಿಯಾಗಿತ್ತು.

2 / 6
ಹೀಗಾಗಿ 2022 ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹಲವಾರು ವರದಿಗಳು ಹೇಳಿದ್ದವು. ಅಲ್ಲದೆ ಇಷ್ಟರಲ್ಲೇ ವಿಚ್ಛೇದನ ಕೂಡ ಪಡೆಯಲಿದ್ದಾರೆ ಎಂದು ವರದಿಯಾಗುತ್ತಿತ್ತು. ಅದರಂತೆ ಅಂತಿಮವಾಗಿ ಇವರಿಬ್ಬರು 2025 ರಲ್ಲಿ ಅಧಿಕೃತವಾಗಿ ಬೇರೆ ಬೇರೆಯಾದರು. ಆದರೆ ಅಷ್ಟು ದಿನಗಳವರೆಗೆ ಒಬ್ಬರಿಗೊಬ್ಬರು ಯಾವುದೇ ಆರೋಪಗಳನ್ನು ಮಾಡಿರಲಿಲ್ಲ.

3 / 6
ಆದರೆ ವಿಚ್ಛೇದನ ಬಳಿಕ ಧನಶ್ರೀ ವರ್ಮಾ ಇತ್ತೀಚೆಗಷ್ಟೇ ಚಾಹಲ್ ತನಗೆ ಮದುವೆಯಾದ ಎರಡೇ ತಿಂಗಳಿಗೆ ಮೋಸ ಮಾಡಿದ್ದಾರೆ ಎಂದು ರಿಯಾಲಿಟಿ ಶೋವೊಂದರಲ್ಲಿ ಹೇಳಿದ್ದರು. ಈ ಆರೋಪಕ್ಕೆ ಯುಜ್ವೇಂದ್ರ ಚಾಹಲ್ ಈಗ ಪ್ರತಿಕ್ರಿಯಿಸಿದ್ದಾರೆ.

4 / 6
ಧನಶ್ರೀ ವರ್ಮಾ ಮಾಡಿದ ಎಲ್ಲಾ ಆರೋಪಗಳನ್ನು ನಿರಾಕರಿಸಿ ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಚಾಹಲ್, ‘ನಾನು ಒಬ್ಬ ಆಟಗಾರ ಮತ್ತು ನಾನು ಮೋಸ ಮಾಡುವುದಿಲ್ಲ. ಯಾರಾದರೂ ಎರಡು ತಿಂಗಳೊಳಗೆ ಮೋಸ ಮಾಡಿದರೆ, ಸಂಬಂಧ ಎಷ್ಟು ಕಾಲ ಉಳಿಯುತ್ತದೆ? ನನಗೆ, ಈ ಅಧ್ಯಾಯ ಮುಗಿದಿದೆ. ನಾನು ನನ್ನ ಜೀವನವನ್ನು ಮುಂದುವರಿಸಿದ್ದೇನೆ ಮತ್ತು ಉಳಿದವರೆಲ್ಲರೂ ಸಹ ಮುಂದುವರಿಯಬೇಕು.

5 / 6
ನಮ್ಮ ವೈವಾಹಿಕ ಜೀವನ 4.5 ವರ್ಷಗಳ ಕಾಲ ನಡೆದಿತ್ತು. ಹೀಗಿರುವಾಗ ಮದುವೆಯಾದ ಎರಡು ತಿಂಗಳಲ್ಲಿ ಮೋಸ ಹೋದರೆ ಅಷ್ಟು ವರ್ಷ ಯಾರು ಜೊತೆಯಲಿರುತ್ತಾರೆ?. ನಾನು ಹಿಂದಿನದ್ದು ಮರೆತು ದೂರ ಸರಿದಿದ್ದೇನೆ ಎಂದು ನಾನು ಮೊದಲೇ ಹೇಳಿದ್ದೆ . ಆದರೆ ಕೆಲವರು ಇನ್ನೂ ಅಲ್ಲಿಯೇ ಸಿಲುಕಿಕೊಂಡಿದ್ದಾರೆ . ಅವರ ಮನೆ ನನ್ನ ಹೆಸರಿನಲ್ಲಿ ನಡೆಯುತ್ತಿದೆ, ಆದ್ದರಿಂದ ಅವರು ಹಾಗೆಯೇ ಮುಂದುವರಿಸಬಹುದು.

6 / 6
ನನಗೆ ಅದರ ಬಗ್ಗೆ ಚಿಂತೆ ಇಲ್ಲ, ಅದು ಪ್ರಸ್ತುತವೂ ಅಲ್ಲ. ನಾನು ಈ ಅಧ್ಯಾಯವನ್ನು ಮರೆತಿದ್ದೇನೆ. ಯಾರಾದರೂ ಏನು ಬೇಕಾದರೂ ಹೇಳಬಹುದು. ಅದು ಸೋಶಿಯಲ್ ಮೀಡಿಯಾದಲ್ಲಿ ಬೇಗ ವೈರಲ್ ಆಗುತ್ತದೆ. ಇದರ ಜೊತೆಗೆ ನೂರು ವದಂತಿಗಳು ಹರಡುತ್ತವೆ. ಆದರೆ ನನಗೆ, ಆ ಅಧ್ಯಾಯ ಮುಗಿದಿದೆ . ನಾನು ಅದರ ಬಗ್ಗೆ ಮತ್ತೆ ಮಾತನಾಡಲು ಬಯಸುವುದಿಲ್ಲ ಎಂದಿದ್ದಾರೆ.