
ಕಳೆದ 3 ತಿಂಗಳಲ್ಲಿ ಮೂವರು ಕ್ರಿಕೆಟ್ ದಿಗ್ಗಜರು ನಿಧನರಾಗಿದ್ದು, ಕ್ರಿಕೆಟ್ ಲೋಕಕ್ಕೆ ಆಘಾತ ತಂದಿದೆ. ರಾಡ್ ಮಾರ್ಷ್ ಮತ್ತು ಶೇನ್ ವಾರ್ನ್ ಅವರ ಮರಣದ ನಂತರ ಇದೀಗ ಶನಿವಾರ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು, ಕ್ರಿಕೆಟ್ ಪ್ರೇಮಿಗಳು ಕಂಬನಿ ಮಿಡಿಯುತ್ತಿದ್ದಾರೆ.

2022 ಆಸ್ಟ್ರೇಲಿಯಾದ ಕ್ರಿಕೆಟ್ ಪ್ರೇಮಿಗಳಿಗೆ ಶುಭವಾಗಿಲ್ಲ. 2022ರ ಐದು ತಿಂಗಳ ಅವಧಿಯಲ್ಲಿ ಮೂವರು ಕ್ರಿಕೆಟ್ ದಿಗ್ಗಜರು ನಿಧನರಾಗಿದ್ದಾರೆ. ಮಾರ್ಚ್‌ನಲ್ಲಿ ಮೊದಲು ರಾಡ್ ಮಾರ್ಷ್ ನಿಧನರಾಗಿದ್ದರು. ನಂತರ ಶೇನ್ ವಾರ್ನ್ ಹಾಗೂ ಇದೀಗ ಸೈಮಂಡ್ಸ್ ಸಾವು ಎಲ್ಲರನ್ನೂ ಶೋಕಕ್ಕೆ ತಳ್ಳಿದೆ.

ರಾಡ್ ಮಾರ್ಷ್: 2022ರ ಮಾರ್ಚ್ 22ರಂದು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ರಾಡ್ ಮಾರ್ಷ್ ನಿಧನರಾಗಿದ್ದರು. ಕೋಮಾದಲ್ಲಿದ್ದ ಮಾರ್ಷ್ ಹೃದಯಾಘಾತದಿಂದ ನಿಧನರಾದರು. ರಾಡ್ ಮಾರ್ಷ್ ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರು.

ಶೇನ್ ವಾರ್ನ್: ರಾಡ್ ಮಾರ್ಷ್ ನಿಧನರಾದ ಗಂಟೆಗಳ ಅವಧಿಯಲ್ಲಿ ಅಂದರೆ ಮಾರ್ಚ್ 22ರಂದು ಥೈಲ್ಯಾಂಡ್ನಲ್ಲಿ ಶೇನ್ ವಾರ್ನ್ ಮೃತಪಟ್ಟಿದ್ದರು. ರಜೆಯ ಅವಧಿ ಕಳೆಯಲೆಂದು ತೆರಳಿದ್ದ ಅವರು ಅಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರ ಸಾವಿಗೆ ಹೃದಯಾಘಾತ ಕಾರಣ ಎಂದು ವರದಿಯಾಗಿದೆ. 51 ವರ್ಷದ ವಾರ್ನ್ ಅವರ ಸಾವು ಜಗತ್ತನ್ನು ಬೆಚ್ಚಿಬೀಳಿಸಿತ್ತು.

ಆಂಡ್ರ್ಯೂ ಸೈಮಂಡ್ಸ್: ಶನಿವಾರ ಅಂದರೆ ಮೇ 14ರಂದು ಟೌನ್ಸ್‌ವಿಲ್ಲೆಯಿಂದ 50 ಕಿಲೋಮೀಟರ್ ದೂರದಲ್ಲಿ ನಡೆದ ಕಾರು ಅಪಘಾತದಲ್ಲಿ ಸೈಮಂಡ್ಸ್ ಮೃತಪಟ್ಟಿದ್ದಾರೆ. ಈ 46ರ ಹರೆಯದ ಕ್ರಿಕೆಟಿಗ ಕಾರಿನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದರು. ಅವರ ನಿಧನ ಮತ್ತೆ ಕ್ರೀಡಾ ಪ್ರೇಮಿಗಳನ್ನು ಶೋಕಕ್ಕೆ ತಳ್ಳಿದೆ.
Published On - 10:44 am, Sun, 15 May 22