Dasara Dolls: ಬೆಂಗಳೂರಿನ ಗರುಡಾ ಮಾಲ್​ನಲ್ಲಿ ದಸರಾ ಗೊಂಬೆ ಪ್ರದರ್ಶನ, ಫೋಟೋಸ್ ಕಣ್ತುಂಬಿಕೊಳ್ಳಿ

Vinayak Hanamant Gurav Edited By: ಆಯೇಷಾ ಬಾನು

Updated on: Oct 04, 2024 | 2:12 PM

ನಾಡಿನಾದ್ಯಂತ ದಸರಾ ಸಂಭ್ರಮ ಮನೆ ಮಾಡಿದ್ದು, ನವರಾತ್ರಿ ಉತ್ಸವ ಶುರುವಾಗಿದೆ. ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನ ಗರುಡಾ ಮಾಲ್​ನಲ್ಲಿ ಗೊಂಬೆಗಳ ಉತ್ಸವ ಆಯೋಜನೆ ಮಾಡಲಾಗಿದ್ದು, ರಾಮಾಯಣ ಚರಿತ್ರೆ ಕಣ್ಮನ ಸೆಳೆಯುತ್ತಿದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 13ರವರೆಗೂ ಈ ಗೊಂಬೆಗಳ ಉತ್ಸವ ನಡೆಯಲಿದೆ.

1 / 6
ಬೆಂಗಳೂರಿನ ಗರುಡಾ ಮಾಲ್‌ನಲ್ಲಿ ದಸರಾ ಹಬ್ಬದ ವಿಶೇಷವಾಗಿ ಗೊಂಬೆಗಳ ಉತ್ಸವ ಆಯೋಜಿಸಲಾಗಿದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 13ರವರೆಗೂ ಈ ಗೊಂಬೆಗಳ ಉತ್ಸವ ನಡೆಯಲಿದ್ದು, ಸ್ಯಾಂಡಲ್ವುಡ್ ನಟಿ ಅಮೃತಾ ಅಯ್ಯಂಗಾರ್ ಈ ಗೊಂಬೆಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಬೆಂಗಳೂರಿನ ಗರುಡಾ ಮಾಲ್‌ನಲ್ಲಿ ದಸರಾ ಹಬ್ಬದ ವಿಶೇಷವಾಗಿ ಗೊಂಬೆಗಳ ಉತ್ಸವ ಆಯೋಜಿಸಲಾಗಿದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 13ರವರೆಗೂ ಈ ಗೊಂಬೆಗಳ ಉತ್ಸವ ನಡೆಯಲಿದ್ದು, ಸ್ಯಾಂಡಲ್ವುಡ್ ನಟಿ ಅಮೃತಾ ಅಯ್ಯಂಗಾರ್ ಈ ಗೊಂಬೆಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.

2 / 6

ಬಾಲ ರಾಮನ ಜನನ, ಸೀತೆಗಾಗಿ ಇಂದ್ರ ಧನಸ್ಸು ಮುರಿಯುವ ಶ್ರೀರಾಮ, ಸೀತೆ ಸ್ವಯಂವರ, ತಂದೆಗೆ ಕೊಟ್ಟ ಮಾತಿಗೆ ವನವಾಸಕ್ಕೆ ಹೋಗುವ ರಾಮ-ಲಕ್ಷ್ಮಣ-ಸೀತೆ, ಅರಣ್ಯದಲ್ಲಿ ಸೀತೆಯ ಅಪಹರಣ, ರಾಮ-ರಾವಣನ ಯುದ್ಧ. ಹೀಗೆ ಇಡೀ ರಾಮಾಯಣವನ್ನ ಗೊಂಬೆಗಳಲ್ಲಿ ಅತ್ಯದ್ಭುತವಾಗಿ ಪ್ರಸ್ತುತಪಡಿಲಾಗಿದೆ.

3 / 6

ಇನ್ನೂ ಕಳೆದ‌ ವರ್ಷ ಮಹಾಭಾರತ ಥೀಮ್ ನಲ್ಲಿ ಮಾಡಲಾಗಿದ್ದ ಗೊಂಬೆಗಳ ಪ್ರದರ್ಶನ ಗಿನ್ನಿಸ್ ದಾಖಲೆ ಮಾಡಿತ್ತು.

4 / 6

ಈ ಸಲ ರಾಮಾಯಣ ಥೀಮ್ ನಲ್ಲಿ ಗೊಂಬೆಗಳನ್ನ ಕೂರಿಸಿದ್ದು, 1200ಕ್ಕೂ ಅಧಿಕ ಬೊಂಬೆಗಳನ್ನು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರದ 28 ನುರಿತ ಕುಶಲಕರ್ಮಿಗಳ ನೈಪುಣ್ಯತೆಯಿಂದ ರಚಿಸಲಾಗಿದೆ.

5 / 6

ಅಷ್ಟೇ ಅಲ್ಲ ಮಾಲ್‌ನ ಹೊರ ಭಾಗದಲ್ಲಿ ದಸರಾ ಅಂಬಾರಿ ಪ್ರದರ್ಶನವನ್ನು ಸಹ ಏರ್ಪಡಿಸಿದ್ದು, ದಸರಾ ಮತ್ತು ರಾಮಾಯಣದ ದೃಶ್ಯಾವಳಿಗಳು ಜನರಿಗೆ ರಾಮಾಯಣದ ಚಿತ್ರಣವನ್ನು ಕಟ್ಟಿಕೊಡಲಿದೆ.

6 / 6

ಒಟ್ಟಿನಲ್ಲಿ ಮೈಸೂರಲ್ಲಿ ಐತಿಹಾಸಿಕ ದಸರಾ ವಿಜೃಂಭಣೆಯಿಂದ ನಡಿತಿದ್ದರೇ, ಈ ಕಡೆ ಗರುಡಾ ಮಾಲ್‌ನಲ್ಲಿ ಅಷ್ಟೇ ಕಲರ್ ಫುಲ್ ಆಗಿ ನವರಾತ್ರಿ ಆಚರಿಸಲಾಗ್ತಿದ್ದು, ಸಾರ್ವಜನಿಕರು ಮಿಸ್ ಮಾಡದೇ ಈ ದೃಶ್ಯ ವೈಭವವನ್ನ ಕಣ್ತುಂಬಿಕೊಳ್ಳಬಹುದು.

Loading...
Unable to load recommendations.
Follow Us