ದಾವಣಗೆರೆ: ಮೈಲಾರಲಿಂಗೇಶ್ವರನ ಜಾತ್ರೆಯ ಕಬ್ಬಿಣದ ಸರಪಳಿ ಪವಾಡ, ಕಾಲಿನಲ್ಲಿ ಕಬ್ಬಿಣವನ್ನ ಪಾರು ಮಾಡುವ ರೋಮಾಂಚಕ ಕ್ಷಣಗಳು ಇಲ್ಲಿವೆ ನೊಡಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 15, 2023 | 5:50 PM

ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಬರುವ ದೇವರ ಬೆಳಕೆರೆ ಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ಮೈಲಾರಲಿಂಗೇಶ್ವರ ಜಾತ್ರೆಯು ಅದ್ದೂರಿಯಾಗಿ ನಡೆದಿದೆ. ಕಬ್ಬಿಣದ ಸರಪಳಿ ಹರಿಯುವುದು, ಕಬ್ಬಿಣವನ್ನ ಕಾಲಿನಲ್ಲಿ ಹೋಲ್ ಮಾಡಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪಾರು ಮಾಡುವ ಪವಾಡಗಳು ನೋಡುಗರನ್ನ ರೋಮಾಂಚನಗೊಳಿಸಿತು.

1 / 6
ದೇವರ ಬೆಳಕೆರೆ ಮೈಲಾರ ಲಿಂಗನ ಜಾತ್ರೆ ಎಂದರೆ ಅದೊಂದು ರೋಮಾಂಚನದ ಕ್ಷಣ. ಈ ಕ್ಷಣ ನೋಡಲಿಕ್ಕೆ ರಾಜ್ಯದ ನಾನಾ ಭಾಗಗಳಿಂದ ಜನ ಸಾಗರವೇ ಹರಿದು ಬಂದಿರುತ್ತದೆ.

2 / 6
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಬರುವ ದೇವರ ಬೆಳಕೆರೆ ಗ್ರಾಮ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಮೈಲಾರ ಲಿಂಗೇಶ್ವರ ಜಾತ್ರೆ ಹೆಚ್ಚು ಪ್ರಸಿದ್ದಿ ಪಡೆದಿದೆ. ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಜನ ಸಾಗರವೇ ಹರಿದು ಬರುತ್ತದೆ.

3 / 6
ವಿಶೇಷವಾಗಿ ಜಾತ್ರೆಯ ಕೊನೆಯ ದಿನ ನಡೆಯುವ ಅಸ್ತ್ರ ಪವಾಡ ವೈಜ್ಞಾನಿಕ ಲೋಕಕ್ಕೆ ಸವಾಲು. ಕಾಲಿನಲ್ಲಿ ಕಟ್ಟಿಗೆ   ಪಾರು ಮಾಡಿದರೆ ಮಾರೂದ್ದ ಹಗ್ಗವನ್ನ ಮಾಂಸ ಕಂಡದಲ್ಲಿ ಸರಸರನೇ ಪಾರಾಗುತ್ತದೆ. ಸಾಲದ್ದು ಎಂಬಂತೆ ಸರಪಳಿ ತುಂಡಾಗುತ್ತದೆ.

4 / 6
ಮೂರು ದಿನಗಳ ಈ ಜಾತ್ರೆಗೆ ತೆರೆ ಬಿಳುವುದು ಗೊರವಪ್ಪಗಳ ಪವಾಡದಿಂದ. ಇಲ್ಲಿ ಯಾವುದೇ ತಂತ್ರ ಮಂತ್ರಗಳಿಲ್ಲ. ಕಬ್ಬಿಣದ ಸರಪಳಿ ಹರಿದು ಹಾಕುವುದು. ಕಬ್ಬಿಣವನ್ನ ಕಾಲಿನಲ್ಲಿ ಹೋಲ್ ಮಾಡಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪಾರು ಮಾಡುವುದು. ಇದನ್ನ ನೋಡಿದರೆ ಮೈ ಜುಮ್ ಎನ್ನುತ್ತದೆ.

5 / 6
ಇನ್ನು ಇಂತಹ ಪವಾಡಗಳನ್ನ ಮಾಡುವವರನ್ನ ಗೊರವಪ್ಪಗಳು ಎಂದು ಕರೆಯುತ್ತಾರೆ. ಶಿವಮೊಗ್ಗ ಜಿಲ್ಲೆಯ ಹೊಳೆಹೆನ್ನೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ವಾಸವಾಗಿರುತ್ತಾರೆ. ಇವರಿಗೆ ಮೈಲಾರಲಿಂಗನ ಆರ್ಶೀವಾದ ಇದೆ ಎಂಬ ಪ್ರತೀತಿ. ಹೀಗಾಗಿ ಅವರು ಮೈಲಾರನಿಗೆ ವರ್ಷಕ್ಕೊಮ್ಮೆ ಈ ರೀತಿ ಭಕ್ತಿ ಅರ್ಪಿಸಿದರೆ ಜೀವನದಲ್ಲಿ ಶಾಂತಿ  ನೆಮ್ಮದಿ ಸಿಗುತ್ತದೆ. ಜೊತೆಗೆ ದೇಶ ಸುಭಿಕ್ಷೆಯಿಂದ ಇರುತ್ತದೆ ಎಂಬುದು ಇವರ ನಂಬಿಕೆ.

6 / 6
ಒಟ್ಟಾರೆ ಮೂಲ ಮೈಲಾರದ ಜಾತ್ರೆ ಮುಗಿದ ಲಕ್ಷಣಕ್ಕೆ ಇಲ್ಲಿನ ದೇವರ ಬೆಳಕೆರೆ ಗ್ರಾಮದಲ್ಲಿ ಜಾತ್ರೆ ನಡೆಯುತ್ತಿದೆ.  ಅಲ್ಲಿ ಕಾರ್ಣೀಕ ಮುಗಿಸಿಕೊಂಡು ಭಕ್ತರು ದೇವರ ಬೆಳಕೆರೆಗೆ ಬರುತ್ತಾರೆ. ದೊಡ್ಡ ಮೈಲಾರ ಮುಗಿಸಿಕೊಂಡು ಇಲ್ಲಿನ ಮೈಲಾರನ ಆರ್ಶೀವಾದ ಪಡೆದರೆ ಮಾತ್ರ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ಜನ ಸಾಗರವೇ ಸೇರಿರುತ್ತದೆ.