ಪ್ರೇಮಿಗಳ ದಿನಕ್ಕೆ ಹೆಚ್ಚಿದ ಗುಲಾಬಿ ಡಿಮ್ಯಾಂಡ್​! ಕೋಲಾರದ ತಾಜ್​ ಮಹಲ್​ ತಳಿ ಕೆಂಪು ಗುಲಾಬಿ ಬೀರುತ್ತಿದೆ ಕಂಪು!

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 10, 2024 | 6:15 PM

ಅದು ಒಂದೇ ಕ್ಷಣಕ್ಕೆ ಹೃದಯಗಳ ನಡುವೆ ಹುಟ್ಟುವ ಪ್ರೀತಿಯಾದರೂ, ಆ ಪ್ರೀತಿಯನ್ನು ತನ್ನ ಪ್ರಿಯತಮೆ ಎದುರು ಹೇಳುವುದಕ್ಕೆ ಎಂಟೆದೆಯ ಹುಡುಗರೂ ಕೂಡ ನಡುಗಿ ಹೋಗುತ್ತಾರೆ. ಆದ್ರೆ, ಆ ಒಂದು ಪ್ರೇಮ ಸಾಧನ, ಪ್ರೇಮಿಯ ಜೊತೆಗೆ ಧೈರ್ಯವಾಗಿ ನಿಲ್ಲುತ್ತದೆ. ಬರೀ ಪ್ರೇಮಿಗಳಿಗಷ್ಟೇ ಅಲ್ಲ, ಬರದ ನಾಡಿನ ರೈತರ ಜೊತೆಗೂ ನಿಲ್ಲುತ್ತಿದೆ. ಈ ಸ್ಟೋರಿ ಓದಿ.

1 / 8
ತಾಜ್​ ಮಹಲ್​ ತಳಿಯ ಚೆಂದದ ಕೆಂಪು ಗುಲಾಬಿ ಹೂವು, ಗುಲಾಬಿ ಹೂವುಗಳನ್ನು ಸೊಗಲಾಸಗಿ ಜೋಡಿಸಿ ಪ್ಯಾಕಿಂಗ್​ ಮಾಡುತ್ತಿರುವ ಕೆಲಸಗಾರರು, ಮತ್ತೊಂದೆಡೆ ಪಾಲಿ ಹೌಸ್​ನಲ್ಲಿ ಕಂಡು ಬರುವ ಸುಂದರ ಗುಲಾಬಿಯ ತೋಟ. ಇದೆಲ್ಲ ದೃಶ್ಯ ಗಳು ಕಂಡು ಬಂದಿದ್ದು ಕೋಲಾರ ತಾಲ್ಲೂಕು ಛತ್ರಕೋಡಿಹಳ್ಳಿ ಗ್ರಾಮದ ಮುನೇಗೌಡ ಅವರ ಗುಲಾಬಿ ತೋಟದಲ್ಲಿ.

2 / 8
ಗುಲಾಬಿ ಹೂವು ಅಂದ್ರೆ ಹಾಗೆ, ಅದೊಂದು ಪ್ರೀತಿಯ ಸಂಕೇತ. ಇದೊಂದು ಪ್ರೇಮ ಸಾಧನ, ಅದರಲ್ಲೂ ಪ್ರೇಮಿಯೊಬ್ಬ ತನ್ನ ಪ್ರೀತಿಯನ್ನು ಪ್ರಿಯತಮೆಯ ಮುಂದೆ ಹೇಳಲು ಇರುವ ಏಕೈಕ ಸಾಧನ ಅಂದ್ರೆ ಈ ಗುಲಾಬಿ. ಪ್ರತಿವರ್ಷ ಫ್ರೆಬ್ರವರಿ ಬಂತೆಂದರೆ ಸಾಕು ಗುಲಾಬಿ ಹೂವಿಗೆ ಎಲ್ಲಿಲ್ಲದ ಬೇಡಿಕೆ, ಅದರಲ್ಲೂ ನಮ್ಮ ದೇಶಕ್ಕಿಂತ ಬೇರೆ ದೇಶಗಳಲ್ಲೇ ಇದಕ್ಕೆ ಡಿಮ್ಯಾಂಡ್​ ಜಾಸ್ತಿ ಇರುತ್ತದೆ.

3 / 8
 ಅದರಲ್ಲೂ ಬರದ ತವರು ಎಂದೇ ಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆಯಲ್ಲಿ ಬರದ ನಡುವೆಯೂ ಹಲವು ರೈತರು ಗುಲಾಬಿ ಬೆಳೆದಿದ್ದಾರೆ. ತಾಜ್​ಮಹಲ್, ಗೋಸ್ಟ್ರೈಕ್, ಅವಲಂಚ್​ ವೈಟ್​, ಸೇರಿದಂತೆ ಹಲವು ಬಗೆಯ ಗುಲಾಬಿ ಹೂ ಗಳನ್ನು​ ಆಸ್ಟ್ರೇಲಿಯಾ, ಜಪಾನ್, ಸಿಂಗಾರಪುರ, ಮಲೇಶಿಯಾ ದೇಶಗಳಿಗೆ ರಪ್ತು ಮಾಡ್ತಾರೆ.

4 / 8
ವರ್ಷ ಪೂರ್ತಿ ತಾಜ್​ಮಹಲ್​ ಗುಲಾಬಿ ಹೂವಿಗೆ ಬೇಡಿಕೆ ಇರುತ್ತದೆ. ಇನ್ನು ಜನವರಿ ಹೊಸವರ್ಷ ಹಾಗೂ ವ್ಯಾಲೆಂಟೈನ್ಸ್​ ಡೇ ಬಂದ್ರೆ ಸಾಕು ಹೂವಿಗೂ ಬೇಡಿಕೆ ಹೆಚ್ಚು, ಜೊತೆಗೆ ಒಳ್ಳೆಯ ಬೆಲೆಯೂ ಸಿಗುತ್ತದೆ. ಆದರೆ, ಇತ್ತೀಚೆಗೆ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಹೂವುಗಳ ಭರಾಟೆ ಜೋರಾಗಿರುವ ಹಿನ್ನೆಲೆಯಲ್ಲಿ ಗುಲಾಬಿ ಹೂವಿಗೆ ನಾವು ನಿರೀಕ್ಷಿಸಿದಷ್ಟು ಬೆಲೆ ಸಿಗುತ್ತಿಲ್ಲ ಎನ್ನುವುದು ಗುಲಾಬಿ ಹೂವು ಬೆಳೆದವರ ಮಾತು.

5 / 8
ಇನ್ನು ಕೋಲಾರದಂತ ಬಯಲು ಸೀಮೆ ಜಿಲ್ಲೆಯಲ್ಲಿ ನೀರಿಲ್ಲದ ಪರಿಸ್ಥಿತಿಯಲ್ಲಿ ಗುಲಾಬಿ ಹೂವನ್ನು ಬೆಳೆಯೋದು ಅಷ್ಟು ಸುಲಭದ ಮಾತಲ್ಲ. ಅದು ನಿಜಕ್ಕೂ ಸವಾಲಿನ ವಿಷಯ. ಇಂಥಹ ಪರಿಸ್ಥಿತಿಯಲ್ಲಿ ಸುಮಾರು 20 ವರ್ಷಗಳಿಂದ ಐದು ಎಕರೆ ಪ್ರದೇಶದಲ್ಲಿ ಗುಲಾಬಿ ಹೂ ಬೆಳೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

6 / 8
ಜೊತೆಗೆ ತಮ್ಮ ಶ್ರಮಕ್ಕೂ ಕೂಡ ನಿರೀಕ್ಷೆಗೂ ಮೀರಿದ ಲಾಭವನ್ನು ಅವರು ಗಳಿಸಿದ್ದಾರೆ. ಈ ಮೂಲಕ ಗುಲಾಬಿಯನ್ನು ನಂಬಿದವರಿಗೆ ಅದು ಎಂದಿಗೂ ಮೋಸ ಮಾಡೋದಿಲ್ಲ, ಅತ್ತ ಪ್ರೇಮಿಗೆ ಪ್ರೀತಿಯ ನಿವೇದನೆಗೆ ಬೆಂಬಲ ನೀಡುವಂತೆ ಕಷ್ಟ ಪಟ್ಟು ಗುಲಾಬಿ ಬೆಳೆದ ರೈತನ ಬದುಕನ್ನು ಕೂಡ ಗುಲಾಬಿ ಹಸನಾಗಿಸುತ್ತಿದೆ ಅನ್ನೋದು ಗುಲಾಬಿ ಬೆಳೆಗಾರರಾದ ಮುನೇಗೌಡ ಅವರ ಮಾತು.

7 / 8
ಆದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಅಷ್ಟೊಂದು ಬೆಲೆ ಸಿಗುತ್ತಿಲ್ಲ. ಒಂದು ಗುಲಾಬಿ ಹೂವು ಕಳೆದ ವರ್ಷ 18 ರಿಂದ 25 ರೂಪಾಯಿ ವರೆಗೆ ಮಾರಾಟವಾಗುತ್ತಿತ್ತು. ಆದರೆ, ಈ ವರ್ಷ ಒಂದು ಗುಲಾಬಿ ಹೂವು 12 ರಿಂದ 14 ರೂಪಾಯಿಗೆ ಮಾರಾಟವಾಗುತ್ತಿದೆ. ಸದ್ಯ ಕೆಲಸದವರ ಕೊರತೆ, ಮಳೆ ಕೊರತೆ, ರಸಗೊಬ್ಬರ ಹಾಗೂ ಕೀಟನಾಶಕಗಳ ಬೆಲೆ ಏರಿಕೆ ನಡುವೆ ಹೂವು ಬೆಳೆಗಾರರಿಗೆ ಕನಿಷ್ಠ ಲಾಭ ಸಿಗುತ್ತಿದೆಯಂತೆ. ಹಾಗಾಗಿ ಪ್ಲಾಸ್ಟಿಕ್​, ಆರ್ಟಿಫಿಷಿಯಲ್​ ಹೂವುಗಳ ಬೆಳಕೆ ಕಡಿಮೆ ಮಾಡಿದ್ರೆ ಪರಿಸರಕ್ಕೂ ಒಳ್ಳೆಯದು, ರೈತರಿಗೂ ಒಳ್ಳೆಯದು ಅನ್ನೋದು ರೈತರ ಮಾತು.

8 / 8
ಒಟ್ಟಾರೆ ಈಗುಲಾಬಿಯ ಸ್ವಭಾವನೇ ಹಾಗೆ ನೋಡಿ ಮುಳ್ಳಿನಲ್ಲೇ ಹುಟ್ಟಿ ಮುಳ್ಳಿನಲ್ಲೇ ಬೆಳೆದ್ರೂ, ಮುದ್ದಾದ ಮನಸ್ಸಿನ ಪ್ರೇಮಿಗಳನ್ನು ಒಂದು ಮಾಡಿ ಸಂತಸ ಕೊಡುತ್ತೆ, ಅದೇ ರೀತಿ ತನ್ನನ್ನು ನಂಬಿ ಬೆಳೆ ಬೆಳೆದ ರೈತನ ಬದುಕನ್ನೂ ಹೂವಾಗಿಸುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ.

Published On - 6:10 pm, Sat, 10 February 24