Updated on: Mar 25, 2022 | 2:48 PM
ಫ್ಯಾಷನ್ ಶೋ ಎಂದರೆ ಫ್ಯಾಷನ್ ಪ್ರಿಯರಿಗೆ ಅಚ್ಚುಮೆಚ್ಚು. ದುಬೈನಲ್ಲಿ ಇನ್ವಿಕ್ಟಾ ಟ್ರಿಯೋ ಸಹಯೋಗದಲ್ಲಿ ಇತ್ತೀಚೆಗೆ ಗ್ಲಿಟ್ಜ್ ಆ್ಯಂಡ್ ಗ್ಲಿಟ್ರೇಟಿ ಸೀಸನ್ 2 ಇಂಟರ್ ನ್ಯಾಷನಲ್ ಫ್ಯಾಷನ್ ಸ್ಪರ್ಧೆ ನಡೆಯಿತು. ಆ ಕಲರ್ಫುಲ್ ಕಾರ್ಯಕ್ರಮದ ಆಕರ್ಷಕ ಫೋಟೋಗಳು ಇಲ್ಲಿವೆ. ಕನ್ನಡದ ಪ್ರತಿಭೆಗಳು ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ದುಬೈನಲ್ಲಿ ನಡೆದ ಈ ಕಾರ್ಯಕ್ರಮವನ್ನು ಕೇರಳ ಮೂಲದ ಶರತ್ ಚಂದ್ರನ್ ಆಯೋಜನೆ ಮಾಡಿದ್ದರು. ಈ ಇವೆಂಟ್ಗೆ ದುಬೈನ ಪ್ರವಾಸೋದ್ಯಮ ಸಚಿವರು ಅತಿಥಿಯಾಗಿ ಆಗಮಿಸಿ ಉದ್ಘಾಟಸಿದರು. ಕನ್ನಡದ ನಟಿ ಸಂಹಿತಾ ವಿನ್ಯಾ, ಕರ್ನಾಟಕದ ಡಿಸೈನರ್ ಫಾರೆವರ್ ನವೀನ್ ಕುಮಾರ್ ಕೂಡ ಪಾಲ್ಗೊಂಡರು.
ಝಗಮಗಿಸುವ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆದ ಈ ಇವೆಂಟ್ನಲ್ಲಿ ಜರ್ಮನಿ, ಸ್ಪೇನ್, ಸ್ವಿಡನ್, ರಷ್ಯಾ ಸೇರಿ 16ಕ್ಕೂ ಅಧಿಕ ದೇಶಗಳ ಡಿಸೈನರ್ಗಳು ಸ್ಪರ್ಧಿಸಿದ್ದರು. ಆ ಪೈಕಿ ‘ಅಂತಾರಾಷ್ಟ್ರೀಯ ಸೆಲೆಬ್ರಿಟಿ ಡಿಸೈನರ್’ ಟೈಟಲ್ ಅನ್ನು ಭಾರತದಿಂದ ಸ್ಪರ್ಧಿಸಿದ್ದ ವಿನ್ಯಾಸಕ ಫಾರೆವರ್ ನವೀನ್ ಕುಮಾರ್ ಪಡೆದರು.