Kannada News Photo gallery Most Used Passwords: ಈ 10 ಪಾಸ್ವರ್ಡ್ಗಳು ತುಂಬಾ ಅಪಾಯಕಾರಿ! ನಿಮ್ಮ ಪಾಸ್ವರ್ಡ್ ಕೂಡಾ ಇದೇ ಆಗಿದ್ದರೆ ತಕ್ಷಣ ಅಳಿಸಿ
Most Used Passwords: ಈ 10 ಪಾಸ್ವರ್ಡ್ಗಳು ತುಂಬಾ ಅಪಾಯಕಾರಿ! ನಿಮ್ಮ ಪಾಸ್ವರ್ಡ್ ಕೂಡಾ ಇದೇ ಆಗಿದ್ದರೆ ತಕ್ಷಣ ಅಳಿಸಿ
ಪಾಸ್ವರ್ಡ್ಗಳು ನಿಮ್ಮ ಖಾತೆಯ ಸುರಕ್ಷತೆಗೆ. ನೆನಪಿಟ್ಟುಕೊಳ್ಳಲು ಸುಲಭವೆಂದು ಸರಳ ಪಾಸ್ವರ್ಡ್ ಬಳಸಿದರೆ ನಿಮ್ಮ ಖಾತೆಯನ್ನು ಹ್ಯಾಕರ್ಸ್ ಕೈಗೆ ಕೊಟ್ಟಂತೆಯೇ ಲೆಕ್ಕ. ಅತೀ ಹೆಚ್ಚು ಬಳಕೆಯಲ್ಲಿರುವ ಪಾಸ್ವರ್ಡ್ಗಳು ಯಾವುದು? ಎಂಬುದನ್ನು ತಿಳಿದುಕೊಳ್ಳಿ.
1 / 7
(ಸಾಂದರ್ಭಿಕ ಚಿತ್ರ) ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದ ಯುಗದಲ್ಲಿ ದಿನಕ್ಕೊಂದು ಅಪ್ಲಿಕೇಶ್ಗಳು (APP) ಹುಟ್ಟಿಕೊಳ್ಳುತ್ತಿದೆ. ಬ್ಯಾಂಕ್ ಖಾತೆ, ವೈಯ್ಯಕ್ತಿಕ ವಿವರಗಳು, ಸಾಮಾಜಿಕ ಮಾಧ್ಯಮ ಖಾತೆಗೆ ಸಂಬಂಧಿಸಿದಂತೆ ಹೊಸ ಹೊಸ ಅಪ್ಲಿಕೇಶನ್ಗಳಿಗೂ ಒಂದೊಂದು ವಿಧದ ಪಾಸ್ವರ್ಡ್ಗಳನ್ನು ಇರಿಸುವುದು ಸುರಕ್ಷತೆಯ ದೃಷ್ಟಿಯಿಂದ ಅನಿವಾರ್ಯ.
2 / 7
ವಿವಿಧ ಅಪ್ಲಿಕೇಶನ್ಗೆ ಸಂಬಂಧಿಸಿದಂತೆ ಹೊಸದಾದ ಪಾಸ್ವರ್ಡ್ ಬೇಕು. ಹೀಗಿರುವಾಗ ಪಾಸ್ವರ್ಡ್ಗಳನ್ನು ನೆನಪಿಟ್ಟುಕೊಳ್ಳುವುದೇ ಹರಸಾಹಸ. ಹಾಗಾಗಿ ಜನರು ನೆನಪಿಟ್ಟುಕೊಳ್ಳಲು ಸುಲಭವಾದ ಪಾಸ್ವರ್ಡ್ಗಳನ್ನು ಹುಡುಕುತ್ತಾರೆ. ಇಂತಹ ಪಾಸ್ವರ್ಡ್ಗಳು ನಿಮ್ಮ ಖಾತೆಯನ್ನು ಹ್ಯಾಕರ್ಸ್ ಕೈಗೆ ಕೊಟ್ಟಂತೆ ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.
3 / 7
ಸುಭದ ಪಾಸ್ವರ್ಡ್ಗಳನ್ನು ನೀವು ಬಳಸಿದ್ದೀರಿ ಎಂದಾದರೆ ನಿಮ್ಮ ಖಾತೆಯನ್ನು ಹ್ಯಾಕ್ ಮಾಡುವುದು ತುಂಬಾ ಸುಲಭ. ಸುಲಭದ ಪಾಸ್ವರ್ಡ್ಗಳು ಅಂದರೆ ಯಾವುವು? ಯಾವ ಪಾಸ್ವರ್ಡ್ಗಳನ್ನು ಜನರು ಹೆಚ್ಚು ಬಳಸಿದ್ದಾರೆ ಎಂಬುದರ ವಿವರ ಇಲ್ಲಿದೆ.
4 / 7
ನಾವು ಹೇಳುವು ಸುಲಭದ ಪಾಸ್ವರ್ಡ್ಗಳು ನಿಮ್ಮದಾಗಿದ್ದಲ್ಲಿ ತಕ್ಷಣವೇ ಅಳಿಸಿ. ಏಕೆಂದರೆ ಇಂತಹ ಸರಳ ಪಾಸ್ವರ್ಡ್ಗಳು ನಿಮ್ಮ ಖಾತೆಯನ್ನು ಹ್ಯಾಕ್ ಮಾಡುವ ಅಪಾಯ ತಂದೊಡ್ಡಬಹುದು.
5 / 7
ಪಾಸ್ವರ್ಡ್- 123456 ಅಥವಾ 12345. ಹೇಳಲು ಸುಲಭ. ನೆನಪಿಟ್ಟುಕೊಳ್ಳಲು ಸರಳ. ಇಂತಹ ಪಅಸ್ವರ್ಡ್ ಇಟ್ಟುಕೊಳ್ಳೋಣ ಎಂದು ಭಾವಿಸಿದ್ದರೆ ನಿಮಗೇ ನೀವು ಅಪಾಯ ತಂದೊಡ್ಡಿಕೊಂಡಂತೆ. ಹ್ಯಾಕ್ ಮಾಡುವವರ ಕೈಗೆ ನಿಮ್ಮ ಖಾತೆಯನ್ನು ನೀವೇ ಕೊಟ್ಟಂತೆ.
6 / 7
ಪಾಸ್ವರ್ಡ್- 123456789 ಅಥವಾ 12345678. ಹೇಳಲು ಒಂದರಿಂದ ಒಂಭತ್ತು. ನೆನಪಿಟ್ಟುಕೊಳ್ಳಲು ಸುಲಭದ ಸಂಖ್ಯೆ. ಅತಿ ಹೆಚ್ಚು ಬಳಕೆಯಾದ ಪಾಸ್ವರ್ಡ್ಗಳಲ್ಲಿ ಇವೂ ಒಂದು.
7 / 7
Password ಅಥವಾ 111111 ಅಥವಾ abc 123. ಈ ರೀತಿಯ ಪಾಸ್ವರ್ಡ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ನಿಮ್ಮ ಖಾತೆ ಹ್ಯಾಕ್ ಆಗದಂತೆ ಎಚ್ಚರವಹಿಸಿ. ಇದು ನಿಮ್ಮ ಸುರಕ್ಷತೆ ಮತ್ತು ಖಾತೆಯ ಸುರಕ್ಷತೆಗೆ ಸಹಾಯಕ.
Published On - 2:56 pm, Tue, 18 May 21