Updated on: Oct 20, 2021 | 8:51 AM
ಎಸ್ ಟಿ ಸೋಮಶೇಖರ್ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಭೇಟಿ ನೀಡಿದ್ದಾರೆ.
ಸೋಮಶೇಖರ್ ತಾಯಿ ಸೀತಮ್ಮ ಹುಟ್ಟುಹಬ್ಬ ಹಿನ್ನೆಲೆ ಎಸ್ ಎಂ ಕೃಷ್ಣ ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ್ದರು.
ಸೋಮಶೇಖರ್ ತಾಯಿ ಎಸ್ ಎಂ ಕೃಷ್ಣರನ್ನು ಭೇಟಿಯಾಗಲು ಇಚ್ಛಿಸಿದ್ದರು. ಈ ವಿಷಯವನ್ನು ಸಚಿವ ಸೋಮಶೇಖರ್ ಕೃಷ್ಣಗೆ ತಿಳಿಸಿದ್ದರು.
ಸೋಮಶೇಖರ್ ತನ್ನ ತಾಯಿ ಆಸೆಯನ್ನು ಎಸ್ಎಂಕೆ ಗಮನಕ್ಕೆ ತಂದಾಗ ಸೀತಮ್ಮ ನಮಗಿಂತ ಹಿರಿಯರು ನಾನೇ ಬರುತ್ತೇನೆ ಅಂತ ಹೇಳಿದ್ದರು.
ಸೋಮಶೇಖರ್ ತಾಯಿ ಸೀತಮ್ಮನವರು ಇಚ್ಛಿಸಿದಂತೆ ಎಸ್ ಎಂ ಕೃಷ್ಣ ನಿನ್ನೆ (ಅ.19) ರಾತ್ರಿ ಸೋಮಶೇಖರ್ ನಿವಾಸಕ್ಕೆ ಭೇಟಿ ನೀಡಿದ್ದರು. ಭೇಟಿ ನೀಡಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.