Kannada News Photo gallery Fake iPhones being sold in the market here are simple tips to check it is not duplicate or refurbished
Fake iPhone: ಮಾರುಕಟ್ಟೆಯಲ್ಲಿ ಭರ್ಜರಿ ಸೇಲ್ ಆಗುತ್ತಿದೆ ಡುಪ್ಲಿಕೇಟ್ ಐಫೋನ್ಗಳು: ಕಂಡುಹಿಡಿಯುವುದು ಹೇಗೆ?
TV9 Web | Updated By: Vinay Bhat
Updated on:
Dec 05, 2022 | 11:28 AM
Apple iPhone: ಮಾರುಕಟ್ಟೆಯಲ್ಲಿಂದು ನಕಲಿ ಫೋನ್ಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದು ಭಾರತದಲ್ಲಿ ಹೆಚ್ಚು ಎಂಬುದು ಆತಂಕಕಾರಿ ವಿಚಾರ. ಇತ್ತೀಚೆಗಷ್ಟೆ ನೊಯಿಡಾದಲ್ಲಿ ಪೊಲೀಸರು ಐಫೋನ್ 13 ಫೇಕ್ ಫೋನ್ಗಳನ್ನು ವಶಪಡಿಸಿಕೊಂಡಿದ್ದರು.
1 / 9
ಮಾರುಕಟ್ಟೆಯಲ್ಲಿಂದು ನಕಲಿ ಫೋನ್ಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದು ಭಾರತದಲ್ಲಿ ಹೆಚ್ಚು ಎಂಬುದು ಆತಂಕಕಾರಿ ವಿಚಾರ. ಇತ್ತೀಚೆಗಷ್ಟೆ ನೊಯಿಡಾದಲ್ಲಿ ಪೊಲೀಸರು ಐಫೋನ್ 13 ನಕಲಿ ಫೋನ್ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಮೂರು ಜನರ ತಂಡವನ್ನು ಬಂಧಿಸಿದ್ದರು. ಇವರಿಂದ60ಕ್ಕೂ ಅಧಿಕ ಫೇಕ್ ಐಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
2 / 9
ಪೊಲೀಸರು ಹೇಳಿರುವ ಪ್ರಕಾರ, ಇವರು ದೆಹಲಿಯಲ್ಲಿ ಕೇವಲ 12,000 ರೂಪಾಯಿಗೆ ಫೋನನ್ನು ಖರೀದಿಸಿ ಚೀನಾದ ಶಾಪಿಂಗ್ ವೆಬ್ಸೈಟ್ನಿಂದ ಥೇಟ್ ಐಫೋನ್ ರೀತಿಯ ಬಾಕ್ಸ್ ಅನ್ನು ಆರ್ಡರ್ ಮಾಡಿ ಅದಕ್ಕೆ ಆ್ಯಪಲ್ ಸ್ಟಿಕ್ಕರ್ ಅಂಟಿಸಿ ಸೇಲ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಹೀಗಿರುವಾಗ ನಿಮ್ಮಲ್ಲಿರುವ ಐಫೋನ್ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯುವುದು ಹೇಗೆ?
3 / 9
IMEI ನಂಬರ್: ಎಲ್ಲ ಒರಿಜಿನಲ್ ಐಫೋನ್ಗಳಲ್ಲಿ IMEI ಇರುತ್ತದೆ. ನಿಮ್ಮ ಐಫೋನ್ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯಲು ಇರುವ ಸುಲಭ ವಿಧಾನ ಇದಾಗಿದೆ.
4 / 9
IMEI ನಂಬರ್ ನೋಡುವುದು ಎಲ್ಲಿ?: ಅನೇಕ ಕಡೆಗಳಲ್ಲಿ ಈ IMEI ಸಂಖ್ಯೆಯನ್ನು ನೀವು ಪರಿಶೀಲಿಸಬಹುದು. ನಿಮ್ಮ ಮೊಬೈಲ್ ಬಾಕ್ಸ್ನಲ್ಲಿ ಕೂಡ ಇದು ಇರುತ್ತದೆ. ಐಫೋನ್ ಸೆಟ್ಟಿಂಗ್ ವಿಭಾಗಕ್ಕೆ ಹೋದರೆ ಅಲ್ಲೂ ನೋಡಬಹುದು.
5 / 9
ಸೆಟ್ಟಿಂಗ್ಸ್ನಲ್ಲಿ IMEI ನಂಬರ್ ನೋಡಲು ಹೀಗೆ ಮಾಡಿ. ಸೆಟ್ಟಿಂಗ್ಸ್-ಜನರಲ್ ಇಲ್ಲಿ ಅಬೌಟ್ ಮೇಲೆ ಕ್ಲಿಕ್ ಮಾಡಿದರೆ ಸಿಗುತ್ತದೆ. ಇಲ್ಲಿ ನಿಮಗೆ IMEI ನಂಬರ್ ಕಾಣಿಸಿಲ್ಲ ಎಂದಾದರೆ ನಿಮ್ಮ ಐಫೋನ್ ನಕಲಿ ಆಗಿರುವ ಸಾಧ್ಯತೆ ಹೆಚ್ಚಿದೆ.
6 / 9
ನಿಮಗೆ ಹೇಗೆ ಪರಿಶೀಲಿಸುವುದು ಎಂದು ತಿಳಿಯಲು ಸಾಧ್ಯವಾಗದಿದ್ದರೆ ನಿಮ್ಮ ಪಕ್ಕದ ಆ್ಯಪಲ್ ಸ್ಟೋರ್ಗೆ ಬೇಟಿ ನೀಡಿ. ಅವರು ನಿಮ್ಮ ಐಫೋನನ್ನು ರನ್ ಮಾಡಿ ಇದು ಫೇಕ್ ಅಥವಾ ರಿಯಲ್ ಎಂಬುದನ್ನು ತಿಳಯಲು ಸಹಾಯ ಮಾಡುತ್ತಾರೆ.
7 / 9
ನೀವು ದುಬಾರಿ ಬೆಲೆಯ ಐಫೋನ್ ಖರೀದಿಸಬೇಕು ಎಂದುಕೊಂಡಿದ್ದರೆ ಕಡಿಮೆ ಬೆಲೆ ಇದೆ ಎಂದು ಸಿಕ್ಕಸಿಕ್ಕಲ್ಲಿ ಪಡೆದುಕೊಳ್ಳಬೇಡಿ. ನಂಬಿಕೆಗೆ ಅರ್ಹವಾದ ತಾಣ ಅಥವಾ ರಿಟೆಲ್ ಸ್ಟೋರ್ಗಳನ್ನು ಆಯ್ಕೆ ಮಾಡುವುದು ಉತ್ತಮ.
8 / 9
ಅಂತೆಯೆ ಹೆಚ್ಚಿನ ಫೇಕ್ ಮೊಬೈಲ್ಗಳು ಅಥವಾ ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳು ತಪ್ಪಾದ ಅಕ್ಷರವನ್ನು ಹೊಂದಿರುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೆಳಕಿಗೆ ಬರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇಲ್ಲಿ ಕೆಲವು ಉದಾಹರಣೆಗಳು ಕೆಳಗಡೆ ಇದೆ.
9 / 9
Samsung = Sammsung or Samsang or Samsong, iPhone = iPone or iPhoon, Huawei= Hauwei or Huawai, Xiaomi = Xaiomi or Xioami.Samsung = Sammsung or Samsang or Samsong, iPhone = iPone or iPhoon, Huawei= Hauwei or Huawai, Xiaomi = Xaiomi or Xioami.